ವೀರಮಂಗಲ ಪ್ರದೇಶಕ್ಕೆ ಕಾಡಾನೆ ಲಗ್ಗೆ

kadane
ವೀರಮಂಗಲ ಸಮೀಪದ ದೆಬ್ಬೇಲಿ ಪರಿಸರದ ತೋಟದಲ್ಲಿ ಕಂಡು ಬಂದಿರುವ ಕಾಡಾನೆಯ ಹೆಜ್ಜೆ ಗುರುತು.
Published on

ಪುತ್ತೂರು ಗ್ರಾಮಾಂತರ: ನರಿಮೊಗರು ಗ್ರಾಮ ವ್ಯಾಪ್ತಿಯ ವೀರಮಂಗಲ ಪರಿಸರಕ್ಕೆ ಕಾಡಾನೆಯೊಂದು ಲಗ್ಗೆಯಿಟ್ಟು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಈ ಭಾಗದ ಹಲವು ಮಂದಿ ಕೃಷಿಕರ ತೋಟಗಳಿಗೆ ಕಾಡಾನೆ ನುಗ್ಗಿ ಕೃಷಿಗೆ ಹಾನಿ ಮಾಡಿದೆ.

ವೀರಮಂಗಲ ವ್ಯಾಪ್ತಿಯ ದೆಬ್ಬೇಲಿ ಅನಂತಕೃಷ್ಣ ಹೆಬ್ಬಾರ್ ಅವರ ತೋಟಕ್ಕೆ ಲಗ್ಗೆಯಿಟ್ಟು ಕೃಷಿ ತೋಟದಲ್ಲಿದ್ದ ಹಲವಾರು ಬಾಳೆಗಿಡಗಳನ್ನು ಮುರಿದು ಹಾಕಿ ಹಾನಿಗೊಳಿಸಿದೆ. ಪಲ್ಲತ್ತಾರು ವ್ಯಾಪ್ತಿಯ ರಾಧಾಕೃಷ್ಣ, ಇಬ್ರಾಹಿಂ ಮತ್ತು ಸುಲೈಮಾನ್ ಎಂಬುವರ ತೋಟಗಳಿಗೆ ನುಗ್ಗಿ ಬಾಳೆಗಿಡ ನಾಶ ಮಾಡಿದೆ.

ವೀರಮಂಗಲ ವ್ಯಾಪ್ತಿಯ ಆನಾಜೆ ಪ್ರದೇಶದಲ್ಲಿ ಕಾಡಾನೆ ಇರುವುದನ್ನು ಅಲ್ಲಿನ ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಭಾನುವಾರ ನೋಡಿದ್ದಾರೆ. ಕಾಡಾನೆ ಈ ಪ್ರದೇಶದಲ್ಲೇ ಉಳಿದುಕೊಂಡಿರುವ ಸಾಧ್ಯತೆ ಇರುವುದರಿಂದ ಈ ಭಾಗದ ಕೃಷಿಕರು ಆತಂಕಕ್ಕೀಡಾಗಿದ್ದಾರೆ. ವೀರಮಂಗಲ ಪ್ರದೇಶಕ್ಕೆ ಕಾಡಾನೆ ಬಂದಿರುವ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net