More

    ‘ಅಲ್ಲಾ ಸ್ವಾಮಿ… 10 ವರ್ಷ ನಿಮ್ದೇ ಸರ್ಕಾರ ಇತ್ತಲ್ಲ… ಆವಾಗ್ಯಾಕೆ ಭಾರತ ರತ್ನ ಕೊಟ್ಟಿಲ್ಲ?’

    ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಹುಜನ್​ ಸಮಾಜ್​ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಇಬ್ಬರೂ ಭಾರತ ರತ್ನ ಪ್ರಶಸ್ತಿಗೆ ಅರ್ಹರು ಎಂದಿರುವ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಇವರಿಗೆ ಈ ಗೌರವ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿನ್ನೆ ಒತ್ತಾಯ ಮಾಡಿದ್ದರು.

    ಸೋನಿಯಾ ಗಾಂಧಿ ಮತ್ತು ಮಾಯಾವತಿ ಅವರು ಮಹಿಳಾ ಸಬಲೀಕರಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ಭಾರತ ರತ್ನಕ್ಕೆ ಅರ್ಹರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾವತ್​ ಟ್ವೀಟ್​ ಮೂಲಕ ತಿಳಿಸಿದ್ದರು.

    'ಅಲ್ಲಾ ಸ್ವಾಮಿ... 10 ವರ್ಷ ನಿಮ್ದೇ ಸರ್ಕಾರ ಇತ್ತಲ್ಲ... ಆವಾಗ್ಯಾಕೆ ಭಾರತ ರತ್ನ ಕೊಟ್ಟಿಲ್ಲ?'

    ಈ ಇಬ್ಬರೂ ಮಹಿಳಾ ಸಬಲೀಕರಣ ಮತ್ತು ಸಾರ್ವಜನಿಕ ಸೇವೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ಟ್ವೀಟ್​ ಅನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್​ ಮಾಡಿರುವ ರಾವತ್​, ‘ನೀವು ಅವರ ರಾಜಕೀಯವನ್ನು ಒಪ್ಪಬಹುದು ಅಥವಾ ಒಪ್ಪದಿರಬಹುದು ಆದರೆ ಸೋನಿಯಾಜಿಯವರ ಘನತೆ, ಸಾಮಾಜಿಕ ಕಳಕಳಿ ಬಹುಮುಖ್ಯವಾದದ್ದು. ಭಾರತೀಯ ಮಹಿಳೆಯರ ಸ್ಥಾನವನ್ನು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಎತ್ತರಕ್ಕೆ ಕೊಂಡೊಯ್ದಿದ್ದಾರೆ ಈ ಇಬ್ಬರು. ಅದನ್ನು ನೀವು ತಳ್ಳಿಹಾಕುವಂತಿಲ್ಲ” ಎಂದಿದ್ದರು.

    ಮಾಯಾವತಿಯವರು ಹಲವಾರು ವರ್ಷಗಳಿಂದ ಶೋಷಿತ ಮತ್ತು ಕೆಳವರ್ಗದ ಜನರ ಪರವಾಗಿದ್ದು ಅವರಲ್ಲಿ ವಿಶ್ವಾಸ ಮೂಡಿಸಿದ್ದಾರೆ ಎಂದಿರುವ ಮಾಜಿ ಮುಖ್ಯಮಂತ್ರಿ, ಇಬ್ಬರಿಗೂ ಭಾರತ ರತ್ನ ನೀಡುವಂತೆ ಒತ್ತಾಯ ಮಾಡಿದ್ದರು.

    'ಅಲ್ಲಾ ಸ್ವಾಮಿ... 10 ವರ್ಷ ನಿಮ್ದೇ ಸರ್ಕಾರ ಇತ್ತಲ್ಲ... ಆವಾಗ್ಯಾಕೆ ಭಾರತ ರತ್ನ ಕೊಟ್ಟಿಲ್ಲ?'

    ಇದಕ್ಕೆ ತೀಕ್ಷ್ಮವಾಗಿ ಪ್ರತಿಕ್ರಿಯೆ ನೀಡಿರುವ ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್, ಭಾರತ ರತ್ನ ಕೊಡಿ ಎಂದು ಈಗ ಹೇಳುತ್ತೀರಲ್ಲ. ಈ ಕೆಲಸವನ್ನು ಕಾಂಗ್ರೆಸ್ ಪಕ್ಷ ತನ್ನ 10 ವರ್ಷಗಳ ಅಧಿಕಾರಾವಧಿಯಲ್ಲಿ ಮಾಡಿಕೊಳ್ಳಬಹುದಿತ್ತಲ್ಲ. ನಿಮ್ಮದೇ ಪಕ್ಷದವರು ಎರಡು ಅವಧಿವರೆಗೆ ಪ್ರಧಾನಮಂತ್ರಿಯಾಗಿದ್ದಲ್ಲ, ಆವಾಗ ಮಾಡಿಕೊಳ್ಳದೇ ಇದ್ದುದು ಈಗ್ಯಾಕೆ ಎಂದು ಕೇಳಿದ್ದಾರೆ.

    ಪ್ರಶಸ್ತಿಗಾಗಿ ಬೇಡಿಕೆ ಇಡುವ ಹಕ್ಕು ಎಲ್ಲರಿಗೂ ಇದೆ, ಆದರೆ ಗೌರವ ಸ್ವೀಕರಿಸುವ ಅರ್ಹತೆ ಆ ವ್ಯಕ್ತಿಯಲ್ಲಿದೆಯೇ ಎಂದು ತಿಳಿದುಕೊಳ್ಳಬೇಕು ತಾನೆ? ನಿಮ್ಮದೇ ಸರ್ಕಾರ ಇದ್ದಾಗ ಕೊಡದೇ ಈಗ ಕೊಡಿ ಎಂದರೆ ಹೇಗೆ? ಈ ವಿಷಯವನ್ನು ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಯಾಕೆ ಎತ್ತಲಿಲ್ಲ ಮತ್ತು ಆಗ ಈ ಕೆಲಸವನ್ನು ಏಕೆ ಮಾಡಲಿಲ್ಲ. ಈಗ ಇದರ ಹಿಂದಿರುವ ಉದ್ದೇಶವೇನು ಎಂದು ವ್ಯಂಗ್ಯವಾಡಿದ್ದಾರೆ.

    ಸೌರವ್​ ಗಂಗೂಲಿ ಡಿಸ್​ಜಾರ್ಜ್​: ಅಭಿಮಾನಿಗಳಿಗೆ ಕ್ರಿಕೆಟ್​ ತಾರೆ ಏನೆಂದ್ರು ಕೇಳಿ

    ಪತ್ನಿಗೊಂದು, ಆಕೆಗೊಂದು ಮನೆ: ಹೆಂಡ್ತಿ ಕೈಲೇ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕೊಪ್ಪಳದ ಇಂಜಿನಿಯರ್​!

    ಮಂಗಳೂರಿನಲ್ಲಿಯೂ ಕಾಗೆಗಳ ನಿಗೂಢ ಸಾವು! ಕರ್ನಾಟಕಕ್ಕೂ ಬಂತಾ ಹಕ್ಕಿಜ್ವರ?

    ಲವ್​ ಮಾಡೋದು ತಪ್ಪಲ್ಲ, ಪ್ರೇಮಿಗಳನ್ನು ಶಿಕ್ಷಿಸುವುದು ಗಂಭೀರ ಅಪರಾಧ ಎಂದ ಸುಪ್ರೀಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts