More

    ಪತ್ನಿಗೊಂದು, ಆಕೆಗೊಂದು ಮನೆ: ಹೆಂಡ್ತಿ ಕೈಲೇ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕೊಪ್ಪಳದ ಇಂಜಿನಿಯರ್​!

    ಕೊಪ್ಪಳ: ಭ್ರಷ್ಟಾಚಾರದ ಆರೋಪಕ್ಕೆ ಒಂದೇ ದಿನ 23 ಸಿಬ್ಬಂದಿ ಅಧಿಕಾರಿ ಅಮಾನತು ಆಗಿ ಸುದ್ದಿಯಾಗಿದ್ದ ಕೊಪ್ಪಳ ಸಣ್ಣ ನೀರಾವರಿ ಇಲಾಖೆ ಇದೀಗ ಮತ್ತೇ ಸುದ್ದಿಯಲ್ಲಿದೆ. ಹಾಗಂತ ಈ ಬಾರಿ ಹಣ, ಅಧಿಕಾರ ದುರುಪಯೋಗದಿಂದ ಸುದ್ದಿ ಆಗಿಲ್ಲ. ಬದಲಾಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಮನೆಯಲ್ಲಿ ನಡೆದ ಜಡೆ ಜಗಳ ದೊಡ್ಡ ಸದ್ದು ಮಾಡಿದೆ.

    ಹಲವಾರು ವರ್ಷಗಳಿಂದ ಗುಪ್ತವಾಗಿ ಪರಸ್ತ್ರೀ ಜತೆ ಸ್ನೇಹ ಬೆಳೆಸಿಕೊಂಡಿದ್ದ ಎಕ್ಸಿಕ್ಯೂಟಿವ್​ ಇಂಜಿನಿಯರ್​ ಒಬ್ಬರು ಇದೀಗ ಸಿಕ್ಕಿಬಿದ್ದು ಪೇಚಿಗೆ ಸಿಲುಕಿರುವ ಘಟನೆ ಇದಾಗಿದೆ.

    ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್​ ಇಂಜಿನಿಯರ್​ ಆಗಿರುವ ವಿನೋದ್ ಕುಮಾರ್​ ಗುಪ್ತಾ ಇದೀಗ ಸಿಕ್ಕಿಬಿದ್ದಿದ್ದಾರೆ. ಅದೂ ತಮ್ಮ ಪತ್ನಿ ಮತ್ತು ಮಕ್ಕಳ ಕೈಯಿಂದಲೇ ಎನ್ನುವುದು ವಿಶೇಷ.

    ಪತ್ನಿಗೊಂದು, ಆಕೆಗೊಂದು ಮನೆ: ಹೆಂಡ್ತಿ ಕೈಲೇ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕೊಪ್ಪಳದ ಇಂಜಿನಿಯರ್​!

    ಮದುವೆಯಾಗಿ ಮಕ್ಕಳಿದ್ದರೂ ಗುಪ್ತಾ ಅವರು ಕೆಲ ವರ್ಷಗಳಿಂದ ಈ ಮಹಿಳೆ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ಗುಪ್ತಾ ಅವರ ಪತ್ನಿಗೆ ಸಂದೇಹ ಶುರುವಾಗಿತ್ತು. ತಮ್ಮ ಪತಿಯ ನಡವಳಿಕೆಯಲ್ಲಿ ಬದಲಾವಣೆ ಗಮನಿಸಿದ್ದ ಅವರಿಗೆ ಏನೋ ಇದೆ ಎಂಬುದು ತಿಳಿದಿತ್ತು.

    ನಂತರ ಪತಿಗೆ ತಿಳಿಯದಂತೆ ಹಿಂಬಾಲಿಸಿದರು. ಅದೊಂದು ದಿನ ಕೊಪ್ಪಳದ ಯಶೋದ ಆಸ್ಪತ್ರೆ ಸಮೀಪದ ಕಚೇರಿ ಕಂ ಮನೆಗೆ ತಮ್ಮ ಮಕ್ಕಳ ಸಮೇತ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿ ಪತಿಯನ್ನು ಆ ಮಹಿಳೆ ಜತೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆ ಮಹಿಳೆಗೆ ಗೂಸಾ ನೀಡಿದ್ದಾರೆ. ಈ ಮೂಲಕ ಸಣ್ಣ ನೀರಾವರಿ ಇಲಾಖೆ ಹಿರಿಯ ಅಧಿಕಾರಿ ಕಳ್ಳಾಟ ಬಟಾ ಬಯಲು ಮಾಡಿದ್ದಾರೆ.

    ಎರಡೆರಡು ಮನೆ!
    ಗುಪ್ತಾ ಅವರು ಕೊಪ್ಪಳದಲ್ಲೇ 2 ಮನೆ ಮಾಡಿದ್ದಾರಂತೆ. ಇವರ ಕಚೇರಿಗೆ ಕೆಲಸಕ್ಕಾಗಿ ಬಂದ ಮಹಿಳೆಯನ್ನು ಪರಿಚಯ ಮಾಡಿಕೊಂಡು, ಆಕೆ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ. ಇಲಾಖೆಯ ಗುತ್ತಿಗೆದಾರರೇ ಆಕೆಯನ್ನು ಇವರ ಬಳಿಗೆ ಕರೆ ತರುತ್ತಾರೆ. ಆಕೆಗಾಗಿ ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದರು ಎಂದು ಗುಪ್ತಾ ಪತ್ನಿ ಹೇಳಿದ್ದಾರೆ. ಈ ಕಾರಣಕ್ಕೆಪತಿಯ ಮತ್ತೊಂದು ಮನೆಯಲ್ಲಿನ ಕಳ್ಳಾಟ ಬಯಲು ಮಾಡಿದ್ದೇನೆ ಎಂದಿದ್ದಾರೆ.

    ಆದರೆ ಇದನ್ನು ಆ ಮಹಿಳೆ ನಿರಾಕರಿಸಿದ್ದಾರೆ. ನನ್ನ ಮೇಲೆ ಇಂಜಿನಿಯರ್​ ಪತ್ನಿ ವೃಥಾ ಆರೋಪ ಮಾಡುತ್ತಿದ್ದು, ನನ್ನ ತಪ್ಪು ಏನೂ ಇಲ್ಲ. ಸುಮ್ಮನೇ ಕಂಪ್ಲೇಂಟ್​ ಕೊಟ್ಟಿದ್ದಾರೆ ಎಂದಿದ್ದಾರೆ. ಮಹಿಳೆ ಏನು ಹೇಳಿದ್ದಾರೆ ಇಲ್ಲಿದೆ ನೋಡಿ…

    ಜಡೆ ಜಗಳ ವಿಕೋಪಕ್ಕೆ ತಲುಪುವಷ್ಟರಲ್ಲೇ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ರಾಜೀ ಸಂಧಾನದ ಮಾತುಗಳು ನಡೆಯುತ್ತಿವೆ. ಅಧಿಕಾರಿಯ ಪತ್ನಿ ಮುಂದೆ ಏನ್ ಮಾಡ್ತಾರೋ ಕಾದು ನೋಡಬೇಕಿದೆ.

    ಓಡಿಹೋದವರ ಖಾಸಗಿ ಭಾಗ ಸುಟ್ಟು ಹತ್ಯೆ! ಪ್ರೇಮಿಗಳನ್ನು ಶಿಕ್ಷಿಸುವುದು ಗಂಭೀರ ಅಪರಾಧ ಎಂದ ಸುಪ್ರೀಂ

    ಹೌಸ್​ವೈಫ್​ ಎಂದರೆ ಮೂದಲಿಕೆ ಏಕೆ? ಅವರ ಶ್ರಮಕ್ಕೆ ಮನ್ನಣೆ ನೀಡೋದನ್ನು ಕಲಿಯಿರಿ ಸುಪ್ರೀಂ ಕೋರ್ಟ್

    VIDEO: ಅಯ್ಯೋ ಈ ಸಿಂಹ ನಿಮ್ಗೆ ಏನೂ ಮಾಡಲ್ಲ… ಹೆದರಿಕೊಳ್ಬೇಡಿ… ಅಂದ್ರೆ ನಂಬಿಬಿಡ್ತೀರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts