

ಅಥಣಿ: ಕೆಲ ದಿನಗಳ ಹಿಂದಷ್ಟೇ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅಣ್ಣನ ಮಗ ವಿನೋದ ಕೋವಿಡ್‌ಗೆ ಮೃತಪಟ್ಟಿದ್ದರು. ಇದರ ನೋವು ಆರುವ ಮುನ್ನವೇ ಮತ್ತೊಂದು ಆಘಾತ ಈ ಕುಟುಂಬಕ್ಕಾಗಿದ್ದು, ಇದೀಗ ಇವರ ಸಹೋದರ ಕರೊನಾಗೆ ಬಲಿಯಾಗಿದ್ದಾರೆ.
ಇಂದು ಬೆಳಗ್ಗೆ ಲಕ್ಷ್ಮಣ ಸವದಿ ಅವರ ಅಣ್ಣ ದುಂಡಪ್ಪನವರು ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಅಥಣಿ ತಾಲೂಕು ಆಡಳಿತದಿಂದ ಸ್ಥಾಪಿಸಲಾದ ಕೋವಿಡ್ ಸೆಂಟರ್ ಉದ್ಘಾಟನೆಗೆ ಹಾಜರಾಗಿದ್ದ ಲಕ್ಷ್ಮಣ ಸವದಿ ಅವರು ಇಬ್ಬರನ್ನೂ ನೆನೆದು ಕಣ್ಣೀರು ಸುರಿಸಿದರು. ಬೆಳಗ್ಗೆ ಸಹೋದರ ತೀರಿಹೋಗಿರುವ ಕುರಿತು ವಿವರಣೆ ನೀಡಿದ ಡಿಸಿಎಂ, ಈ ಹಂತದಲ್ಲಿ ಬಹಳ ಭಾವುಕರಾದರು. ಕೆಲ ದಿನಗಳ ಹಿಂದೆ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಅವರ ಪುತ್ರ ವಿನೋದ ಪರಪ್ಪ (36) ಮೃತಪಟ್ಟಿದ್ದರು.
ನಂತರ ಮಾತನಾಡಿದ ಅವರು, ಇಂಥ ಸ್ಥಿತಿ ಯಾರಿಗೂ ಬರಬಾರದು ಎಂದು ಹೇಳುವ ಮೂಲಕ 50 ಲಕ್ಷ ರೂಪಾಯಿಗಳಷ್ಟು ಕೋವಿಡ್ ಚಿಕಿತ್ಸೆಯ ಸಲಕರಣೆಗಳನ್ನು ಸ್ವಂತ ಖರ್ಚಿನಲ್ಲಿ ನೀಡಿದರು.