ಕಾರಿನ ಜತೆ ಕಂದಕಕ್ಕೆ ಉರುಳಿದ ಉಡುಪಿ ಮಹಿಳೆ- ಐದು ಬೈಕ್​ಗಳಾದವು ನಜ್ಜುಗುಜ್ಜು!

car
Published on

ಉಡುಪಿ: ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದ ಮಹಿಳೆಯೊಬ್ಬರ ನಿಯಂತ್ರಣ ತಪ್ಪಿದ್ದರಿಂದ ಕಾರು ಕಂದಕಕ್ಕೆ ಉರುಳಿದ ಘಟನೆ ಉಡುಪಿಯಲ್ಲಿ ನಡೆದಿದೆ. ಈ ರಭಸಕ್ಕೆ ರಸ್ತೆ ಬದಿಯಲ್ಲಿ ನಿಂತಿದ್ದ ಐದು ಬೈಕ್​ಗಳು ನಜ್ಜುಗುಜ್ಜಾಗಿವೆ.

ಚಾಲಕಿಯು ಉಡುಪಿಯಿಂದ ಮಣಿಪಾಲಕ್ಕೆ ಹೋಗುತ್ತಿದ್ದರು. ಈ ಸಮಯದಲ್ಲಿ ಅವರು ಚಾಲನೆ ಮಾಡುತ್ತಿದ್ದ ಕಾರು ಲಕ್ಷ್ಮೀಂದ್ರ ನಗರದ ನಿಯಂತ್ರಣ ತಪ್ಪಿಬಿಟ್ಟಿದೆ. ಪಕ್ಕದಲ್ಲಿಯೇ ಇದ್ದ ಕಂದಕಕ್ಕೆ ಕಾರು ಹೋಗಿದೆ. ಅದೃಷ್ಟವಶಾತ್​ ಅವರಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇದಕ್ಕೆ ಕಾರಣ, ಕಂದಕದಲ್ಲಿದ್ದ ಮರ. ಕೆಳಭಾಗದಲ್ಲಿ ಮರವಿತ್ತು. ಈ ಹಿನ್ನೆಲೆಯಲ್ಲಿ ಅವರ ಕಾರು ಕಂದಕಕ್ಕೆ ಉರುಳಿದರೂ ಮರ ಅಡ್ಡ ಬಂದಿದ್ದರಿಂದ ಚಾಲಕಿಯ ಪ್ರಾಣಕ್ಕೆ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ.

ಆದರೆ ಕಾರು ಕಂದಕಕ್ಕೆ ಉರುಳುತ್ತಿದ್ದ ರಭಸದಲ್ಲಿ ಅಲ್ಲಿಯೇ ನಿಲ್ಲಿಸಿದ್ದ ಐದು ಬೈಕ್​ಗಳು ಕೂಡ ಕಾರಿಗೆ ಡ್ಯಾಷ್​ ಹೊಡೆದು ಕಂದಕಕ್ಕೆ ಬಿದ್ದುಬಿಟ್ಟಿವೆ. ಇವೆಲ್ಲವೂ ನ್ಯೂ ಮಣಿಪಾಲ್ ಬಜಾರ್​ನ ಸೆಕೆಂಡ್ ಹ್ಯಾಂಡ್ ವಾಹನಗಳಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಸದ್ಯ ಮಣಿಪಾಲ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net