ನಾಲ್ಕು ತಿಂಗಳಲ್ಲಿ 100 ಕಿ.ಮೀ. ಪ್ರಯಾಣಿಸಿತು ಈ ಹುಲಿ: ಭಾರತದಿಂದ ಬಾಂಗ್ಲಾದತ್ತ ನದಿ ದಾಟಿ ಪಯಣ...

tiger
Published on

ಮ್ಯಾಂಗ್ರೋವ್ಸ್ (ಬಾಂಗ್ಲಾದೇಶ): ಭಾರತದ ಕಾಡಿನಲ್ಲಿದ್ದ ಹುಲಿಯೊಂದು ನಾಲ್ಕು ತಿಂಗಳಲ್ಲಿ 100 ಕಿಲೋಮೀಟರ್​ ಪ್ರಯಾಣಿಸಿರುವುದು ಪತ್ತೆಯಾಗಿದೆ. ಈ ಹುಲಿ ಭಾರತದಿಂದ ಬಾಂಗ್ಲಾದೇಶದ ಮ್ಯಾಂಗ್ರೋವ್ಸ್​ ಕಾಡಿಗೆ ಪಯಣಿಸಿದೆ.

ಅಷ್ಟು ಮಾತ್ರವಲ್ಲದೇ ಇದು ಒಂದು ಕಿಲೋಮೀಟರ್​ಗೂ ಹೆಚ್ಚು ಉದ್ದದ ನದಿಯನ್ನೂ ದಾಟಿದೆ. ಇಷ್ಟೆಲ್ಲಾ ಕಂಡುಹಿಡಿಯಲು ಸಾಧ್ಯವಾದದ್ದು ಅದಕ್ಕೆ ಅಳವಡಿಸಿದ್ದ ರೇಡಿಯೋ ಕಾಲರ್‌ನಿಂದಾಗಿ. ಈ ಹುಲಿ ಎಷ್ಟು ಸಂಚರಿಸಬಹುದು ಎಂಬ ಬಗ್ಗೆ ಪತ್ತೆ ಹಚ್ಚಲು ಅದಕ್ಕೆ ರೇಡಿಯೋ ಕಾಲರ್‌ ಅಳವಡಿಸಲಾಗಿತ್ತು. ಅದರ ಮೂಲಕ ಇದು 100 ಕಿಲೋ ಮೀಟರ್‌ ಪ್ರಯಾಣ ಬೆಳೆಸಿರುವುದು ಪತ್ತೆಯಾಗಿದೆ ಎಂದು ಎಂದು ಪಶ್ಚಿಮ ಬಂಗಾಳದ ವನ್ಯಜೀವಿಗಳ ವಾರ್ಡನ್​ ಮುಖ್ಯಸ್ಥ ವಿ.ಕೆ. ಯಾದವ್​ ಮಾಹಿತಿ ನೀಡಿದ್ದಾರೆ.

ಅಂದಹಾಗೆ ಇದು ಗಂಡುಹುಲಿಯಾಗಿದ್ದು, ಇದಕ್ಕೆ ರೇಡಿಯೋ ಕಾಲರ್‌ ಅಳವಡಿಸಿದ್ದು 2020ರ ಡಿಸೆಂಬರ್‌ ತಿಂಗಳಿನಲ್ಲಿ. ಈ ಸುದೀರ್ಘ ಪ್ರಯಾಣದಲ್ಲಿ ಹುಲಿಯು ಎಲ್ಲಿಯೂ ಮನುಷ್ಯರು ಇರುವ ಜಾಗಗಳಿಗೆ ಹೋಗಿಲ್ಲ ಎನ್ನುವುದು ತಿಳಿದುಬಂದಿದೆ.

ಇದು ಹೋಗಿರುವ ಮಾರ್ಗದ ಕುರಿತು ಮಾಹಿತಿ ನೀಡಿರುವ ಯಾದವ್‌ ಅವರು, ಡಿಸೆಂಬರ್​ 27ರಂದು ತನ್ನ ಪ್ರಯಾಣ ಆರಂಭಿಸಿದ ಹುಲಿ ಮೇ 11ರಂದು ಬಾಂಗ್ಲಾದೇಶ ತಲುಪಿದೆ. ಈ ನಡುವೆ ಮೂರು ದ್ವೀಪಗಳನ್ನ ಅದು ದಾಟಿದೆ. ರೇಡಿಯೋ ಕಾಲರ್‌ ಹಾಕಿದ ಕೆಲವು ದಿನ ಹುಲಿ ಭಾರತದಲ್ಲಿಯೇ ಇತ್ತು. ನಂತರ ಬಾಂಗ್ಲಾದೇಶದ ಸುಂದರ್​ ಬನದ ತಲ್ಪಟ್ಟಿ ದ್ವೀಪಕ್ಕೆ ಹೋಗಿದೆ ಅಲ್ಲಿಂದ ಛೊಟೊ, ಹರಿಕಾಲಿ, ಬೋರೋ ಹರಿಕಾಲಿ ಹಾಗೂ ರೈಮಂಗಾಲ್​ ಸೇರಿದಂತೆ ವಿವಿಧ ನದಿಗಳನ್ನು ದು ದಾಟಿ ಹೋಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net