

ಮದುವೆಗಳಲ್ಲಿ ಚಿತ್ರ ವಿಚಿತ್ರ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಆದರೆ ಮದುವೆ ಸಮಾರಂಭಗಳಲ್ಲಿ ಭಾಗಿಯಾಗಿದ್ದವರಿಗೆ ಮಾತ್ರ ಆ ಸನ್ನಿವೇಶಗಳನ್ನು ನೋಡಲು ಸಿಗುತ್ತಿತ್ತು. ಆದರೀತ ಜಾಲತಾಣಗಳಲ್ಲಿ ಅವುಗಳನ್ನು ಶೇರ್ ಮಾಡಲು ಅವಕಾಶ ಇರುವ ಕಾರಣ, ಭಯಾನಕ, ಹಾಸ್ಯಾಸ್ಪದ, ವಿಚಿತ್ರ, ನಂಬಲು ಅಸಾಧ್ಯವಾದಂಥ ಮದುವೆ ಘಟನೆಗಳು ವೈರಲ್ ಆಗುತ್ತಿವೆ.
ಇತ್ತೀಚಿನ ದಿನಗಳಲ್ಲಿ ಮದುವೆಯ ವೈರಲ್ ವಿಡಿಯೋ ಹೆಚ್ಚುತ್ತಿದ್ದಂತೆಯೇ ಈಗ ಇನ್ನೊಂದು ಇಂಥದ್ದೇ ವಿಡಿಯೋ ಜಾಲತಾಣದಲ್ಲಿ ಸಕತ್ ಸುದ್ದಿ ಮಾಡುತ್ತಿದೆ. 2018ರಲ್ಲಿ ತೆಗೆದಿರುವ ಈ ವಿಡಿಯೋ ಇದೀಗ ಯಾರೋ ಶೇರ್ ಮಾಡಿದ್ದು, ಹೊಸ ವಿಡಿಯೋ ಎಂಬಂತೆ ಎಲ್ಲೆಡೆ ಹರಿದಾಡುತ್ತಿದೆ.
ಈ ವಿಡಿಯೋದಲ್ಲಿ ಮದುವೆಯ ವೇಳೆ ವಧು-ವರರು ಮಾಲೆ ಹಾಕಿಕೊಳ್ಳುವ ಸಮಯ. ವರ ವಧುವಿಗೆ ಮಾಲೆ ಹಾಕುತ್ತಾನೆ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ವರ ಮತ್ತು ವಧುವನ್ನು ಬೇರೆ ಯಾರಾದರೂ ಎತ್ತಿ ಹಿಡಿಯುತ್ತಾರೆ. ಇಲ್ಲಿ ಕೂಡ ಅದೇ ರೀತಿಯಾಗಿದೆ. ವರನನ್ನು ಎತ್ತಿಹಿಡಿದ ಕಾರಣ, ಅಲ್ಲಿದ್ದ ಒಬ್ಬರು ಮಾಲೆ ಹಾಕುವ ಸಂದರ್ಭದಲ್ಲಿ ವಧುವನ್ನೂ ಎತ್ತಿಹಿಡಿದಿದ್ದಾರೆ. ವಧು ವರನಿಗೆ ಮಾಲೆ ಹಾಕಿದ್ದಾಳೆ. ಆದರೆ ಅವಳಿಗೆ ಏನಾಯಿತೋ ಗೊತ್ತಿಲ್ಲ, ಕೆಳಕ್ಕೆ ಇಳಿಯುತ್ತಿದ್ದಂತೆಯೇ ತನ್ನನ್ನು ಎತ್ತಿದವನ ಕಪಾಳಕ್ಕೆ ಹೊಡೆದಿದ್ದಾಳೆ.
ಅವನಿಗೆ ಏನಾಯಿತು ಎಂದು ತಿಳಿಯದೇ ಪಕ್ಕದಲ್ಲಿ ಇದ್ದ ಮಹಿಳೆ ಕೆನ್ನೆಗೆ ಹೊಡೆದು ಹೋಗಿದ್ದಾನೆ. ಇವಿಷ್ಟು ಘಟನೆಗಳು ಈಗ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇಲ್ಲಿದೆ ನೋಡಿ ವಿಡಿಯೋ: