ಸಪ್ತಪದಿ ತುಳಿಯುತ್ತಲೇ ಮನಸ್ಸು ಬದಲಿಸಿದ ವಧು- ಆರನೇ ಹೆಜ್ಜೆಗೆ ಮಂಟಪಬಿಟ್ಟು ಹೊರನಡೆದಳು!

phera
Published on

ಜಾನ್ಪುರ (ಉತ್ತರ ಪ್ರದೇಶ): ಮದುವೆಗೆ ಸಂಬಂಧಿಸಿದಂತೆ ಅದ್ಯಾಕೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಗಳು ವೈರಲ್‌ ಆಗುತ್ತಿವೆ. ಚಿತ್ರ- ವಿಚಿತ್ರ ಎನ್ನಿಸುವಂಥ ಘಟನೆಗಳು ಮದುವೆ ಮಂಟಪದಲ್ಲಿ ನಡೆದಿರುವ ಬಗ್ಗೆ ವಿಡಿಯೋ ಸಹಿತ ಸುದ್ದಿಯಾಗುತ್ತಿದ್ದು, ನೋಡುಗರಿಗೆ ಒಂದು ರೀತಿಯಲ್ಲಿ ಮನರಂಜನೆಯನ್ನು ನೀಡುತ್ತಿದೆ. ಆದರೆ ಮದುವೆ ಮಂಟಪದಲ್ಲಿ ಈ ಸ್ಥಿತಿಯನ್ನು ಅನುಭವಿಸಿದವರ ಪಾಡು ಮಾತ್ರ ಅವರಿಗೇ ಪ್ರೀತಿ.

ಅಂಥದ್ದೇ ಒಂದು ಘಟನೆ ಇದೀಗ ಉತ್ತರ ಪ್ರದೇಶದ ಜಾನ್ಪುರದ ಕುಲ್ಪಾದ್‌ ತಾಲೂಕಿನ ಬಾಮಹೋ ಗ್ರಾಮದಿಂದ ವರದಿಯಾಗಿದೆ. ಅಗ್ನಿಸಾಕ್ಷಿಯಾಗಿ ವರನ ಜತೆ ಸಪ್ತಪದಿ ತುಳಿಯುತ್ತಿದ್ದ ವಧು ಆರನೇ ಹೆಜ್ಜೆ ಇಡುವಷ್ಟರಲ್ಲಿಯೇ ಮದುವೆಯೇ ಬೇಡವೆಂದು ಮಂಟಪದಿಂದ ಹೊರಕ್ಕೆ ಬಂದಿರುವ ವರದಿಯಾಗಿದೆ.

ವರ ತನಗೆ ಇಷ್ಟವಾಗಲಿಲ್ಲ ಎಂಬ ಕಾರಣ ನೀಡಿ ಆಕೆ ಆತನನ್ನು ತಿರಸ್ಕರಿಸಿದ್ದಾಳೆ. ಆಕೆಯ ಮನವೊಲಿಸುವ ಎಷ್ಟೇ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ, ಇದು ಒತ್ತಾಯದ ಮದುವೆ, ನನಗೆ ಇಷ್ಟವಿಲ್ಲ ಎಂದಿದ್ದಾಳೆ. ನಂತರ ಈ ಪ್ರಕರಣ ಪಂಚಾಯಿತಿಗೂ ಹೋಯಿತು. ಆದರೆ ಮದುಮಗಳ ಜಪ್ಪಯ್ಯ ಎಂದರೂ ಒಪ್ಪದ ಕಾರಣ, ಮದುವೆ ರದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net