ಕರೊನಾ ನಡುವೆ ನಿಗೂಢ ರೋಗ: ಕಲಬುರಗಿಯ ಒಂದೇ ಗ್ರಾಮದ 26 ಮಂದಿ ಸಾವು

GLB
Published on

ಕಲಬುರಗಿ: ಕರೊನಾದಿಂದ ಜನಜೀವನ ತತ್ತರಿಸಿ ಹೋಗಿರುವ ನಡುವೆಯೇ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ‌ ಮುನ್ನಹಳ್ಳಿ ಗ್ರಾಮದಲ್ಲಿ ವಿಚಿತ್ರ ರೋಗ ಕಾಣಿಸಿಕೊಂಡಿದೆ.

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ‌ ಮುನ್ನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದ ಎರಡು ವಾರಗಳಲ್ಲಿ ಒಂದೇ ಗ್ರಾಮದ 26 ಜನರ ನಿಗೂಢವಾಗಿ ಮೃತಪಟ್ಟಿದ್ದಾರೆ. ಏಕಾಏಕಿ ನರಳಾಡಿ ಜನರ‌ ಸರಣಿ ಸಾವು ಸಂಭವಿಸಿದೆ!

ನರಳಿ ಸತ್ತವರಲ್ಲಿ ಬಹುತೇಕ ಮಂದಿ ವೃದ್ಧರಿದ್ದರೆ ಯುವಕರು ಕೂಡ ಮೃತಪಟ್ಟಿದ್ದಾರೆ. ಅಚ್ಚರಿ ಎಂದರೆ, ಈ ಗ್ರಾಮದಲ್ಲಿ ಹಲವರಿಗೆ ಶೀತ, ಕೆಮ್ಮು, ಜ್ವರ ಬಾಧಿಸುತ್ತಿದ್ದು, ಆತಂಕದಲ್ಲಿ ಗ್ರಾಮಸ್ಥರಿದ್ದಾರೆ.

ಗ್ರಾಮದಲ್ಲಿ ಹೀಗೆ ಸರಣಿ ಸಾವುಗಳಾದರೂ ಗ್ರಾಮಕ್ಕೆ ಇದುವರೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ಕೊಡದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗೆ ನರಳಿ ನರಳಿ ಮೃತಪಟ್ಟಿರುವುದು ಕೋವಿಡ್‌ನಿಂದಲಾ ಅಥವಾ ಇನ್ನೇನು ಸಮಸ್ಯೆ ಎದುರಾಗಿದೆಯೋ ಎಂದು ನೋಡಲು ಕೂಡ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net