More

    ಚುನಾವಣೆ ವ್ಯವಸ್ಥೆ ಸುಧಾರಣೆ ಆಗಲಿ: ಡಿ.ಎಸ್.ಅರುಣ್

    ಶಿವಮೊಗ್ಗ: ಚುನಾವಣೆ ವ್ಯವಸ್ಥೆಯಲ್ಲಿನ ಸುಧಾರಣೆಗೆ ಎಲ್ಲರೂ ಸಹಕಾರ ನೀಡಬೇಕು. ಜನರು ಬದಲಾದಾಗ ಮಾತ್ರ ಸಮಾಜದ ಬದಲಾವಣೆ ಸಾಧ್ಯ. ಈ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸುವಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

    ಜಿಲ್ಲಾ ಮತದಾರರ ಜಾಗೃತ ವೇದಿಕೆ ಮಂಗಳವಾರ ಏರ್ಪಡಿಸಿದ್ದ ಚುನಾವಣೆ ಸುಧಾರಣೆ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 97 ಕೋಟಿ ಮತದಾರರು ಮತ ಚಲಾಯಿಸುವ ಅವಕಾಶ ಹೊಂದಿದ್ದಾರೆ. ಮತದಾನದ ದಿನ ಮನೆಯಿಂದಲೇ ಹೊರಬಾರದ ಅನೇಕ ಮಂದಿಯಿದ್ದಾರೆ. ಅವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ. ಮತದಾರ ಜಾಗೃತನಾಗಿರಬೇಕೇ ಹೊರತು ಆತನಲ್ಲಿ ಜಾಗೃತಿ ಮೂಡಿಸುವಂತಾಗಬಾರದು ಎಂದರು.
    ವೈದ್ಯೆ ಡಾ. ರಂಜಿನಿ ಬಿದರಹಳ್ಳಿ ಮಾತನಾಡಿ, ಶಿವಮೊಗ್ಗ ಸುಶಿಕ್ಷಿತರ ಜಿಲ್ಲೆ ಎಂದು ಹೆಸರು ಪಡೆದಿದೆ. ಆದರೆ ಇಲ್ಲಿಯೇ ಮತದಾನ ಕಡಿಮೆಯಾಗುತ್ತಿದೆ. ಮತದಾನ ಜಾಗೃತಿ ಎನ್ನುವುದು ಮುಜುಗರ ತರುವ ಕೆಲಸ. ಮತದಾರ ಏಕೆ ಮತದಾನ ಮಾಡುವುದಿಲ್ಲ? ಎನ್ನುವ ಪ್ರಶ್ನೆ ಸದಾ ಎದುರಾಗುತ್ತದೆ ಎಂದು ಹೇಳಿದರು.
    ಸಹಕಾರ ಕ್ಷೇತ್ರದಲ್ಲಿ ಸಭೆಗೆ ಸತತ ಹಾಜರಾಗದಿದ್ದರೆ ಅಂಥವರನ್ನು ನಿರ್ದೇಶಕ ಸ್ಥಾನದಿಂದ ಅಮಾನತು ಮಾಡುವ ಕಾಯ್ದೆ ಇದೆ. ಆ ಕಾಯ್ದೆ ಇಲ್ಲಿಯೂ ಜಾರಿಯಾಗಬೇಕಿದೆ. ಮತದಾನ ಮಾಡದವರಿಗೆ ಶಿಕ್ಷೆ ಕೊಡುವಂತಾಗಬೇಕು. ಅವರನ್ನು ಎಲ್ಲರೂ ಪ್ರಶ್ನಿಸಬೇಕು. ಇಲ್ಲಿಯವರೆಗೆ ಸತತ ಜಾಗೃತಿ ಮೂಡಿಸಿದ್ದು ಸಾಕು. ಇನ್ನೂ ಇದನ್ನು ಮುಂದುವರಿಸುವುದು ಸಲ್ಲದು ಎಂದರು.
    ರೈತ ಮುಖಂಡ ಕೆ.ಟಿ.ಗಂಗಾಧರ ಮಾತನಾಡಿ, ರಾಜಕೀಯ ಪಕ್ಷಗಳ ಆಧಾರದ ಮೇಲೆ ಚುನಾವಣೆ ನಡೆಯುವುದು, ಅವರ ಅಪವಿತ್ರ ಮೈತ್ರಿ, ತಳಬುಡವಿಲ್ಲದ ಸಿದ್ಧಾಂತಗಳು, ಅಪಮೌಲ್ಯಗೊಳಿಸಿದ ಆಡಳಿತ ಇವೆಲ್ಲವೂ ಮತದಾರರನನ್ನು ಭ್ರಮನಿರಸನಗೊಳಿಸಿವೆ. ಆದ ಕಾರಣ ಎಷ್ಟೋ ಮತದಾರರು ಬೇಸರಗೊಂಡು ಮತ ಹಾಕುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
    ವೇದಿಕೆ ಅಧ್ಯಕ್ಷ ಶೇಖರ್ ಗೌಳೇರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಜಿ .ಶಿವಮೂರ್ತಿ, ವೈದ್ಯ ಡಾ.ಪ್ರೀತಂ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ, ಪತ್ರಕರ್ತ ಎಸ್.ಚಂದ್ರಕಾಂತ್, ರೋಟರಿ ವಿಜಯಕುಮಾರ್, ಕೆ.ಸಿ.ಬಸವರಾಜ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts