More

    ಊಟ ಮಾಡುವಾಗ ಟೀ, ಕಾಫಿ ಕೂಡ ಕುಡಿಯುತ್ತೀರಾ? ಅನಾರೋಗ್ಯಕ್ಕೆ ತುತ್ತಾಗಬಹುದು ಎಚ್ಚರ….

    ಬೆಂಗಳೂರು: ಚಹಾ ಮತ್ತು ಕಾಫಿ ಕುಡಿಯುವುದು ಎಂದರೆ ಒಂದೊಳ್ಳೆಯ ರಿಫ್ರೆಶ್ಮೆಂಟ್ ಇದ್ದಂತೆ ಅಂತ ಹೇಳಿದರೆ ಸುಳ್ಳಾಗುವುದಿಲ್ಲ. ಕಚೇರಿ ಮತ್ತು ಇತರ ಕೆಲಸಗಳಲ್ಲಿ ನಿರತರಾಗಿರುವ ಜನರು  ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಜನರು ಖಂಡಿತವಾಗಿಯೂ ತಮ್ಮ ಆಹಾರದೊಂದಿಗೆ ಚಹಾ ಅಥವಾ ಕಾಫಿಯನ್ನು ಬಯಸುತ್ತಾರೆ.

    ಸಾಮಾನ್ಯವಾಗಿ ಜನರು ಕಾಫಿ ಅಥವಾ ಚಹಾದೊಂದಿಗೆ ಏನನ್ನಾದರೂ ತಿನ್ನಲು ಇಷ್ಟಪಡುತ್ತಾರೆ. ಕೆಲವರು ತಿಂಡಿ ತಿನ್ನುತ್ತಾರೆ, ಈ ಎರಡು ಪಾನೀಯಗಳಿಲ್ಲದೆ ಬೆಳಗಿನ ಉಪಾಹಾರವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಆದರೆ ಆಹಾರದೊಂದಿಗೆ ಟೀ ಅಥವಾ ಕಾಫಿ ಕುಡಿಯುವುದು ಆರೋಗ್ಯದ ಜೊತೆ ಆಟ ಆಡಿದಂತೆ ಎನ್ನುತ್ತಾರೆ ಪೌಷ್ಟಿಕತಜ್ಞರು.

    ನೀವು ಆಹಾರದೊಂದಿಗೆ ಚಹಾ ಅಥವಾ ಕಾಫಿ ಕುಡಿಯುತ್ತಿದ್ದರೆ, ನೀವು ತಪ್ಪು ಮಾಡುತ್ತಿದ್ದೀರಿ. ಆಹಾರದೊಂದಿಗೆ ಟೀ ಅಥವಾ ಕಾಫಿ ಕುಡಿಯುವುದರಿಂದ ಆಹಾರದಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಸರಿಯಾಗಿ ಹೀರಲ್ಪಡುವುದಿಲ್ಲ ಎನ್ನುತ್ತಾರೆ ತಜ್ಞರು.
    ವಿಶೇಷವಾಗಿ ಚಹಾ ಮತ್ತು ಕಾಫಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಪಾಲಿಫಿನಾಲ್‌ಗಳು ಮತ್ತು ಟ್ಯಾನಿನ್‌ಗಳಂತಹ ಸಂಯುಕ್ತಗಳು ಇವೆರಡರಲ್ಲೂ ಕಂಡುಬರುತ್ತವೆ. ಈ ಎರಡನ್ನೂ ಆಹಾರದೊಂದಿಗೆ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ, ಆದರೆ ಅವುಗಳಿಂದ ದೂರವಿರುವುದು ಸಹ ಅಷ್ಟು ಸುಲಭವಲ್ಲ.
    ಚಹಾ ಮತ್ತು ಕಾಫಿ ಕುಡಿಯಲು ಸರಿಯಾದ ಸಮಯ ಯಾವುದು ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ. ಖಾಲಿ ಹೊಟ್ಟೆಯಲ್ಲಿ ಟೀ, ಕಾಫಿ ಕುಡಿಯಬೇಡಿ ಎನ್ನುತ್ತಾರೆ ತಜ್ಞರು.

    ರಾತ್ರಿ ಮಲಗುವ ಮುಂಚೆ ಯಾವುದೇ ಕಾರಣಕ್ಕೂ ಕಾಫಿ ಕುಡಿಯಬೇಡಿ. ಮೊದಲೇ ಹೇಳಿದಂತೆ ಕಾಫಿ ಅಥವಾ ಚಹಾದಲ್ಲಿ ಕಂಡು ಬರುವ ಕೆಫೀನ್ ಅಂಶ ಮೂತ್ರ ವರ್ಧಕ ಗುಣ ಲಕ್ಷಣಗಳನ್ನು ಒಳಗೊಂಡಿದ್ದು, ಹಲವು ಬಾರಿ ಮೂತ್ರ ವಿಸರ್ಜನೆ ಮಾಡುವಂತೆ ರಾತ್ರಿಯ ಸಮಯದಲ್ಲಿ ನಿಮಗೆ ನಿದ್ರೆಗೆ ತೊಂದರೆ ಮಾಡಬಹುದು.

     ತಿಂಡಿ, ಊಟ ಮಾಡುವಾಗ ಟೀ, ಕಾಫಿ ಕುಡಿದರೆ ಗ್ಯಾಸ್, ಉಬ್ಬುವುದು ಅಥವಾ ಆಸಿಡ್ ರಿಫ್ಲಕ್ಸ್‌ನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
    ಖಾಲಿ ಹೊಟ್ಟೆಯಲ್ಲಿ ಈ ಪಾನೀಯಗಳನ್ನು ಕುಡಿಯುವುದರಿಂದ ದೇಹದ ಆರೋಗ್ಯಕ್ಕೆ ನಷ್ಟ ಉಂಟಾಗಲಿದೆ ಜೊತೆಗೆ ಕೆಲವು ಮಾರಕ ಪ್ರಭಾವಗಳು ಕಂಡುಬರುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ.
    ತಜ್ಞರ ಪ್ರಕಾರ, ನೀವು ಆಹಾರವನ್ನು ಸೇವಿಸಿದ ಅರ್ಧ ಘಂಟೆಯ ನಂತರ ಮಾತ್ರ ಚಹಾ ಅಥವಾ ಕಾಫಿ ಕುಡಿಯಬೇಕು. ಬೆಳಿಗ್ಗೆ ಬಿಸ್ಕತ್ತು ಅಥವಾ ಇತರ ತಿಂಡಿಗಳೊಂದಿಗೆ ಚಹಾವನ್ನು ಕುಡಿಯಿರಿ. ನೀವು ಆಹಾರಸೇವನೆ ಮಾಡಿದ ಸುಮಾರು ಎರಡು ಗಂಟೆಗಳ ನಂತರ ಬೇಕಾದರೆ ಕಾಫಿ ಅಥವಾ ಚಹಾ ಕುಡಿಯಬಹುದು.
    https://www.vijayavani.net/eating-a-banana-before-bed-can-help-you-sleep

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts