ಕಡಬದಲ್ಲಿ ರೆಫ್ರಿಜರೇಟರ್ ಸ್ಫೋಟ

spota
ರೆಫ್ರಿಜರೇಟರ್ ಸ್ಫೋಟಗೊಂಡು ವಿದ್ಯುತ್ ಉಪಕರಣ ಸೇರಿದಂತೆ ಮನೆಯ ದಾಖಲೆ ಪತ್ರಗಳು ಸುಟ್ಟುಹೋಗಿರುವುದು.
Published on

ಕಡಬ: ಮನೆಯಲ್ಲಿದ್ದವರು ಮನೆಯಿಂದ ಹೊರಟ ಒಂದು ಗಂಟೆಯ ಅವಧಿಯಲ್ಲಿ ಮನೆಯೊಳಗಿದ್ದ ರೆಫ್ರಿಜರೇಟರ್ ಸ್ಫೋಟಗೊಂಡು ವಿದ್ಯುತ್ ಉಪಕರಣ ಸೇರಿದಂತೆ ಮನೆಯ ದಾಖಲೆ ಪತ್ರಗಳು ಸುಟ್ಟುಹೋದ ಘಟನೆ ಭಾನುವಾರ ಸಂಜೆ ಕಡಬದಲ್ಲಿ ನಡೆದಿದೆ.

ಕಡಬದ ಅಡ್ಡಗದ್ದೆ ಅಂಗನವಾಡಿ ಬಳಿ ಇರುವ ಫಾರೂಕ್ ಎಂಬುವರ ಮನೆಯಲ್ಲಿ ಈ ಅವಘಡ ನಡೆದಿದೆ. ಮಧ್ಯಾಹ್ನದ ವೇಳೆ ಫಾರೂಕ್ ಮತ್ತು ಅವರ ಪತ್ನಿ ಸಹಿತ ಮಕ್ಕಳು ಮನೆಯಲ್ಲಿದ್ದರು. ಬಳಿಕ ಪತ್ನಿ, ಮಕ್ಕಳು ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದು, ಫಾರೂಕ್ ಅವರು ಕಡಬ ತಹಸೀಲ್ದಾರ್ ಕಚೇರಿ ಬಳಿ ಇರುವ ತನ್ನ ಅಂಗಡಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಅವಘಡ ಸಂಭವಿಸಿದ್ದು, ದೊಡ್ಡ ದುರಂತ ತಪ್ಪಿದೆ.

ಸುಮಾರು ಐದು ವರ್ಷಗಳ ಹಿಂದೆ ಅವರು ರೆಫ್ರಿಜರೇಟರ್ ಖರೀದಿಸಿದ್ದರು. ಎಂದಿನಂತೆ ರೆಫ್ರಿಜರೇಟರ್ ಚಾಲೂ ಮಾಡಿದ್ದರು. ಮನೆಯ ಸುತ್ತ ಹೊಗೆ ಕಾಣಿಸಿಕೊಂಡ ಹಿನ್ನೆಲೆ ಸ್ಥಳೀಯರು ಸಂಶಯಗೊಂಡು ನೋಡಿದಾಗ ಬೆಂಕಿ ಉರಿಯುತ್ತಿರುವುದು ಕಂಡು ಬಂದಿದೆ. ಸ್ಥಳೀಯರು ಬೆಂಕಿ ನಂದಿಸಲು ಸಹರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net