More

    ಸೋನಿಯಾಗೆ ಹೆರಿಗೆ ಮಾಡಿಸಿದ್ದ ಸ್ತ್ರೀರೋಗ ತಜ್ಞೆ ಕೋವಿಡ್‌ನಿಂದ ಸಾವು- ಎರಡೂ ಲಸಿಕೆ ಪಡೆದಿದ್ದ ವೈದ್ಯೆ

    ನವದೆಹಲಿ: ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಸೋನಿಯಾ ಗಾಂಧಿ ಅವರಿಗೆ ಎರಡೂ ಬಾರಿ ಹೆರಿಗೆ ಮಾಡಿಸಿದ್ದ ಪ್ರಖ್ಯಾತ ಸ್ತ್ರೀರೋಗ ತಜ್ಞೆ ಡಾ.ಎಸ್. ಕೆ ಭಂಡಾರಿ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

    ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಇವರಿಗೆ 86 ವರ್ಷ ವಯಸ್ಸಾಗಿತ್ತು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವೈದ್ಯೆಯನ್ನು ಎರಡು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಪರೀಕ್ಷೆ ನಡೆಸಿದ್ದಾರೆ ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಸರ್ ಗಂಗಾ ರಾಮ್ ಆಸ್ಪತ್ರೆ ಅಧ್ಯಕ್ಷ ಡಾ.ಡಿಎಸ್ ರಾಣಾ ಮಾಹಿತಿ ನೀಡಿದ್ದಾರೆ. ಇವರು ಕೋವಿಡ್‌ನ ಎರಡೂ ಲಸಿಕೆ ಪಡೆದುಕೊಂಡಿದ್ದರು. ಆದರೂ ಮಹಾಮಾರಿ ಅವರನ್ನು ಬಿಡಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

    ಅವರ ಪತಿ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದು, ಇವರಿಗೂ ಸೋಂಕು ದೃಢಪಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿಯೂ ಗಂಭೀರವಾಗಿರುವ ಕಾರಣ, ಇನ್ನೂ ಪತ್ನಿಯ ಸಾವಿನ ಸುದ್ದಿ ತಿಳಿಸಿಲ್ಲ ಎನ್ನಲಾಗಿದೆ. ಇನ್ನು, ವೈದ್ಯೆಯ ನಿಧನಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಸಂತಾಪ ಸೂಚಿಸಿದ್ದಾರೆ.

    ಎಮರ್ಜೆನ್ಸಿ ಇದೆ, ಅರ್ಜೆಂಟಾಗಿ ಸೆಕ್ಸ್‌ಗೆ ಹೋಗ್ಬೇಕು, ಇ- ಪಾಸ್‌ ಕೊಡಿ ಎಂದು ಅರ್ಜಿ: ಮುಂದಾದದ್ದೇ ರೋಚಕ…

    ನನಗಿದ್ದ ಒಂದೇ ಶ್ವಾಸಕೋಶಕ್ಕೆ ಅಂಟಿದ್ದ ಸೋಂಕನ್ನು ಯೋಗದಿಂದ ಗೆದ್ದೆ ಎಂದ ಕರೊನಾ ವಾರಿಯರ್‌!

    ಕರೊನಾ ನಡುವೆ ನಿಗೂಢ ರೋಗ: ಕಲಬುರಗಿಯ ಒಂದೇ ಗ್ರಾಮದ 26 ಮಂದಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts