ಬೆಳಗಾವಿ ವಿವಾಹಿತೆಯ ಜೀವ ತೆಗೆಯಿತು ಯುವಕನ ಆ ಒಂದು ವಾಟ್ಸ್​ಆ್ಯಪ್​ ಸ್ಟೇಟಸ್​!

whatsapp
Published on

ಬೆಳಗಾವಿ: ವಿವಾಹಿತೆಯೊಬ್ಬಳನ್ನು ಪ್ರೀತಿಸುವುದಾಗಿ ತನ್ನ ಸ್ಟೇಟಸ್​ನಲ್ಲಿ ಯುವಕನೊಬ್ಬ ಬರೆದುಕೊಂಡಿದ್ದು, ಇದರಿಂದ ಹೆದರಿದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ ನಡೆದಿದೆ.

ಸುತಗಟ್ಟಿ ಗ್ರಾಮದ ಅಕ್ಷತಾ ಪೂಜಾರ್ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸುತಗಟ್ಟಿ ಗ್ರಾಮದ ಸಂತೋಷ ತನ್ನ ವಾಟ್ಸ್​ಆ್ಯಪ್​ ಸ್ಟೇಟಸ್​ಗೆ ಅಕ್ಷತಾರ ಫೋಟೋ ಹಾಕಿಕೊಂಡು ಅದರಲ್ಲಿ ಮೆಸೇಜ್​ ಬರೆದಿದ್ದ. ಇದನ್ನು

ನೋಡಿ ಗಾಬರಿಯಿಂದ ಯುವತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಏಳು ತಿಂಗಳ ಹಿಂದೆ ಕರಡಿಗುದ್ದಿ ಗ್ರಾಮದ ನಾಗರಾಜ್ ಎಂಬುವರ ಜತೆಗೆ ಅಕ್ಷತಾ ಅವರ ವಿವಾಹವಾಗಿತ್ತು. ಕೆಲವು ದಿನಗಳ ನಂತರ ಅವರು ತಮ್ಮ ತವರಿಗೆ ವಾಪಸ್​ ಆಗಿದ್ದರು. ಇದನ್ನು ನೋಡಿದ್ದ ಸಂತೋಷ್​ ತನ್ನ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ 'ನಿನ್ನ ಪ್ರೀತಿಸುತ್ತೇನೆ, ನಿನ್ನನ್ನು ಬಿಡುವುದಿಲ್ಲ, ನಿನ್ನ ಹೆಸರು ಬರೆದಿಟ್ಟು ವಿಷ ಕುಡಿದು ಸಾಯುತ್ತೇನೆ' ಎಂದು ಸ್ಟೇಟಸ್ ಹಾಕಿಕೊಂಡಿದ್ದ. ಜತೆಗೆ ವಿಷವನ್ನೂ ಸೇವಿಸಿದ್ದ.

ಆದರೆ ಸ್ಟೇಟಸ್​ನೋಡಿ ಯುವತಿ ಪ್ರಾಣ ಕಳೆದುಕೊಂಡಿದ್ದರೆ ಸಂತೋಷ್​ ಬದುಕುಳಿದಿದ್ದಾನೆ. ಈತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net