

ಪುಣೆ: ಇದೀಗ ಫೇಸ್ಬುಕ್ನಲ್ಲಿ ಕಪಲ್ ಚಾಲೆಂಜ್, ಸಿಂಗಲ್ ಚಾಲೆಂಜ್, ಫ್ಯಾಮಿಲಿ ಚಾಲೆಂಜ್ ಎಂಬ ಟ್ರೆಂಡ್ಗಳು ಶುರುವಾಗಿದೆ. ತಾವು ಒಂಟಿಯಾಗಿರುವ, ಸಂಗಾತಿ ಜತೆಗಿರುವ, ಕುಟುಂಬದ ಜತೆಗಿರುವ ಫೋಟೋಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಇದಾಗಲೇ ಲಕ್ಷಾಂತರ ಮಂದಿ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
ಆದರೆ ಈ ಚಾಲೆಂಜ್ ಹೆಸರಿನಲ್ಲಿ ಆಗುತ್ತಿರುವ ಭಯಾನಕ ಸತ್ಯವನ್ನು ಪುಣೆ ಪೊಲೀಸರು ಬಿಚ್ಚಿಟ್ಟಿದ್ದಾರೆ. ಟ್ವೀಟರ್ ಮೂಲಕ ಮಾಹಿತಿ ನೀಡಿರುವ ಪೊಲೀಸರು, ದಯವಿಟ್ಟು ಇಂಥ ಚಾಲೆಂಜ್ಗಳನ್ನು ಸ್ವೀಕರಿಸುವ ಮುನ್ನ ಬಹಳ ಜಾಗರೂಕರಾಗಿ ಇರಬೇಕು ಎಂದು ಹೇಳಿದ್ದಾರೆ.
ಇದಾಗಲೇ ತಮಗೆ ದೂರುಗಳು ಬಂದಿರುವ ಮಾಹಿತಿಯನ್ನು ಆಧರಿಸಿ ಈ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಕಪಲ್ ಚಾಲೆಂಜ್ನಲ್ಲಿ ಹಾಕಿರುವ ಫೋಟೋಗಳನ್ನು ತಿರುಚಿ, ಅದನ್ನು ಪೋರ್ನ್ ವೆಬ್ಸೈಟ್ಗಳಿಗೆ ಅಪ್ಲೋಡ್ ಮಾಡುವ ಮೂಲಕ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂಥ ಫೋಟೋಗಳನ್ನು ದುರುಪಯೋಗ ಪಡಿಸಿಕೊಂಡಿರುವ ಹಲವಾರು ಕಂಪ್ಲೇಂಟ್ಗಳು ತಮಗೆ ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸಾಮಾನ್ಯವಾಗಿ ಫೇಸ್ಬುಕ್ಗೆ ಹಾಕುವ ವೈಯಕ್ತಿಯ ಫೋಟೋಗಳ ಬಗ್ಗೆ ಇದಾಗಲೇ ಸಾಕಷ್ಟು ಎಚ್ಚರಿಕೆ ಸಂದೇಶಗಳು ಬರುತ್ತಿರುವ ನಡುವೆಯೇ ಕಪಲ್ ಚಾಲೆಂಜ್ ಹೆಸರಿನಲ್ಲಿ ಆಗುತ್ತಿರುವ ದುರ್ಬಳಕೆ ಕುರಿತಂತೆ ತುಂಬಾ ಜಾಗರೂಕರಾಗಿ ಇರಬೇಕು. ಇಂಥ ಚಾಲೆಂಜ್ಗಳನ್ನು ಸ್ವೀಕರಿಸುವಾಗ ಎಚ್ಚರಿಕೆ ವಹಿಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡುವ ಮೊದಲು ಎರಡೆರಡು ಬಾರಿ ಯೋಚಿಸಿ ಎಂದು ಟ್ವಿಟ್ಟರ್ ಖಾತೆಯ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ. ಒಂದು ವೇಳೆ ಯಾವುದೇ ಅನುಮಾನ ಮೂಡಿದರೂ ಕೂಡಲೇ ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕೆಂದೂ ಪುಣೆ ಪೊಲೀಸರು ತಿಳಿಸಿದ್ದಾರೆ.