ಬ್ಲ್ಯಾಕ್‌ ಫಂಗಸ್‌ ಬರುವುದು ಹೇಗೆ? ಆರೋಗ್ಯ ಸಚಿವ ಸುಧಾಕರ್‌ ಕೊಟ್ಟಿರುವ ಮಾಹಿತಿ ಇಲ್ಲಿದೆ ನೋಡಿ...

black fungus
Published on

ಬೆಂಗಳೂರು: ಕರೊನಾ ಎರಡನೆಯ ಅಲೆಯ ನಡುವೆ ಬ್ಲ್ಯಾಂಕ್‌ ಫಂಗಸ್‌ ಮಹಾಮಾರಿ ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿದೆ. ಇದರಿಂದಾಗಿ ಇದಾಗಲೇ ಹಲವರು ಜೀವ ಕಳೆದುಕೊಂಡಿದ್ದರೆ, ಮತ್ತೆ ಹಲವರು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ.

ನಾವು ತೆಗೆದುಕೊಳ್ಳುತ್ತಿರುವ ಔಷಧಲ್ಲಿ ಸ್ಟಿರಾಯ್ಡ್‌ ಪ್ರಮಾಣ ಹೆಚ್ಚಾಗಿದ್ದರೆ ಈ ಸೋಂಕು ತಗುಲುತ್ತದೆ ಎಂಬ ಬಗ್ಗೆ ಇದಾಗಲೇ ಸಾಕಷ್ಟು ವೈದ್ಯರು ಹೇಳಿದ್ದಾರೆ. ಇದೀಗ ಬ್ಲ್ಯಾಕ್ ಫಂಗಸ್ ಸೋಂಕಿನ ಕುರಿತಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಟ್ವೀಟ್‌ ಮೂಲಕ ಮಾಹಿತಿಯೊಂದನ್ನು ನೀಡಿದ್ದಾರೆ.

ಅದೇನೆಂದರೆ, ಬ್ಲ್ಯಾಕ್‌ ಫಂಗಸ್ ಅಪರೂಪದ ಸೋಂಕು, ಮಣ್ಣು, ಗಿಡಗಳು ಹಾಗೂ ಕೊಳೆಯುತ್ತಿರುವ ತರಕಾರಿಗಳಲ್ಲಿ ಕಂಡುಬರುವ ಶಿಲೀಂಧ್ರ ತೆರೆದ ಚರ್ಮ ಅಥವಾ ಉಸಿರಾಟದ ಮೂಲಕ ನಮ್ಮ ದೇಹ ಪ್ರವೇಶಿಸುತ್ತದೆ ಎಂದು ಹೇಳಿದ್ದಾರೆ. ಬ್ಲ್ಯಾಕ್‌ ಫಂಗಸ್ ವಿರುದ್ಧ ನಾವೆಲ್ಲಾ ಹೋರಾಡಬೇಕಿದೆ ಎಂದು ಅವರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net