More

    ಧರ್ಮಸ್ಥಳ ಯೋಜನೆಯಿಂದ 4 ಲಕ್ಷ ರೂ. ವಿಮಾ ಸೌಲಭ್ಯ

    ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕಿನ, ಕಡಬ ವಲಯದ ಅಡ್ಡಗದ್ದೆ ಕಾರ್ಯಕ್ಷೇತ್ರದ ಶಕ್ತಿ ಪ್ರಗತಿಬಂಧು ಸ್ವಸಹಾಯ ಸಂಘಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಂಜೂರಾದ ನಾಲ್ಕು ಲಕ್ಷ ರೂ. ವರೆಗಿನ ವಿಮಾ ಸೌಲಭ್ಯದ ಮಂಜೂರಾತಿ ಪತ್ರವನ್ನು ಕಡಬ ಯೋಜನಾ ಕಚೇರಿಯಲ್ಲಿ ಇತ್ತೀಚೆಗೆ ವಿತರಿಸಲಾಯಿತು.

    ಅಸೌಖ್ಯದಿಂದ ಮೃತಪಟ್ಟ ಸಂಘದ ಸದಸ್ಯೆ ಜುರಾಬಿ ಅವರ ಪುತ್ರ ಶೇಕ್ ಮಹಮ್ಮದ್ ನೂರ್ ಅವರಿಗೆ ಮೈಕ್ರೋ ಬಚತ್ ವಿಮಾ ಸೌಲಭ್ಯ 2 ಲಕ್ಷ ರೂ. ಹಾಗೂ ಪಡೆದ ಪ್ರಗತಿನಿಧಿ ಸಾಲ ಮನ್ನಾ ಮಾಡುವ ಮಂಜೂರಾತಿ ಪತ್ರ ವಿತರಿಸಲಾಯಿತು.

    ಕಚೇರಿ ಸಹಾಯಕ ಆಡಳಿತ ಪ್ರಬಂದಕಿ ಚೈತ್ರಾ, ಸೇವಾಪ್ರತಿನಿಧಿ ನಳಿನಿ, ಸುಗುಣ, ಸರಿತಾ ಅಡ್ಡಗದ್ದೆ, ಒಕ್ಕೂಟದ ಅಧ್ಯಕ್ಷ ದೇವಣ್ಣಗೌಡ, ಪದಾಧಿಕಾರಿ ರೂಪಾ ಉಪಸ್ಥಿತರಿದ್ದರು. ಕಡಬ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts