More

    ಗ್ರಾಹಕರೇ ಗಮನಿಸಿ: ಈ ಬ್ಯಾಂಕ್‌ನ ಐಎಫ್‌ಎಸ್‌ಸಿ ಕೋಡ್‌, ಚೆಕ್‌ಬುಕ್‌ ಶೀಘ್ರದಲ್ಲಿ ಅಮಾನ್ಯ!

    ನವದೆಹಲಿ: ಕೆನರಾ ಬ್ಯಾಂಕ್‌ ಸಿಂಡಿಕೇಟ್‌ ಬ್ಯಾಂಕ್‌ ಜತೆ ವಿಲೀನ ಆಗಿರುವ ಹಿನ್ನೆಲೆಯಲ್ಲಿ ಸಿಂಡಿಕೇಟ್‌ ಬ್ಯಾಂಕ್‌ನ ಹಾಲಿ ಇರುವ ಐಎಫ್‌ಎಸ್‌ಸಿ ಕೋಡ್‌ ಮತ್ತು ಚೆಕ್‌ಬುಕ್‌ಗಳು ಬರುವ ಜುಲೈ 1ರಿಂದ ಅಮಾನ್ಯವಾಗಲಿದೆ.

    ಸಿವೈಎನ್‌ಬಿ (ಸಿಂಡಿಕೇಟ್‌ ಬ್ಯಾಂಕ್‌) ಎಂದು ಆರಂಭವಾಗಿರುವ ಐಎಫ್‌ಎಸ್‌ಸಿ ಕೋಡ್‌ ಜುಲೈ 1ರಿಂದ ಸಿಎನ್‌ಆರ್‌ಬಿ (ಕೆನರಾ ಬ್ಯಾಂಕ್‌) ಎಂದು ಬದಲಾಗಲಿದೆ. ಈ ಕುರಿತು ಕೆನರಾ ಮತ್ತು ಸಿಂಡಿಕೇಟ್‌ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಸಂದೇಶಗಳನ್ನು ರವಾನಿಸುವ ಪ್ರಕ್ರಿಯೆಯಲ್ಲಿ ತೊಡಗಿವೆ.

    ಸದ್ಯ ತನ್ನ ವೆಬ್‌ಸೈಟ್‌ನಲ್ಲಿ ಈ ವಿಷಯವನ್ನು ಕೆನರಾ ಬ್ಯಾಂಕ್ ಹೇಳಿದೆ. ಸಿವೈಎನ್‌ಬಿಯಿಂದ ಪ್ರಾರಂಭವಾಗುವ ಎಲ್ಲಾ ಐಎಫ್‌ಎಸ್‌ಸಿ ಕೋಡ್‌ ಅನ್ನು ಜುಲೈ 1ರಿಂದ ನಿಷ್ಕ್ರಿಯಗೊಳಿಸಲಾಗುವುದು. ಇನ್ನು ಮೇಲೆ ಎನ್‌ಇಎಫ್‌ಟಿ/ಆರ್‌ಟಿಜಿಎಸ್‌/ ಐಎಂಪಿಎಸ್ ಕಳುಹಿಸುವಾಗ ಈ ಹೊಸ ಐಎಫ್‌ಎಸ್ಸಿ ಕೋಡ್‌ ಮಾತ್ರ ಬಳಸಬೇಕು ಎಂದು ತಿಳಿಸಿದೆ.

    ಬದಲಾವಣೆ ಹೇಗೆ?
    ಸಿಂಡಿಕೇಟ್‌ ಬ್ಯಾಂಕ್‌ನ ಐಎಫ್‌ಎಸ್‌ಸಿ ಕೋಡ್‌ನ ಮೊದಲ ಮೂರು ಅಂಕೆಗಳು ಬದಲಾಗಲಿವೆ. ಇದರ ಅರ್ಥ ಈ ಮೊದಲು CYNB 0003687 ಆಗಿದ್ದರೆ, ಜುಲೈ 1ರಿಂದ ಅವು CNRB 0013687 ಆಗಿರುತ್ತದೆ.

    ಇದರ ಜತೆಗೆ ಚೆಕ್‌ನಲ್ಲಿಯೂ ಬದಲಾವಣೆ ಆಗಲಿದೆ. ಆದ್ದರಿಂದ ಯಾರೇ ಆಗಿರಲಿ ಹಳೆಯ ಚೆಕ್‌ ನೀಡಿದ್ದೇ ಆಗಿದ್ದಲ್ಲಿ, ಜುಲೈ 1ರ ನಂತರ ಅದನ್ನು ಬದಲಾವಣೆ ಮಾಡಬೇಕಿದೆ.
    ಈ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿದ್ದರೆ, ಕೆನರಾ ಬ್ಯಾಂಕ್ ಅಧಿಕೃತ ವೆಬ್‌ಸೈಟ್‌ ಕ್ಲಿಕ್‌ ಮಾಡಿ. http://www.canarabank.com ಇಲ್ಲವೇ ಸಮೀಪದ ಕೆನರಾ ಬ್ಯಾಂಕ್ ಶಾಖೆ ಅಥವಾ ಕಸ್ಟಮರ್‌ ಕೇರ್‌ ನಂಬರ್‌ 1800 425 0018 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಬ್ಯಾಂಕ್‌ ಹೇಳಿದೆ.

    ಸಿನಿಮಾದಲ್ಲಿ ರೋಹಿಣಿ ಸಿಂಧೂರಿ! ಲಾಕ್‌ಡೌನ್‌ ನಂತರ ಸೆಟ್ಟೇರಲಿದೆ ಬಯೋಪಿಕ್‌ ‘ಭಾರತ ಸಿಂಧೂರಿ’

    ಲಸಿಕೆ ಪಡೆದು ಅಖಿಲೇಶ್‌ಗೆ ಅಪ್ಪ ಕೊಟ್ರು ಶಾಕ್‌- ಟ್ವಿಟರ್‌ನಲ್ಲಿ ಫೋಟೋ: ಮಾಜಿ ಸಿಎಂಗೆ ಭಾರಿ ಮುಜುಗರ!

    ಬೆಂಗಳೂರಿನಲ್ಲಿ ಇಂಜಿನಿಯರ್‌: ಈತ ಸ್ಯೂಸೈಡ್‌ ಬಾಂಬರ್‌- ಲಿಬಿಯಾದಲ್ಲಿ ಆತ್ಮಹತ್ಯಾ ದಾಳಿಯಲ್ಲಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts