ಬೆಟ್ಟಿಂಗ್​ ಜಾಹೀರಾತುದಾರರಿಗೆ ಶಾಕ್​ ನೀಡಿದ ಕೇಂದ್ರ ಸರ್ಕಾರ: ಇನ್ಮುಂದೆ ನಿಷೇಧ- ಇಲ್ಲದಿದ್ರೆ ಕಠಿಣ ಕ್ರಮ

1 Min Read
ಬೆಟ್ಟಿಂಗ್​ ಜಾಹೀರಾತುದಾರರಿಗೆ ಶಾಕ್​ ನೀಡಿದ ಕೇಂದ್ರ ಸರ್ಕಾರ: ಇನ್ಮುಂದೆ ನಿಷೇಧ- ಇಲ್ಲದಿದ್ರೆ ಕಠಿಣ ಕ್ರಮ

ನವದೆಹಲಿ: ಟಿವಿ, ವೆಬ್‍ಸೈಟ್‍ಗಳಲ್ಲಿ ಬೆಟ್ಟಿಂಗ್ ಜಾಹೀರಾತು ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಬೆಟ್ಟಿಂಗ್ ಸೈಟ್‌ಗಳ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಸುದ್ದಿ ವೆಬ್‌ಸೈಟ್‌ಗಳು, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಖಾಸಗಿ ಚಾನೆಲ್‌ಗಳಿಗೆ ಸೂಚನೆ ನೀಡಿದೆ. ಸ್ಯಾಟಲೈಟ್ ಟಿವಿ ಮತ್ತು ಒಟಿಟಿ ಪ್ಲಾಟ್‍ಫಾರ್ಮ್‍ಗಳಾದ ನೆಟ್‍ಫ್ಲಿಕ್ಸ್, ಹಾಟ್‍ಸ್ಟಾರ್, ಅಮೆಜಾನ್ ಪ್ರೈಮ್ ವೀಡಿಯೋ ಸೇರಿದಂತೆ ಇತರ ಡಿಜಿಟಲ್ ಮಾಧ್ಯಮಗಳಿಗೆ ಇದು ಅನ್ವಯ ಆಗುತ್ತದೆ.

ಈ ಜಾಹೀರಾತುಗಳು ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಜೂಜು ಮತ್ತು ಬೆಟ್ಟಿಂಗ್ ಕುರಿತಾಗಿ ಉತ್ತೇಜಿಸುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ಪ್ರಸಾರ ಮಾಡುವುದನ್ನು ದೇಶದಲ್ಲಿ ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ದಂಡ ಹಾಕಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.

‘ಯಾವುದೇ ರೀತಿಯ ಬೆಟ್ಟಿಂಗ್ ಮತ್ತು ಜೂಜಿನ ಕುರಿತಾಗಿ ಉತ್ತೇಜಿಸುವ ಜಾಹೀರಾತನ್ನು ಪ್ರಸಾರ ಮಾಡಬೇಡಿ. ಈ ಸೂಚನೆಯನ್ನು ಉಲ್ಲಂಘಿಸಿದರೆ ಅದಕ್ಕೆ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದೆ.

ಆನ್​ಲೈನ್​ ಜೂಜು ನಿಷೇಧಿಸಲು ಕರ್ನಾಟಕ ಪೊಲೀಸ್ ಕಾಯ್ದೆ-1963ಕ್ಕೆ ತರಲಾಗಿದ್ದ ತಿದ್ದುಪಡಿಯನ್ನು ಕರ್ನಾಟಕ ಹೈಕೋರ್ಟ್​ ಇದೇ ಫೆಬ್ರುವರಿ ತಿಂಗಳಿನಲ್ಲಿ ರದ್ದುಪಡಿಸಿರುವುದು ಇಲ್ಲಿ ಉಲ್ಲೇಖಾರ್ಹ. ರಾಜ್ಯ ಸರ್ಕಾರ ಆನ್​​ಲೈನ್ ಜೂಜು ರದ್ದುಪಡಿಸಲು ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದಿತ್ತು. ತಿದ್ದುಪಡಿ ಕಾಯ್ದೆಯನ್ನು 2021ರ ಸೆಪ್ಟೆಂಬರ್ 21ರಂದು ವಿಧಾನಸಭೆ ಮತ್ತು ಸೆ.23ರಂದು ವಿಧಾನಪರಿಷತ್ ಅಂಗೀಕರಿಸಿತ್ತು. 2021ರ ಅಕ್ಟೋಬರ್ 4ರಂದು ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದರು.

ಅದರಂತೆ ಅಕ್ಟೋಬರ್ 5ರಂದು ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿತ್ತು.ಕಾಯ್ದೆ ಜಾರಿಗೆ ಬರುತ್ತಿದ್ದಂತೆ ಆನ್​ಲೈನ್ ಗೇಮಿಂಗ್ ಕಂಪನಿಗಳ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಗೇಮಿಂಗ್ ಸಂಸ್ಛೆಗಳು ಹೊಸ ಕಾಯ್ದೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದವು. ಆನ್​ಲೈನ್​ ಜೂಜಿಗೆ ಕೋರ್ಟ್​ ಗ್ರೀನ್​ ಸಿಗ್ನಲ್​ ಕೊಟ್ಟಿತ್ತು. ಈ ತೀರ್ಪು ಹೊರಬೀಳುತ್ತಲೇ ಜೂಜು ಆಡಲು ಪ್ರೋತ್ಸಾಹ ನೀಡುವ ಸಿನಿ ತಾರೆಯರು ಪುನಃ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದ್ದಾರೆ. (ಏಜೆನ್ಸೀಸ್​)

ಪರೇಶ್​ ಮೇಸ್ತಾನದ್ದು ಕೊಲೆಯಲ್ಲ: ವರದಿಗೆ ಕಾಂಗ್ರೆಸ್​ನಿಂದ ಸಂಭ್ರಮ- ಬಿಜೆಪಿ ಕೆಂಡಾಮಂಡಲ; ನಾಯಕರು ಹೇಳ್ತಿರೋದೇನು?

‘ಪ್ರೀತಿಯ ಸಾವೇ.. ನನ್ನ ಜೀವನದಲ್ಲಿ ಬಾ’; ಐಪಿಎಸ್​ ಅಧಿಕಾರಿಯ ಹತ್ಯೆಗೆ ಟ್ವಿಸ್ಟ್​- ಆರೋಪಿ ಡೈರಿಯಲ್ಲಿ ವಿಚಿತ್ರ ಬರಹ

26 ಕೋಟಿ ರೂ. ನೋಟುಗಳ ಮೇಲೆ ‘ರಿಸರ್ವ್​ ಬ್ಯಾಂಕ್’​ ಬದಲು ‘ರಿವರ್ಸ್​ ಬ್ಯಾಂಕ್’​! ಕಕ್ಕಾಬಿಕ್ಕಿಯಾದ ಪೊಲೀಸರು

See also  ಅಪ್ಪನ ಕೆಲಸ ಅಮ್ಮನಿಗೆ ಸಿಕ್ಕರೆ ಅವರು ಬೇಕಾದವರಿಗೆ ಮಾತ್ರ ಆಸ್ತಿ ಬರೆಯಬಹುದೆ?
Share This Article