More

    ಋತುಚಕ್ರದಿಂದಲೇ ಜೀವ ಉತ್ಪತ್ತಿ ಸಾಧ್ಯ

    ಬಾಗಲಕೋಟೆ: ಆಧುನಿಕ ಸಮಾಜದಲ್ಲಿಂದು ಪ್ರತಿಯೊಬ್ಬ ಹೆಣ್ಣುಮಕ್ಕಳು ನೈಸರ್ಗಿಕ ಕ್ರಿಯೆಯಾದ ಋತುಚಕ್ರದಿಂದಲೇ ಜೀವ ಉತ್ಪತ್ತಿ ಸಾಧ್ಯ. ಇಂದಿನ ಸಮಾಜದಲ್ಲಿ ಋತುಚಕ್ರದ ಬಗ್ಗೆ ಇರುವ ಮೂಡನಂಬಿಕೆ, ಮೂಡ ಸಂಪ್ರದಾಯಗಳನ್ನು ಬಿಟ್ಟು ಋತುಚಕ್ರದ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕೆಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ದಿವ್ಯಾ ಮಿರ್ಜಿ ಅವರು ಹೇಳಿದರು.

    ಅವರು ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ , ಮಹಿಳಾ ಸಬಲೀಕರಣ ಘಟಕ ಮತ್ತು ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಆಶ್ರಯದಲ್ಲಿ ಋತುಚಕ್ರ ನೈರ್ಮಲ್ಯ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

    ಕಾರ್ಯಕ್ರಮದಲ್ಲಿ ಪಶುಪತಿ ಜಿಗಜಿನ್ನಿ ಅವರು ಮಾತನಾಡಿ ಮಾನಸಿಕ ಒತ್ತಡದದ ಕಾರಣ ಹೆಣ್ಣುಮಕ್ಕಳಲ್ಲಿ ಕಂಡು ಬರುವ ಸ್ಕಿಜೋಫ್ರೀನಿಯಾ ರೋಗದ ಲಕ್ಷಣ ಹಾಗೂ ಪರಿಹಾರಗಳು ಕುರಿತು ಮಾಹಿತಿ ನೀಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವ‌ಹಿಸಿ ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಅವರು ಮಾತನಾಡಿ ವಿಜ್ಞಾನ ಯುಗದಲ್ಲಿ ಮಹಿಳೆಯರು ಋತುಚಕ್ರದ ನೈರ್ಮಲ್ಯದ ಬಗೆಗೆ ಅರಿತುಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಪ್ರೊ.ಅಜೀತ್ ನಾಗರಾಳೆ, ಡಾ.ಸುಮಂಗಲಾ ಮೇಟಿ, ಡಾ.ಮೂಬಿನ್ ಬೆಳಗಾಂ, ಡಾ.ಸುಮನ್ ಮುಚಖಂಡಿ, ಪ್ರೊ.ಪರಸಪ್ಪ ತಳವಾರ ಮತ್ತು ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು

    ಕಾರ್ಯಕ್ರಮದಲ್ಲಿ ರೇಂಜರ್ ಐಶ್ವರ್ಯ ಹಾಗೂ ಸಂಗಡಿಗರು ಪ್ರಾರ್ಥಿಸಿದರು,  ಡಾ.ಮೂಬಿನ್ ಬೆಳಗಾವಿ ಸ್ವಾಗತಿಸಿದರು, ಡಾ.ಸುಮಂಗಲಾ ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋವರ್ ಆದರ್ಶ ನಿರೂಪಿಸಿದರು. ಡಾ‌.ಸುಮನ್ ಮುಚಖಂಡಿ ವಂದಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts