More

    ವಿಚ್ಛೇದನದ ಆದೇಶದ ವಿರುದ್ಧ ಅಪೀಲ್‌ ಹೋಗದಿದ್ರೆ ವರ್ಷಗಳ ನಂತರ ಜೀವನಾಂಶದಿಂದ ತಪ್ಪಿಸಿಕೊಳ್ಳಬಹುದಾ?

    ವಿಚ್ಛೇದನದ ಆದೇಶದ ವಿರುದ್ಧ ಅಪೀಲ್‌ ಹೋಗದಿದ್ರೆ ವರ್ಷಗಳ ನಂತರ ಜೀವನಾಂಶದಿಂದ ತಪ್ಪಿಸಿಕೊಳ್ಳಬಹುದಾ?ಪ್ರಶ್ನೆ: ನನಗೆ ಮತ್ತು ನನ್ನ ಪತ್ನಿಗೆ ವಿಚ್ಛೇದನ ಆಗಿ ಮೂರು ವರ್ಷ ಆಗಿದೆ. ನಾನು ಮರುಮದುವೆ ಆಗಿ ನನಗೆ ಮೂರು ವರ್ಷದ ಮಗನೂ ಇದ್ದಾನೆ. ಈಗ ನನ್ನ ಮೊದಲ ಹೆಂಡತಿ ಅವಳಿಗೆ ಜೀವನಾಂಶ ಕೊಡು ಎಂದು ಕೇಳುತ್ತಿದ್ದಾಳೆ. ಕೊಡದಿದ್ದರೆ ಕೋರ್ಟಿಗೆ ಹೋಗುತ್ತೇನೆ ಎನ್ನುತ್ತಿದ್ದಾಳೆ. ವಿಚ್ಛೇದನದ ಆದೇಶವನ್ನು ಅವಳು ಚಾಲೆಂಜ್ ಸಹ ಮಾಡಿಲ್ಲ. ನಾನೇಕೆ ಅವಳಿಗೆ ಜೀವನಾಂಶ ಕೊಡಬೇಕು?

    ಉತ್ತರ: ವಿಚ್ಛೇದಿತ ಪತ್ನಿಗೆ ತನ್ನನ್ನು ತಾನು ಪೋಷಿಸಿಕೊಳ್ಳುವ ಚೈತನ್ಯ ಶಕ್ತಿ ಇಲ್ಲದೇ ಹೋದರೆ, ಆಕೆ ಮರು ಮದುವೆ ಆಗಿರದೇ ಇದ್ದರೆ, ಆಕೆಯ ವಿಚ್ಛೇದಿತ ಪತಿ ಆಕೆಗೆ ಜೀವನಾಂಶ ಕೊಡಲೇಬೇಕಾಗುತ್ತದೆ. ವಿಚ್ಛೇದನ ಜೀವನಾಂಶದ ಹಕ್ಕನ್ನು ಕುಂಠಿತಗೊಳಿಸುವುದಿಲ್ಲ. ನಿಮ್ಮ ಪೂರ್ವ ಪತ್ನಿಗೆ ಕೆಲಸ ಸಿಗುವವರೆಗೆ ಅಥವಾ ಆಕೆ ಮರು ಮದುವೆ ಆಗುವವರೆಗೆ ನೀವು ಆಕೆಗೆ ಜೀವನಾಂಶ ಕೊಡಲೇ ಬೇಕಾಗುತ್ತದೆ.

    ವಿಚ್ಛೇದನದ ಆದೇಶವನ್ನು ನಿಮ್ಮ ಪೂರ್ವ ಪತ್ನಿ ಚಾಲೆಂಜ್ ಮಾಡಿರದೇ ಹೋದರೂ ಆಕೆಗೆ ಜೀವನಾಂಶದ ಹಕ್ಕು ಇರುತ್ತದೆ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಡಿವೋರ್ಸ್​ ನೀಡದೇ ಪತಿ ಇನ್ನೊಬ್ಬಳ ಜತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ- ಕಾನೂನಿನಡಿ ನಾನೇನು ಮಾಡಬಹುದು?

    ದಪ್ಪ ಇದ್ದೀನಿ ಎಂದು ಪತಿ ಮುಟ್ಟುತ್ತಿಲ್ಲ… ಡಿವೋರ್ಸ್‌ ಕೊಡು ಎಂದು ಹಿಂಸಿಸುತ್ತಿದ್ದಾರೆ, ಏನು ಮಾಡಲಿ?

    ಮಾವನ ಆಸ್ತಿಯಲ್ಲಿ ಸ್ವಂತ ಖರ್ಚಿನಲ್ಲಿ ಮನೆ ಕಟ್ಟಿದರೂ ಎಲ್ಲಾ ವಾರಸುದಾರರಿಗೂ ಸಮಭಾಗ ಇದ್ದೇ ಇದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts