ದೆಹಲಿಯ ಏಮ್ಸ್‌ನಲ್ಲಿ ಮಧ್ಯರಾತ್ರಿ ಬೆಂಕಿ ಅವಘಡ- 22 ಅಗ್ನಿಶಾಮಕ ದಳದಿಂದ ಅಗ್ನಿ ನಿಯಂತ್ರಣ

AIIMS
Published on

ನವದೆಹಲಿ: ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಆಸ್ಪತ್ರೆಯ ಮಧ್ಯರಾತ್ರಿ ಬೆಂಕಿ ಅವಘಡ ಸಂಭವಿಸಿದೆ.

9 ನೇ ಮಹಡಿಯಲ್ಲಿ ಇದು ಕಾಣಿಸಿಕೊಂಡಿದೆ. ಈ ದುರಂತ ಸಂಭವಿಸಿದಾಗ 9 ನೇ ಮಹಡಿಯಲ್ಲಿದ್ದ ಜಾಗ ಖಾಲಿ ಇತ್ತು. ಮಹಡಿಯಲ್ಲಿ ಯಾವುದೇ ರೋಗಿಗಳೂ ಇಲ್ಲದ ಕಾರಣ ಯಾರಿಗೂ ಜೀವ ಹಾನಿ, ಗಾಯಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ.

ರೆಫ್ರಿಡ್ಜರೇಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಕಾರಣಾದಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಈ ಮಹಡಿಯಲ್ಲಿ ರೋಗನಿರ್ಣಯ ಪ್ರಯೋಗಾಲಯ, ಪರೀಕ್ಷಾ ವಿಭಾಗಗಳಿವೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. ಅಗ್ನಿ ಶಾಮಕ ದಳದ 22 ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಬೆಂಕಿ ನಿಯಂತ್ರಿಸುವಲ್ಲಿ ಸಫಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net