More

    ಮಂಗಳೂರಿನಲ್ಲಿಯೂ ಕಾಗೆಗಳ ನಿಗೂಢ ಸಾವು! ಕರ್ನಾಟಕಕ್ಕೂ ಬಂತಾ ಹಕ್ಕಿಜ್ವರ?

    ಮಂಗಳೂರು: ಕೋವಿಡ್​-19, ರೂಪಾಂತರಿ ಕರೊನಾ ನಡುವೆ ಇಡೀ ದೇಶವನ್ನು ಆತಂಕಕ್ಕೆ ತಳ್ಳಿದೆ ಹಕ್ಕಿಜ್ವರ. ದೇಶದ ಅನೇಕ ರಾಜ್ಯಗಳಲ್ಲಿ ಕಾಗೆ, ಬಾತುಕೋಳಿಗಳು ನಿಗೂಢವಾಗಿ ಸಾಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.

    ಮಧ್ಯಪ್ರದೇಶ, ರಾಜಸ್ಥಾನ, ಕೇರಳದ ಕೊಟ್ಟಾಯಂ, ಅಲುಪ್ಪುಳದಲ್ಲಿ ಕೋಳಿ ಹಾಗೂ ಬಾತು ಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಕಾರಣದಿಂದ ಅಲ್ಲಿಯ ಸರ್ಕಾರಗಳು ಈಗಾಗಲೇ ಹೈಅಲರ್ಟ್‌ ಘೋಷಿಸಿವೆ.

    ಇದೀಗ ನಿನ್ನೆ ಮಂಗಳೂರಿನ ಹೊರವಲಯದಲ್ಲಿರುವ ಮಂಜನಾಡಿ ಗ್ರಾಮದ ಆರಂಗಡಿ ಬಳಿಯ ಗುಡ್ಡವೊಂದರಲ್ಲಿ ಆರು ಕಾಗೆಗಳು ಸತ್ತು ಬಿದ್ದಿದ್ದು, ರಾಜ್ಯಕ್ಕೂ ಹಕ್ಕಿಜ್ವರ ಕಾಲಿಟ್ಟಿದೆಯಾ ಎಂಬ ಬಗ್ಗೆ ಆತಂಕ ಶುರುವಾಗಿದೆ. ಸಾಮಾನ್ಯವಾಗಿ ಕಾಗೆಗಳು ವಿದ್ಯುತ್​ ತಗುಲು ಸಾಯುತ್ತವೆ. ಆದರೆ ಈ ಭಾಗದಲ್ಲಿ ಪರಿಶೀಲಿಸಿದಾಗ ಕಾಗೆ ಸತ್ತಿರುವ ಸುತ್ತಲೂ ವಿದ್ಯುತ್​ ತಂತಿಗಳ ಹಾದು ಹೋಗಿಲ್ಲ. ಇದರಿಂದ ಸಂಶಯ ಮತ್ತಷ್ಟು ಬಲವಾಗಿದೆ.

    ಸಮೀಪದ ಕುಟ್ಟನಾಡು ವಲಯದ 34 ಸಾವಿರ ಕೋಳಿ ಸೇರಿದಂತೆ ಕೊಟ್ಟಾಯಂನಲ್ಲಿ ಒಟ್ಟು 40 ಸಾವಿರ ಕೋಳಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ. ಜತೆಗೆ ಕೋಳಿ, ಬಾತು ಕೋಳಿ ಮೊಟ್ಟೆಗಳ ಸೇವನೆ ಹಾಗೂ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ ಎಂಬ ಸುದ್ದಿಗಳೂ ಹರಡಲು ಶುರುವಾಗಿದೆ.

    ಹಕ್ಕಿಜ್ವರದ ಭೀತಿಯಿಂದ ಮೈಸೂರು ಕೇರಳ ಗಡಿ ಪ್ರದೇಶದಲ್ಲಿ ಹಕ್ಕಿ ಹಾಗೂ ಕೋಳಿ ಸಾಗಟಕ್ಕೆ ನಿಷೇಧ ಹೇರಿಲಾಗಿದೆ. ಮೈಸೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಕ್ಕಿಜ್ವರ ಪತ್ತೆಯ ಕಾರ್ಯಾಚರಣೆಗಿಳಿದ ಪಶು ಇಲಾಖೆ ಸಿಬ್ಬಂದಿ ಮೈಸೂರು ಮೃಗಾಲಯ, ಕಾರಂಜಿ ಕೆರೆ, ಕುಕ್ಕರಳ್ಳಿಕೆರೆ, ಲಿಂಗಾಬುದಿ ಕೆರೆಗಳ ಸಮೀಪ ವಸಲೆ ಹಕ್ಕಿಗಳ ಹಿಕ್ಕೆ ಸ್ಯಾಂಪಲ್‌ ಪಡೆದು ಲ್ಯಾಬ್‌ಗೆ ರವಾನೆ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದ್ದಾರೆ.

    ಕೇರಳದ ಗಡಿ ಭಾಗದಲ್ಲಿ ವಾಹನಗಳ ತಪಾಸಣೆ ಹೆಚ್ಚಿದ್ದು ಈವರೆಗೂ ಹಕ್ಕಿಜ್ವರ ಮೈಸೂರಿನಲ್ಲಿ ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಅದೇ ವೇಳೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್​ ಅವರು ಕೂಡ ರಾಜ್ಯದಲ್ಲಿ ಇದುವರೆಗೆ ಹಕ್ಕಿಜ್ವರ ಪತ್ತೆಯಾಗಿಲ್ಲ ಎಂದಿದ್ದಾರೆ. ಹಕ್ಕಿ ಜ್ವರ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಗಡಿಭಾಗಗಳಲ್ಲಿ ವಿಶೇಷ ಗಮನ ಇಡಲಾಗಿದೆ. ಪಶು ಸಂಗೋಪಣಾ ಇಲಾಖೆಯ ಜೊತೆಗೂಡಿ ಸಮಿತಿ ರಚಿಸಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಆದರೆ ರಾಜ್ಯದಲ್ಲಿ ಇದುವರೆಗೂ ಹಕ್ಕಿಜ್ವರದ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

    ಈ ಮಧ್ಯೆಯೇ ಕೇರಳದ ಗಡಿಭಾಗದಲ್ಲಿರುವ ದಕ್ಷಿಣಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ.

    ಪತ್ನಿಗೊಂದು, ಆಕೆಗೊಂದು ಮನೆ: ಹೆಂಡ್ತಿ ಕೈಲೇ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕೊಪ್ಪಳದ ಇಂಜಿನಿಯರ್​!

    ‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’

    ಓಡಿಹೋದವರ ಖಾಸಗಿ ಭಾಗ ಸುಟ್ಟು ಹತ್ಯೆ! ಪ್ರೇಮಿಗಳನ್ನು ಶಿಕ್ಷಿಸುವುದು ಗಂಭೀರ ಅಪರಾಧ ಎಂದ ಸುಪ್ರೀಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts