More

    ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕಾದ ಸರ್ಕಾರವೇ ಇಂದು ಅವರನ್ನು ಬೀದಿಗೆ ತಂದಿದೆ: ನಿಖಿಲ್ ಕುಮಾರಸ್ವಾಮಿ

    ಮಂಡ್ಯ: ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಂಡ್ಯದಲ್ಲಿ ಮಾತನಾಡಿದ ಜೆಡಿಎಸ್​ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪೆನ್‌ಡ್ರೈವ್ ವಿಚಾರವಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಅದನ್ನು ನಾವು ಸ್ವಾಗತ ಮಾಡ್ತೀವಿ. ಆರೋಪ ಬಂದಾಗ ನಾವು ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಸುಖ ನಿದ್ರೆಗಾಗಿ ಈಕೆ ಮಾಡಿದ್ದನ್ನು ಕಂಡು ದಂಗಾದ ಪ್ರಯಾಣಿಕರು! ಹಿಂದೆಂದೂ ಇಂತಹ ಘಟನೆ ಕೇಳಿರಲು ಸಾಧ್ಯವಿಲ್ಲ

    “ಈಗಾಗಲೇ ಈ ಸಂಬಂಧ ತನಿಖೆ ನಡೆಯುತ್ತಿದೆ. ಇದು ಪಾರದರ್ಶಕವಾಗಿ ನಡೆಯುತ್ತಿದ್ಯಾ ಎಂಬ ಪ್ರಶ್ನೆ ಕೇಳಿಬಂದಿದೆ. ಈ ಬಗ್ಗೆ ನಾವು ಸಭೆ ನಡೆಸಿದ್ದೇವೆ. ವಿಡಿಯೋ ಮಾಡಿರೋದು, ಬಿಟ್ಟಿರೋದು ಎರಡು ತಪ್ಪು. ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಾದ ಸರ್ಕಾರವೇ ಇದೀಗ ಅವರನ್ನು ಬೀದಿಗೆ ತಂದಿದೆ. ಪೆನ್‌ಡ್ರೈವ್ ಹಂಚಿರೋರು ಯಾರು ಎಂದು ಪತ್ತೆಹಚ್ಚಬೇಕು” ಎಂದರು.

    “ಹೆಣ್ಣುಮಕ್ಕಳನ್ನು ಬ್ಲರ್ ಮಾಡದೇ ವಿಡಿಯೋ ಬಿಟ್ಟಿದ್ದಾರೆ. ಇದರಿಂದ ಅವರ ಮಾನ ಮರ್ಯಾದೆ ಏನಾಗುತ್ತದೆ? ಅವರ ಕುಟುಂಬದ ಗತಿಯೇನು? ಅವರ ಜೀವಕ್ಕೆ ಅಪಾಯ ಬಂದರೆ ಯಾರು ಜವಾಬ್ದಾರಿ? ಬ್ಲರ್ ಮಾಡದೆ ಪೆನ್‌ಡ್ರೈನ್ ಹಂಚಿರುವ ಪಾಪಿಗಳ ವಿರುದ್ಧ ತನಿಖೆಯಾಗಬೇಕು. ಈ ಕೇಸ್​ನ ಸಿಬಿಐಗೆ ಕೊಡಿ. ನಿಮಗೆ ಎಸ್‌ಐಟಿ ಮೇಲೆ ನಂಬಿಕೆ ಇಲ್ಲ ಅಂದ್ರೆ ಸಿಬಿಐಗೆ ಹಸ್ತಾಂತರಿಸಿ” ಎಂದಿದ್ದಾರೆ.

    ಹಾರ್ದಿಕ್​ಗೆ ತಪ್ಪಲಿಲ್ಲ ಛೀಮಾರಿ! ಅಂದೇ ಈ ನಿರ್ಧಾರದಲ್ಲಿ ಬದಲಾವಣೆ ತಂದಿದ್ರೆ ಇಂದು ಈ ಪರಿಸ್ಥಿತಿ ಬರ್ತಿರಲಿಲ್ಲ

    ಸುಖ ನಿದ್ರೆಗಾಗಿ ಈಕೆ ಮಾಡಿದ್ದನ್ನು ಕಂಡು ದಂಗಾದ ಪ್ರಯಾಣಿಕರು! ಹಿಂದೆಂದೂ ಇಂತಹ ಘಟನೆ ಕೇಳಿರಲು ಸಾಧ್ಯವಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts