More

    ಎಮರ್ಜೆನ್ಸಿ ಇದೆ, ಅರ್ಜೆಂಟಾಗಿ ಸೆಕ್ಸ್‌ಗೆ ಹೋಗ್ಬೇಕು, ಇ- ಪಾಸ್‌ ಕೊಡಿ ಎಂದು ಅರ್ಜಿ: ಮುಂದಾದದ್ದೇ ರೋಚಕ…

    ಕನ್ನೂರು: ಕರೊನಾದ ಹಿನ್ನೆಲೆಯಲ್ಲಿ ಬಹುತೇಕ ರಾಜ್ಯಗಳು ಲಾಕ್‌ಡೌನ್‌ ಮಾಡಿದ್ದರೆ, ಇನ್ನು ಕೆಲವು ರಾಜ್ಯಗಳು ಕರ್ಫ್ಯೂ ವಿಧಿಸಿವೆ. ಕೆಲವು ರಾಜ್ಯಗಳಲ್ಲಿ ಒಂದೆಡೆಯಿಂದ ಇನ್ನೊಂದೆಡೆ ಹೋಗಲು ಇ-ಪಾಸ್‌ ನೀಡಲಾಗುತ್ತಿದೆ.

    ಅದೇ ರೀತಿ ಕೇರಳದಲ್ಲಿ ಕೂಡ ಓಡಾಟಕ್ಕೆ ಇ-ಪಾಸ್‌ ಕಡ್ಡಾಯ ಮಾಡಲಾಗಿದೆ. ತುರ್ತಾಗಿ ಹೋಗಬೇಕಾದ ಸ್ಥಿತಿಯಲ್ಲಿ ಪೊಲೀಸ್‌ ಇಲಾಖೆಯಿಂದ ಇ- ಪಾಸ್‌ ಪಡೆದುಕೊಳ್ಳುವುದು ಕಡ್ಡಾಯ. ಅದಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅಷ್ಟು ಎಮರ್ಜೆನ್ಸಿ ಏಕೆ ಇದೆ ಎಂಬ ಬಗ್ಗೆ ಅರ್ಜಿಯಲ್ಲಿ ವಿಷಯ ತಿಳಿಸಬೇಕು.

    ಹೀಗೆ ಏನೇನೋ ಎಮರ್ಜೆನ್ಸಿ ಕಾರಣ ಹೇಳಿಕೊಂಡು ಸಹಸ್ರಾರು ಅರ್ಜಿಗಳನ್ನು ಪೊಲೀಸ್‌ ಇಲಾಖೆಗೆ ಬರುತ್ತಿವೆ. ಅವುಗಳಲ್ಲಿ ಹಲವು ನಿಜವೇ ಆಗಿದ್ದರೂ, ಇನ್ನು ಕೆಲವು ಫೇಕ್‌ ಕಾರಣಗಳೂ ಆಗಿರುತ್ತವೆ. ಆದರೆ ಪೊಲೀಸರು ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ಅಗತ್ಯ ಇರುವವರಿಗೆ ಇ- ಪಾಸ್‌ ನೀಡುತ್ತಾರೆ.

    ಅದೇ ರೀತಿ ಕೇರಳದ ಕನ್ನೂರು ಪೊಲೀಸರು ಇ-ಪಾಸ್‌ಗೆ ಸಲ್ಲಿಸಿರುವ ಅರ್ಜಿಯೊಂದರಲ್ಲಿ ಇರುವ ಕಾರಣ ಕೇಳಿ ಕಕ್ಕಾಬಿಕ್ಕಿಯಾದರು. ಏಕೆಂದರೆ ಅದರಲ್ಲಿ ‘ನಾನು ಸೆಕ್ಸ್​​ಗಾಗಿ ಮನೆಯಿಂದ ಆಚೆ ಬರಬೇಕು. ದಯವಿಟ್ಟು ಅನುಮತಿ ಕೊಡಿ’ ಎಂದು ಮನವಿ ಮಾಡಿಕೊಳ್ಳಲಾಗಿತ್ತು.

    ಇದನ್ನು ನೋಡಿದ ಪೊಲೀಸರಿಗೆ ಆ ತಲೆನೋವಿನ ನಡುವೆಯೇ ನಗು ಬಂದರೆ, ಅದೇ ವೇಳೆ ಕೆಲವರ ಸಿಟ್ಟು ಕೂಡ ನೆತ್ತಿಗೇರಿತು. ಈ ರೀತಿ ಬೇಕಂತಲೇ ಮನವಿ ಸಲ್ಲಿಸಿದ್ದವನಿಗೆ ತಕ್ಕ ಶಾಸ್ತಿ ಮಾಡಬೇಕು ಎಂದುಕೊಂಡ ಪೊಲೀಸರು ಅವನ ಬೆನ್ನುಹತ್ತಿ ಹೋದರು.

    ಇ-ಮೇಲ್‌ ಐಡಿ ಮೂಲಕ ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆಸಿಕೊಂಡರು. ತನಗೆ ಇ-ಪಾಸ್‌ ಸಿಗುತ್ತದೆ ಎಂಬ ಖುಷಿಯಲ್ಲಿ ಆ ಆಸಾಮಿ ಬಂದ. ಅವನನ್ನು ನೋಡಿ ರೊಚ್ಚಿಗೆದ್ದ ಪೊಲೀಸರು ಇಂಥ ಸೀರಿಯಸ್‌ ಸಮಯದಲ್ಲಿ ಇದೆಂಥ ಕಿಡಿಗೇಡಿತನ ಎಂದು ಗದರಿದ್ದಾರೆ. ಆಗ ಆತ ಅದು ನನ್ನದೇ ಮೇಲ್‌. ಆದರೆ ನಾನು ಹಾಗೆ ಬರೆದೇ ಇಲ್ಲ ಎಂದಿದ್ದಾನೆ.

    ಆಮೇಲೆ ಅದನ್ನು ಅವನಿಗೆ ತೋರಿಸಿದಾಗ ಆ ವ್ಯಕ್ತಿ ಅಯ್ಯೋ ಸಾರ್‌…. ಇದು ನಾನೇ ಟೈಪ್‌ ಮಾಡಿದ್ದು… ಆದರೆ ನನಗೆ ಸೆಕ್ಸ್‌ ಉದ್ದೇಶವಿರಲಿಲ್ಲ ಎಂದಿದ್ದಾನೆ. ಸರಿಯಾಗಿ ಹೇಳುವಂತೆ ಕೇಳಿದಾಗ, ನನಗೆ ಆರು ಗಂಟೆಗೆ (ಸಿಕ್ಸ್‌ ಒ ಕ್ಲಾಕ್‌) ಹೊರಡು ಪಾಸ್‌ ಬೇಕಿತ್ತು. ಸಿಕ್ಸ್‌ ಬದಲು ಸೆಕ್ಸ್‌ ಆಗಿದೆ. ನಾನು ಇನ್ನೊಮ್ಮೆ ನೋಡದೇ ಹಾಗೆಯೇ ಕಳಿಸಿಬಿಟ್ಟೆ. ನನಗೆ ಪಾಸ್‌ ತುರ್ತಾಗಿ ಬೇಕಿದೆ ಎಂದು ಪೊಲೀಸರ ಎದುರು ಗೋಗರೆದಿದ್ದಾನೆ. ನಂತರ ಆತ ಹೇಳುತ್ತಿರುವುದು ನಿಜ ಎಂದು ತೋಚಿದ ಪೊಲೀಸರು ಆತನನ್ನು ಬಿಟ್ಟಿದ್ದಾರೆ.

    ಜೀವನ ಪರ್ಯಂತ ಮದ್ವೆನೇ ಆಗಲ್ಲ ಎಂದು ಸಿನಿಮಾ ಮಾದರಿಯಲ್ಲಿ ಧಮ್ಕಿ ಹಾಕಬಹುದಿತ್ತಲ್ವಾ?

    ಅಸಹಿಷ್ಣುತೆಯನ್ನು ಮುಸ್ಲಿಂ ಸಮುದಾಯಗಳು ತ್ಯಜಿಸಬೇಕು- ಹೈಕೋರ್ಟ್‌

    ಕರೊನಾ ವೈರಸ್‌ 3ನೇ ಅಲೆ ತಡೆಯಬೇಕೆ? ಹಾಗಿದ್ದರೆ ಯಜ್ಞ ಮಾಡಿಸಿ ಎಂದ ಸಚಿವೆ ಉಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts