More

    ದಪ್ಪ ಇದ್ದೀನಿ ಎಂದು ಪತಿ ಮುಟ್ಟುತ್ತಿಲ್ಲ… ಡಿವೋರ್ಸ್‌ ಕೊಡು ಎಂದು ಹಿಂಸಿಸುತ್ತಿದ್ದಾರೆ, ಏನು ಮಾಡಲಿ?

    ದಪ್ಪ ಇದ್ದೀನಿ ಎಂದು ಪತಿ ಮುಟ್ಟುತ್ತಿಲ್ಲ... ಡಿವೋರ್ಸ್‌ ಕೊಡು ಎಂದು ಹಿಂಸಿಸುತ್ತಿದ್ದಾರೆ, ಏನು ಮಾಡಲಿ?

    ಪ್ರಶ್ನೆ: ನನಗೆ ಮದುವೆಯಾಗಿ ನಾಲ್ಕು ವರ್ಷ ಆಗಿದೆ. ನನ್ನ ಗಂಡ ಸ್ವಲ್ಪ ದಿನ ಅಮ್ಮನ ಮನೆಯಲ್ಲಿ ಇರು ಎಂದು ಬಿಟ್ಟು ಹೋದವರು ಈವರೆಗೆ ಬಂದಿಲ್ಲ. ಎರಡು ವರ್ಷ ದಾಟಿದೆ ಅವರು ಬಂದೇ ಇಲ್ಲ.

    ನಾನು ದಪ್ಪವಾಗಿದ್ದೇನೆ ಎಂದು ಅವರ ತಾಯಿ ತಂಗಿ ಸೇರಿಕೊಂಡು ನನ್ನ ಯಜಮಾನರ ಮನಸ್ಸು ಕೆಡಿಸಿದ್ದಾರೆ. ನನ್ನನ್ನು ಮದುವೆಗೆ ಮುಂಚೆ ಹತ್ತು ಸಲ ನೋಡಿ ಅವರೆಲ್ಲಾ ಒಪ್ಪಿಯೇ ಮದುವೆ ಆಗಿದ್ದು. ನನ್ನ ಗಂಡ ನನ್ನ ಜೊತೆ ಸಂಸಾರ ಮಾಡಿದ್ದೇ ಹದಿನೈದು ದಿನ. ಅದರಲ್ಲೂ ದೈಹಿಕ ಸಂಪರ್ಕ ಇರಲಿಲ್ಲ.

    ಉತ್ತರ: ಹೆಂಡತಿ ಅಥವಾ ಗಂಡ ದಪ್ಪ ಅಥವಾ ಸಣ್ಣ ಎನ್ನುವ ಕಾರಣಕ್ಕೆ ಯಾವ ನ್ಯಾಯಾಲಯವೂ ವಿಚ್ಛೇದನವನ್ನು ಕೊಡುವುದಿಲ್ಲ.
    ನಿಮ್ಮಿಂದ ನಿಮ್ಮ ಪತಿಗೆ ಆಗಿರುವ ಕ್ರೂರತೆ ಏನು ಎನ್ನುವುದನ್ನು ನಿಮ್ಮ ಪತಿ ಸಾಬೀತು ಪಡಿಸಿದಾಗ ಮಾತ್ರ ವಿಚ್ಛೇದನ ಸಿಗಬಹುದು.

    ನೀವು ಹೆದರಬೇಡಿ. ತಕ್ಷಣವೇ ನೀವು ನಿಮ್ಮ ತಾಲ್ಲೂಕಿನ ಮಧ್ಯಸ್ಥಿಕೆ ಕೇಂದ್ರಕ್ಕೆ ಒಂದು ಅರ್ಜಿ ಕೊಡಿ. ನಿಮಗೂ ನಿಮ್ಮ ಪತಿಗೂ ಇರುವ ದಾಂಪತ್ಯ ಜೀವನದ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಡಿ ಎಂದು ಕೇಳಿಕೊಳ್ಳಿ. ಕೇಂದ್ರದವರು ನಿಮ್ಮ ಇಬ್ಬರನ್ನೂ, ಮತ್ತು ನಿಮ್ಮ ಪತಿಯ ಹಾಗೂ ನಿಮ್ಮ ಸಂಬಂಧಿಕರನ್ನೂ ಕರೆಯಿಸಿ ಮಧ್ಯಸ್ಥಿಕೆಗಾರರ ಮೂಲಕ ಮಾತಾಡಿ ನೋಡುತ್ತಾರೆ.

    ಅಲ್ಲಿ ರಾಜಿ ಸೂತ್ರಕ್ಕೆ ಬರಬಹುದು. ಅಲ್ಲಿ ನಿಮ್ಮ ಪತಿ ಒಪ್ಪದಿದ್ದರೆ ನೀವು ಜೀವನಾಂಶಕ್ಕೆ ಪ್ರಕರಣ ದಾಖಲಿಸಿ. ನಿಮ್ಮ ಪತಿ ವಿಚ್ಛೇದನಕ್ಕೆ ಕೇಸು ಹಾಕಿದರೆ ಅದನ್ನು ಧೈರ್ಯವಾಗಿ ಎದುರಿಸಿ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಅಮ್ಮನ ಆಸ್ತಿ ತೆಗೆದುಕೊಂಡು ಬಾ ಎಂದು ಅಕ್ಕನಿಗೆ ಗಂಡ ಪೀಡಿಸುತ್ತಿದ್ದಾನೆ- ಅವಳಿಗೂ ಪಾಲು ಇದೆಯಾ?

    ಬೇರೆಯವರ ಎದುರು ಮಾತ್ರ ಮುದ್ದಾಡುವ ಪತಿಯ ಹಿಂಸೆ ತಾಳದಾಗಿದೆ- ಕಾನೂನಿನಡಿ ಪರಿಹಾರವೇನು?

    ಪತ್ನಿಯ ಮೊಬೈಲ್​ನಲ್ಲಿ ಪ್ರಿಯಕರನ ಮೆಸೇಜ್​ ನೋಡಿ ಅಸಹ್ಯ ಹುಟ್ಟಿದೆ- ಅವಳಿಗೆ ವಿಚ್ಛೇದನ ನೀಡಬಹುದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts