VIDEO: ನಾನು ಹೇಳಿದ ಹಾಡು ಪ್ಲೇ ಆಗುವವರೆಗೆ ಮಂಟಪಕ್ಕೆ ಬರಲ್ಲ ಎಂದು ಪಟ್ಟು ಹಿಡಿದ ವಧು- ವಿಡಿಯೋ ವೈರಲ್‌

marraige
Published on

ಇತ್ತೀಚಿನ ದಿನಗಳಲ್ಲಿ ಮದುವೆ ಮನೆಯ ಸ್ವಾರಸ್ಯಕರ ಸನ್ನಿವೇಶಗಳ ವಿಡಿಯೋಗಳು ವೈರಲ್ ಆಗುತ್ತಿವೆ. ಅಂಥದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಅದೇನೆಂದರೆ ತಾನು ಮದುವೆ ಮನೆಗೆ ಎಂಟ್ರಿ ಕೊಡುವ ಸಂದರ್ಭದಲ್ಲಿ ಇಂಥದ್ದೇ ಹಾಡು ಹಾಕಬೇಕು ಎಂದು ವಧು ಹೇಳಿದ್ದಳು. ಆದರೆ ಆ ಹಾಡು ಸಿಗದಿದ್ದುದಕ್ಕೋ ಏನೋ ಬೇರೆ ಹಾಡನ್ನು ಪ್ಲೇ ಮಾಡಲಾಗಿತ್ತು. ಇದರಿಂದ ಸಿಟ್ಟಿಗೆದ್ದ ವಧು ನಾನು ಆಯ್ಕೆ ಮಾಡಿರುವ ಹಾಡನ್ನು ಹಾಕುವವರೆಗೂ ಹಾಲ್ ಪ್ರವೇಶಿಸಲು ನಿರಾಕರಿಸಿದ್ದಾಳೆ.

ಇನ್ಸ್‌ಟಾಗ್ರಾಂನ “ದಿ ವೆಡ್ಡಿಂಗ್‍ಬ್ರಿಗೇಡ್” ಹೆಸರಿನಲ್ಲಿ ಶೇರ್ ಮಾಡಿಕೊಳ್ಳಲಾದ ಈ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದ್ದು, ಕೆಲವರು ಮದುಮಗಳ ಪರವಾಗಿ ಕಮೆಂಟ್‌ ಮಾಡಿದ್ದರೆ, ಇನ್ನು ಕೆಲವರು ಇವಳಿಗೆ ಸೊಕ್ಕು ಎಂದು ಹೇಳಿದ್ದಾರೆ.

ನಾನು ಆಯ್ಕೆ ಮಾಡಿರುವ ಹಾಡನ್ನು ಪ್ಲೇ ಮಾಡುವವರೆಗೂ ನಾನು ಹಾಲ್‌ಗೆ ಹೋಗುವುದಿಲ್ಲ, ನಾನು ಮೊದಲೇ ಹೇಳಿದ ಹಾಡನ್ನು ಯಾಕೆ ಹಾಕಲಿಲ್ಲ ಎಂದು ಹೇಳುತ್ತಾ ತನ್ನ ಜೊತೆಗಿದ್ದವರ ಮುಂದೆ ಭಾವುಕಳಾಗುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ಘಟನೆ ಎಲ್ಲಿ ನಡೆದಿದೆ ಎನ್ನುವ ಬಗ್ಗೆ ಉಲ್ಲೇಖವಾಗಿಲ್ಲ. ಆದರೆ ಮದುಮಕ್ಕಳು ಹೇಗೆಲ್ಲಾ ವರ್ತಿಸುತ್ತಾರೆ ಎಂಬ ಬಗ್ಗೆ ಇದರಲ್ಲಿ ವಿವರಿಸಲಾಗಿದೆ. ಕರೊನಾದ ಈ ಸಮಯದಲ್ಲಿ ಅದ್ಧೂರಿ ಮದುವೆ ಮಾಡಿಕೊಳ್ಳಲು ಸಾಧ್ಯವಾಗದ ಮದುಮಕ್ಕಳು ಇನ್ನೂ ಬೇರೆಯದ್ದಕ್ಕೆ ಆಸೆ ಪಡುವುದು ಸಜಯವಾಗಿದೆ. ಮಾಡಿಕೊಳ್ಳುತ್ತಿರುವ ಸಿಂಪಲ್‌ ಮದುವೆಯಲ್ಲಿ ಹೀಗೇ ಏನಾದರೂ ಹೊಸ ವಿಶೇಷ ಇರಲಿ ಎಂದು ಬಯಸುತ್ತಿದ್ದಾರೆ. ಆದರೆ ಹೀಗೆ ಆಗದಿದ್ದಾಗ ಹೇಗೆ ಬೇಸರ ಪಟ್ಟುಕೊಳ್ಳುತ್ತಾರೆ ಎನ್ನುವುದನ್ನು ಈ ವಿಡಿಯೋ ತೋರಿಸಿಕೊಟ್ಟಿದೆ.

ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net