ಹೂಜಿಯಲ್ಲಿನ ನೀರು ಮೇಲೆ ಬರಲು ಕಾಗೆ ಕಲ್ಲು ಹಾಕಿರೋ ಕಥೆ ನೆನಪಿದ್ಯಾ?

bird
Published on

ಕಾಗೆ ಮತ್ತು ಹೂಜಿ ಕಥೆಯನ್ನು ಚಿಕ್ಕವರಿರುವಾಗ ಎಲ್ಲರೂ ಕೇಳಿಯೇ ಇರುತ್ತೇವೆ ಅಲ್ಲವೆ? ಈಗಲೂ ಆ ಕಥೆ ಬಹಳ ಜನಪ್ರಿಯವಾಗಿಯೇ ಇದೆ. ಚಿಕ್ಕಮಕ್ಕಗಳಿಗೂ ಈ ಕಥೆ ಕೇಳಲು ತುಂಬಾನೇ ಇಷ್ಟವಾಗುತ್ತದೆ.

ಬಾಯಾರಿಕೆಯಿಂದ ಬಂದ ಕಾಗೆಗೆ ಹೂಜಿಯಲ್ಲಿ ನೀರು ಕಾಣಿಸುತ್ತದೆ. ಆದರೆ ಆ ನೀರು ತುಂಬಾ ತಳದಲ್ಲಿ ಇರುತ್ತದೆ. ಕಾಗೆಯ ಕೊಕ್ಕು ಅದರಲ್ಲಿ ಹೊಕ್ಕುವುದಿಲ್ಲ. ಆಗ ಕಾಗೆ ಉಪಾಯ ಮಾಡಿ ಕಲ್ಲುಗಳನ್ನು ತಂದು ಹಾಕಿ ನೀರು ಮೇಲಕ್ಕೆ ಬಂದಾಗ ಮನಸಾರೆ ಕುಡಿದು ಹಾರಿಹೋಗುವ ಕಥೆ ಇದು...

ಆದರೆ ಅದೊಂದು ಕಥೆ ಬಿಡಿ... ಕೇಳಲು ಮಜವಾಗಿರುತ್ತೆ ಅಷ್ಟೆ. ಅದೇನು ನಿಜವಾದದ್ದಲ್ಲ ಎಂದು ನೀವು ಅಂದುಕೊಂಡಿರಲಿಕ್ಕೆ ಸಾಕು ಅಥವಾ ಇಂದಿನ ಮಕ್ಕಳು ಅದನ್ನು ಹೇಳಲಿಕ್ಕೂ ಸಾಕು.

ಆದರೆ ನಿಜವಾಗಿಯೂ ಹಾಗೆಯೇ ಆಗಿದ್ದರೆ? ಎಲ್ಲಾದರೂ ಉಂಟೆ ಅನ್ನಬೇಡಿ. ಕಾಗೆ ಸೇರಿದಂತೆ ಎಲ್ಲಾ ಪಶು-ಪಕ್ಷಿಗಳೂ ಭಾರಿ ಬುದ್ಧಿವಂತರು. ಎಷ್ಟೋ ಬಾರಿ ಮನುಷ್ಯರಿಗೆ ಹೊಳೆಯದ್ದೂ ಇವುಗಳಿಗೆ ಹೊಳೆಯುವುದುಂಟು.

ಅಷ್ಟಕ್ಕೂ ಇಲ್ಲಿ ಏಕೆ ಈ ವಿಷಯ ಎಂದರೆ ಈ ವಿಡಿಯೋದಲ್ಲಿ ಇರುವ ಪಕ್ಷಿಯನ್ನು ಗಮನಿಸಿ. ಸಕತ್​ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಇರುವ ಪಕ್ಷಿಯನ್ನು ಗಮನಿಸಿದರೆ, ಖಂಡಿತವಾಗಿಯೂ ನಿಮಗೆ ಕಾಗೆ ಮತ್ತು ಹೂಜಿ ಕಥೆ ನೆನಪಾಗಿಯೇ ಆಗುತ್ತೆ.

ಹೌದು. ಆ ಕಥೆಯನ್ನೇ ನೆನಪಿಸುವ ನೈಜ ಘಟನೆ ಇದು. ಬಾಟಲಿಯಲ್ಲಿರುವ ನೀರು ಈ ಪಕ್ಷಿಗೆ ಕುಡಿಯಲು ಸಾಧ್ಯವಾಗಿಲ್ಲ ಎನ್ನುವ ಕಾರಣಕ್ಕೆ ಅಕ್ಕಪಕ್ಕದಲ್ಲಿ ಇರುವ ಕಲ್ಲುಗಳನ್ನು ತಂದು ಬಾಟಲಿಯಲ್ಲಿ ಹಾಕಿ ನೀರನ್ನು ಕುಡಿದಿದೆ ನೋಡಿ...

ಕಥೆ ಕೇವಲ ಕಥೆಯಾಗಿರಲ್ಲ... ವಾಸ್ತವವೂ ಆಗಿರುತ್ತದೆ ಎನ್ನುವುದು ಇದಕ್ಕೇ ಅಲ್ಲವೆ?

ವಿಡಿಯೋ ನೋಡಲು ಈ ಲಿಂಕ್​ ಮೇಲೆ ಕ್ಲಿಕ್ಕಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net