

ನವದೆಹಲಿ : ಈರುಳ್ಳಿ ಸಲಾಡ್ಗಾಗಿ ಕಾರ್ಮಿಕನೊಬ್ಬ ಮತ್ತೊಬ್ಬ ಕಾರ್ಮಿಕನನ್ನು ಚಾಕುವಿನಿಂದ ಚುಚ್ಚಿ ಭಯಾನಕ ರೀತಿಯಲ್ಲಿ ಗಾಯಗೊಳಿಸಿದ ಘಟನೆ ದಕ್ಷಿಣ ದೆಹಲಿಯ ಫತೇಪುರ ಬೇರಿಯಲ್ಲಿ ನಡೆದಿದೆ.
ದೆಹಲಿಯಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರ ನಡುವೆ ಈರುಳ್ಳಿಗಾಗಿ ನಡೆದ ಜಗಳ ಇದಾಗಿದೆ.
ಡಿಸೆಂಬರ್ 8ರಂದು ಈ ಘಟನೆ ನಡೆದಿದೆ. ಆರೋಪಿ ರಿಯಾಸಾತ್ ಅಲಿ (59) ಮತ್ತು ಪವನ್ (60) ಅವರು ದಕ್ಷಿಣದ ದೆಹಲಿಯ ಫತೇಪುರ್ ಬೇರಿಯ ಎಸ್‌ಬಿ ಫಾರ್ಮ್‌ಗೆ ಗೋಡೌನ್‌ನಲ್ಲಿ ಕೆಲಸ ಮಾಡಲು ಹೋಗಿದ್ದರು. ಕೆಲಸದ ನಂತರ, ಇಬ್ಬರೂ ಇತರರೊಂದಿಗೆ ರಾತ್ರಿ ಊಟಕ್ಕೆ ಕುಳಿತಿದ್ದಾರೆ. ಈ ಸಮಯದಲ್ಲಿ ಈರುಳ್ಳಿ ಸಲಾಡ್ ಹಂಚಿಕೊಳ್ಳುವ ಬಗ್ಗೆ ಅಲಿ ಮತ್ತು ಪವನ್ ನಡುವೆ ತೀವ್ರ ವಾಗ್ವಾದ ನಡೆದಿದೆ,
ಹೆಚ್ಚುವರಿ ಈರುಳ್ಳಿ ಕೇಳಿದ್ದಾನೆ. ಆದರೆ ಅದಾಗಲೇ ಈರುಳ್ಳಿ ಖರ್ಚಾಗಿದ್ದರಿಂದ ಈರುಳ್ಳಿ ಉಳಿದಿಲ್ಲ ಎಂದು ಪವನ್ ಹೇಳಿದ್ದಾರೆ. ಕೋಪದಿಂದ, ಅಲಿ ತನ್ನ ಪಕ್ಕದಲ್ಲಿ ಇದ್ದ ಅಡುಗೆ ಚಾಕುವಿನಿಂದ ಪವನನ್ನು ಅನೇಕ ಬಾರಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಪವನ್ ಬಿದ್ದಾಗ, ಅಲಿ ಅಲ್ಲಿಂತ ಹೋಗಿದ್ದಾನೆ. ನಂತರ ಸ್ಥಳೀಯರು ಬಂದು ನೋಡಿದಾಗ, ಪೊಲೀಸರಿಗೆ ಕರೆ ಮಾಡಿದ್ದಾರೆ. ಆಸ್ಪತ್ರೆಗೆ ಪವನ್ ಅವರನ್ನು ಸಾಗಿಸಲಾಯಿತು. ಚಾಕುವಿನ ಇರಿತ ಎಷ್ಟು ಇತ್ತೆಂದರೆ ಪವನ್ ಅವರ ಕರುಳು ಮತ್ತು ದೇಹದ ಇತರ ಅಂಗಗಳು ಹೊರಕ್ಕೆ ಬಂದಿದ್ದವು.
ವೈದ್ಯರು ಚಿಕಿತ್ಸೆ ನೀಡಿದ್ದು, ಸದ್ಯ ಪವನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಸ್ಥಳದ ಸಮೀಪವಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ದಕ್ಷಿಣ ಪೊಲೀಸ್ ಉಪ ಆಯುಕ್ತ (ದಕ್ಷಿಣ) ಅತುಲ್ ಕುಮಾರ್ ಠಾಕೂರ್ ಹೇಳಿದ್ದಾರೆ.