ಆರು ಗಂಟೆಯಲ್ಲಿ ಮೂರು ಬಾರಿ ಕಂಪಿಸಿದ ಭೂಮಿ: ಸುನಾಮಿ ಎಚ್ಚರಿಕೆ- ಎತ್ತರ ಪ್ರದೇಶಕ್ಕೆ ಸ್ಥಳಾಂತರ

tsumani
Published on

ವಿಲಿಂಗ್‍ಟನ್ (ನ್ಯೂಜಿಲೆಂಡ್​): ಪ್ರಕೃತಿ ವಿಕೋಪಗಳು ವಿಶ್ವಾದ್ಯಂತ ಹೆಚ್ಚುತ್ತಲೇ ಸಾಗಿದೆ. ಇದೀಗ ಅಂಥದ್ದೇ ಭಯಾನಕ ಘಟನೆ ನಡೆಯಲಿರುವ ಮುನ್ಸೂಚನೆ ನ್ಯೂಜಿಲೆಂಡ್​ನಲ್ಲಿ ನಡೆದಿದೆ.

ಇಲ್ಲಿಯ ಉತ್ತರ ದ್ವೀಪದಲ್ಲಿ ಮೂರು ಬಾರಿ ಭೂಕಂಪವಾಗಿದ್ದು, ಇದರಿಂದ ಜನತೆ ಬೆಚ್ಚಿಬಿದ್ದಿದ್ದಾರೆ. ಆರು ಗಂಟೆಯಲ್ಲಿ ಮೂರು ಬಾರಿ ಭೂಮಿ ಕಂಪಿಸಿದೆ. ಮೊದಲ ಬಾರಿ ಭೂಕಂಪ ಆಗಿರುವ ತೀವ್ರತೆಯು 8.1 ಆಗಿದ್ದು, ಇದಕ್ಕೂ ಮೊದಲು 7.4 ಮತ್ತು 7.3 ತೀವ್ರತೆಯ ಭೂಕಂಪದ ಅನುಭವವಾಗಿರುವುದಾಗಿ ವರದಿಯಾಗಿದೆ.

ಇಲ್ಲಿ ಸುನಾಮಿ ಏನಾದರೂ ಸಂಭವಿಸಿದರೆ, ಅದು ಕೆಲವು ರಾಷ್ಟ್ರಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇರುವ ಬಗ್ಗೆ ತಜ್ಱರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಪೆಸಿಫಿಕ್​ ಮಹಾ ಸಾಗರದಲ್ಲಿ ಸುನಾಮಿಯ ಆತಂಕ ಎದುರಾಗಿದೆ. ಈ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಭೂಕಂಪ ಆಗಿರುವ ಮಾಹಿತಿಯನ್ನು ಆಧರಿಸಿದ ಅಧ್ಯಯನ ನಡೆಸಿರುವ ಇಲಾಖೆ, ಸುಮಾನಿ ಆಗಬಹುದು ಎಂದು ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಡಲ ತೀರದ ಬಳಿಯ ಸಾವಿರಾರು ಜನರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.

ಸುಮಾರು ಮೂರು ಮೀಟರ್ ನಿಂದ 10 ಮೀಟರ್ ಎತ್ತರದವರೆಗಿ ಅಲೆಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಯಾವುದೇ ಸಮಯದಲ್ಲಿ ಭಾರೀ ಅಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.

ಸಮುದ್ರದ ವ್ಯಾಪ್ತಿಯಲ್ಲಿ ಬರುವ ಜನರಿಗೆ ಎತ್ತರ ಪ್ರದೇಶಕ್ಕೆ ತೆರಳಲು ಸೂಚಿಸಲಾಗಿದ್ದು, ಮುಂದಿನ ಆದೇಶದವರೆಗೂ ಮಕ್ಕಳನ್ನ ಶಾಲೆಗೆ ಕಳುಹಿಸದಂತೆ ಸೂಚನೆ ನೀಡಿದೆ. ಸರ್ಕಾರದ ತುರ್ತು ಪರಿಸ್ಥಿತಿಯ ನಿರ್ವಹಣೆಗಾಗಿ ಸಾರ್ವಜನಿಕರಿಗಾಗಿ ಸಹಾಯವಾಣಿಯನ್ನು ಆರಂಭಿಸಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net