

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕರೊನಾ ಪಾಸಿಟಿವ್ ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದೇ 4ರಂದು ಕಲಬುರಗಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿಸಿದ್ದ ಜೆಎಂ ಕೊರಬು ಅವರ ಕೋವಿಡ್ ವರದಿ ಪಾಸಿಟಿವ್ ಬಂದಿತ್ತು. ಅದಾಗಲೇ ಶಿವಕುಮಾರ್ ಸೇರಿದಂತೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಭೀತಿ ಶುರುವಾಗಿತ್ತು.
ಆದರೆ ಇದೀಗ ಡಿ.ಕೆ.ಶಿವಕುಮಾರ್ ಅವರಿಗೆ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಆಗಸ್ಟ್ 04 ರಂದು ಗಾಣಗಾಪುರದಲ್ಲಿ ದತ್ತ ದರ್ಶನ ಪಡೆದುಕೊಂಡ ನಂತರ ಕಲಬುರ್ಗಿಗೆ ವಾಪಸಾಗಿದ್ದ ಡಿಕೆಶಿವಕುಮಾರ್ ಅವರು, ನಾನು ಯಾರ ಜೊತೆಯೂ ಪ್ರೈಮರಿ ಕಾಂಟ್ಯಾಕ್ಟ್ ನಲ್ಲಿಲ್ಲ. ಇದೆಲ್ಲ ಗಾಳಿ ಸುದ್ದಿ ಎಂದಿದ್ದರು.
ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಮಗೂ ಸೋಂಕಿನ ಭೀತಿ ಇದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದ್ದಾಗ, ನಾನು ಫಿಟ್ ಆ್ಯಂಡ್ ಫೈನ್ ಇದೇನೆ ಎಂದಿದ್ದರು. ಸಮಯಕ್ಕೆ ತಕ್ಕಂತೆ ನಾನು ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ. ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿ ಡಿಕೆಶಿ ಕೊರಳಲ್ಲಿನ ಆಸ್ಪತ್ರೆ ಐಡಿ ಕಾಡ್೯ ಕೂಢ ತೋರಿಸಿದ್ದರು. ಯಾರು ಭಯ ಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.