ಇದು ಜಗತ್ತಿನ ಬೃಹತ್‌ ಅಯಸ್ಕಾಂತ- ವಿಮಾನವನ್ನೇ ಆರು ಅಡಿ ಎತ್ತರ ನಿಲ್ಲಿಸಬಲ್ಲುದು!

magnet
Published on

ಪ್ಯಾರಿಸ್‌: ಇದು ಜಗತ್ತಿನ ಬೃಹತ್‌ ಆಯಸ್ಕಾಂತ. 59 ಅಡಿ ಎತ್ತರ ಮತ್ತು 14 ಅಡಿ ಅಗಲದ ಈ ಆಯಸ್ಕಾಂತವು ವಿಮಾನವನ್ನು ನೆಲದಿಂದ ಆರು ಅಡಿ ಎತ್ತರ ಸೆಳೆದು ನಿಲ್ಲಿಸಬಲ್ಲ ಶಕ್ತಿಯನ್ನು ಹೊಂದಿದೆ!

ಫ್ರಾನ್ಸ್‌ನ ದಕ್ಷಿಣ ಭಾಗದ ಸೇಂಟ್‌ ಪೌಲ್‌ ಡ್ಯೂರಾನ್ಸ್‌ ಎಂಬಲ್ಲಿ ಇದನ್ನು ನಿರ್ಮಿಸಲಾಗುತ್ತಿದ್ದು, ಮುಕ್ಕಾಲು ಭಾಗ ಪೂರ್ಣಗೊಂಡಿದೆ. ಅದಕ್ಕೆ “ಸೆಂಟ್ರಲ್‌ ಸೊಲೊನಾಯ್ಡ’ ಎಂದು ಹೆಸರು ಇಡಲಾಗಿದೆ.

ಭೂಮಿಯ ಗುರುತ್ವಾಕರ್ಷಣ ಶಕ್ತಿಗಿಂತ 2,80,000 ಪಾಲು ಹೆಚ್ಚಿನ ಶಕ್ತಿಯನ್ನು ಹೊಂದಿರುವ ಈ ಆಯಸ್ಕಾಂತ ಇದಾಗಿದೆ. ಫ್ಯೂಷನ್‌ ಎನರ್ಜಿ ಸೃಷ್ಟಿಸುವ ನಿಟ್ಟಿನಲ್ಲಿ ಅದನ್ನು ಬಳಕೆ ಮಾಡಲಾಗುತ್ತದೆ ಎಂದು ಅದನ್ನು ವಿನ್ಯಾಸಗೊಳಿಸಿ, ನಿರ್ಮಾಣದ ಹೊಣೆ ಹೊತ್ತುಕೊಂಡಿರುವ ಜನರಲ್‌ ಆಟೋಮಿಕ್ಸ್‌ ಎಂಬ ಸಂಸ್ಥೆ ಹೇಳಿದೆ. ಜಗತ್ತಿನ ಅತ್ಯಂತ ದೊಡ್ಡ ಬದಲಿ ಇಂಧನ ಯೋಜನೆ (ಐಟಿಇಆರ್‌) ಇದಾಗಿದ್ದು, ಭಾರತ, ಚೀನ, ಐರೋಪ್ಯ ಒಕ್ಕೂಟ, ಚೀನ, ಅಮೆರಿಕ, ಜಪಾನ್‌, ಕೊರಿಯಾ ಈ ಯೋಜನೆಯಲ್ಲಿ ಪಾಲುದಾರಿಕೆ ಹೊಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net