ಬಾಯ್​ಫ್ರೆಂಡ್​ ಜತೆ ಮದ್ವೆ ಮಾಡ್ಸಿ ಅಂತ ಬ್ಯಾನರ್​ ಏರಿಕುಳಿತ ಬಾಲಕಿ!

banner
Published on

ಭೋಪಾಲ್​: ಇಷ್ಟಪಟ್ಟ ಹುಡುಗಿ ಅಥವಾ ಹುಡುಗನ ಜತೆ ಮದುವೆ ಮಾಡಿಸಲು ಪಾಲಕರು ಒಪ್ಪುತ್ತಿಲ್ಲವಾದರೆ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ.

ಆದರೆ ಇಲ್ಲೊಂದು ಸ್ವಲ್ಪ ವಿಭಿನ್ನ ಪ್ರಕರಣದಲ್ಲಿ, ಪ್ರೀತಿಸಿದವನ ಜತೆ ಮದುವೆ ಮಾಡಿಸಿಲ್ಲ ಎನ್ನುವ ಕಾರಣಕ್ಕೆ ರಸ್ತೆ ಬದಿಯಲ್ಲಿ ಅಳವಡಿಸಿದ್ದ ಬ್ಯಾನರ್​ ಮೇಲೆ ರಾತ್ರಿ ವೇಳೆ ಹತ್ತಿ ಕುಳಿತ ಘಟನೆ ನಡೆದಿದೆ. ವಿಚಿತ್ರ ಎಂದರೆ ಇಂಥ ದುಸ್ಸಾಹಸಕ್ಕೆ ಕೈಹಾಕಿದವಳು ಒಬ್ಬಳು ಅಪ್ರಾಪ್ತ ವಯಸ್ಸಿನವಳು!

ಮಧ್ಯ ಪ್ರದೇಶದ ಇಂದೋರ್​ನಲ್ಲಿ ನಡೆದಿರುವ ಈ ಘಟನೆ ಇದೀಗ ಭಾರಿ ವೈರಲ್​ ಆಗಿದ್ದು, ಬಾಲಕಿ ಬ್ಯಾನರ್​ ಹತ್ತಿ ಕುಳಿತಿರುವ ಫೋಟೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಇಂದೋರ್​ನ ಭಂಡಾರಿ ಸೇತುವೆ ಬಳಿ ಅಳವಡಿಸಲಾಗಿರುವ ಬ್ಯಾನರ್ ಮೇಲೆ ಹತ್ತಿ ಕುಳಿತಿದ್ದಾಳೆ ಈ ಬಾಲಕಿ. ಇದಕ್ಕೆ ಕಾರಣ, ಈಕೆ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದಾಳೆ. ಆದರೆ ಅವನ ಜತೆ ಮದುವೆಯಾಗಲು ಈಕೆಯ ಕುಟುಂಬಸ್ಥರು ಒಪ್ಪುತ್ತಿಲ್ಲ ಎನ್ನುವ ಕಾರಣಕ್ಕೆ!

ಬ್ಯಾನರ್​ ಮೇಲಿನಿಂದ ಯಾವ ಕ್ಷಣದಲ್ಲಾದರೂ ಕೆಳಕ್ಕೆ ಬೀಳುವ ಅಪಾಯ ಇದ್ದುದರಿಂದ ಕೊನೆಗೂ ಮಗಳ ಹಠಕ್ಕೆ ಮಣಿಸಿದ್ದಾರೆ. ಎಷ್ಟೇ ಮನವಿ ಮಾಡಿಕೊಂಡರೂ ಬಾಲಕಿ ಕೆಳಗೆ ಬರದ ಕಾರಣ, ಆಕೆಯ ಬಾಯ್​ಫ್ರೆಂಡ್​ನನ್ನು ಕರೆಸಿ ಮಾತನಾಡಿಸಿದ ನಂತರ ಕೆಳಕ್ಕೆ ಬಂದಿದ್ದಾಳಂತೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net