More

    VIDEO: ನನ್ನ, ನಿನ್ನ ಪ್ರೇಮದ ಚರ್ಚೆ ಎಲ್ಲೆಡೆ…. ಎಂದು ಡಾನ್ಸ್​ ಮಾಡಿದ ಹಾಲಿ, ಮಾಜಿ ಸಿಎಂಗಳು!

    ಚಂಡೀಗಢ: ಪಂಜಾಬ್​ನ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ಅವರ ಮಗಳ ವಿವಾಹ ಕಾರ್ಯಕ್ರಮ ಭರ್ಜರಿಯಾಗಿ ನಿನ್ನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದದ್ದು ಅಮರಿಂದರ್​ ಸಿಂಗ್​ ಅವರ ನೃತ್ಯ.

    ಸಿಂಗ್​ ಅವರು, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಅವರ ಜತೆ ಹೆಜ್ಜೆ ಹಾಕಿದ್ದು, ಇದೀಗ ಸಾಮಾಜಿಕ ಜಾಲತಾನದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇವರಿಬ್ಬರ ನೃತ್ಯದ ಮೋಡಿಗೆ ಎಲ್ಲರೂ ಒಳಗಾಗಿದ್ದು, ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಮತ್ತು ಹಾಲಿ ಸಿಎಂಗಳ ನೃತ್ಯದ ವಿಡಿಯೋ ವೈರಲ್ ಆಗುತ್ತಲೇ ಸಾಗಿದೆ.

    83 ವರ್ಷದ ಫಾರೂಕ್​ ಅಬ್ದುಲ್ಲಾ ನೃತ್ಯ ಮಾಡುತ್ತಾ ಮನರಂಜಿಸಿದ್ದಾರೆ. ಅಬ್ದುಲ್ಲಾ ಅವರು ಮೊದಲು ತಾವು ನೃತ್ಯ ಮಾಡುತ್ತಾ ನಂತರ ಅಮರಿಂದರ್​ ಸಿಂಗ್​ ಬಳಿ ಹೋಗಿ ಅವರನ್ನ ಎಳೆದು ತಂದಿದ್ದಾರೆ. ಫಾರೂಕ್​ ಅವರ ನೃತ್ಯದಿಂದ ಉತ್ತೇಜಿತರಾದ ಅಮರಿಂದರ್​ ಸಿಂಗ್​ ಅವರು ಹೆಜ್ಜೆ ಹಾಕಿದ್ದಾರೆ.

    ಅಷ್ಟಕ್ಕೂ ಇವರಿಬ್ಬರು ನೃತ್ಯ ಮಾಡಿದ ಹಾಡು ಶಮ್ಮಿಕಪೂರ್​ ನಟಿಸಿರುವ ಚಿತ್ರ ಬ್ರಹ್ಮಚಾರಿಯ ‘ಆಜ್​ ಕಲ್​ ತೆರೆ ಮೆರೆ ಪ್ಯಾರ್​ ಕೆ ಚರ್ಚೆ’ (ನನ್ನ, ನಿನ್ನ ಪ್ರೇಮದ ಚರ್ಚೆ ಎಲ್ಲೆಡೆ…. ) ಹಾಗೂ ‘ ಗುಲಾಬಿ ಆಂಖೆ ಜೋ ತೇರಿ ದೇಖಿ’ .

    ಈ ನೃತ್ಯವನ್ನು ನೀವೂ ನೋಡಿ…

    ಪತಿ, ಪ್ರೇಮಿ ಹಾಗೂ ಪಾಲಕರ ಚಾಯ್ಸ್​… ಆಯ್ಕೆ ಮಾಡಲಾಗದೇ ಕುಗ್ಗಿಹೋಗಿದ್ದೇನೆ… ಏನು ಮಾಡಲಿ?

    ರಾಷ್ಟ್ರೀಯ ಮುಕ್ತ ಶಾಲೆಯಲ್ಲಿದೆ ಹಲವಾರು ಹುದ್ದೆ- ನೇರ ಸಂದರ್ಶನದಿಂದ ಪಡೆಯಿರಿ ಉದ್ಯೋಗ

    ದೀದಿಯಿಂದ ‘ಮಾ’ಗೆ ಬಡ್ತಿ ಪಡೆದ ಮಮತಾ: ಪಶ್ಚಿಮ ಬಂಗಾಳದ ತುಂಬಾ ಸಾಂಬಾರ್​, ಮೊಟ್ಟೆ ಕರಿ ಘಮಲು…

    ಆರು ಗಂಟೆಯಲ್ಲಿ ಮೂರು ಬಾರಿ ಕಂಪಿಸಿದ ಭೂಮಿ: ಸುನಾಮಿ ಎಚ್ಚರಿಕೆ- ಎತ್ತರ ಪ್ರದೇಶಕ್ಕೆ ಸ್ಥಳಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts