ಹುಕ್ಕಾ ಬಾರ್​ನಲ್ಲಿ ಡಿಶುಂ ಡಿಶುಂ: ಗಲಾಟೆ ನಡುವೆ ಯುವತಿ ಸುಸ್ತೋ ಸುಸ್ತು- ಸಿಸಿಟಿವಿಯಲ್ಲಿ ದೃಶ್ಯ ಸೆರೆ

hukkabar
Published on

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕರ ಗ್ಯಾಂಗ್ ಬಡಿದಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಬಡಿದಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಾಝಿನ್ಸ್ ಹುಕ್ಕಾ ಬಾರ್​ಗೆ ತೆರಳಿದ್ದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಎರಡು ಗುಂಪುಗಳು ನಡುವೆ ಮಾರಾಮಾರಿ ಶುರುವಾಗಿದೆ.

ಬಳಿಕ ಹುಕ್ಕಾ ಬಾರ್ ನಿಂದ ಹೊರಬಂದ ಎರಡು ಗುಂಪಿನಲ್ಲಿ 20ಕ್ಕೂ ಅದಿಕ ಯುವಕರು ಇದ್ದರು. ದೊಮ್ಮಸಂದ್ರದ ಒಂದು ಗುಂಪು ಹಾಗೂ ಎಂ.ಎಸ್ ರಾಮಯ್ಯ ಲೇಔಟ್​ನ ಇನ್ನೊಂದು ಗುಂಪುಗಳ ನಡುವೆ ಈ ಗಲಾಟೆ ನಡೆದಿದ್ದು, ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಗುಂಪು ಘರ್ಷಣೆ ನಡೆಸುತ್ತಿದ್ದ ವೇಳೆ ಯುವಕನ ಜತೆಗೆ ಯುವತಿಯೊಬ್ಬಳು ಬಂದಿದ್ದಳು. ಏಕಾಏಕಿ ಘರ್ಷಣೆ ನಡೆದಿದ್ದರಂತೆ ಏನು ಮಾಡುವುದು ಎಂದು ತಿಳಿಯದೇ ಯುವತಿ ಪೇಚಿಗೆ ಸಿಲುಕಿದ್ದಾಳೆ. ಎತ್ತ ಹೋಗುವುದು ತಿಳಿಯದೇ ಸುಸ್ತಾಗಿದ್ದಾಳೆ. ಈ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ.

ಮಾರಾಮಾರಿ ವಿಡಿಯೋ ಇಲ್ಲಿದೆ ನೋಡಿ:  https://www.facebook.com/VVani4U/videos/1285771075133680

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net