

ಮುಂಬೈ: ಇದೀಗ ಫಿಟ್ನೆಸ್ ಚಾಲೆಂಜ್ ಟ್ರೆಂಡ್ ಪುನಃ ಶುರುವಾಗಿದೆ. ಇದು ನಟಿಯರ ಫಿಟ್ನೆಸ್ ಚಾಲೆಂಜ್. ಇದಾಗಲೇ ಕತ್ರಿನಾ, ಮಲೈಕಾ ಅರೋರಾ ಸೇರಿದಂತೆ ಕೆಲವು ನಟಿಯರು ಫಿಟ್ನೆಸ್ ಚಾಲೆಂಜ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಈಗ ನಟಿ ಆಲಿಯಾ ಭಟ್ ಹಾಟ್ ಎನಿಸುವ ಫಿಟ್ನೆಸ್ ಫೋಟೋ ಶೇರ್ ಮಾಡಿದ್ದು, ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದಾರೆ. 40 ದಿನಗಳ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿರುವ ಆಲಿಯಾ, ಇದೀಗ 20 ದಿನ ಪೂರೈಸಿದ್ದು, ಅದರ ಫೋಟೋ ಶೇರ್ ಮಾಡಿದ್ದಾರೆ.
ಈ ಫೋಟೋ ನೋಡಿ ಕತ್ರೀನಾ, ಮೈಲಕಾ ಮುಂದಾದವರು ಬೆರಗಾಗಿದ್ದು, ಭೇಷ್ ಭೇಷ್ ಎಂದಿದ್ದಾರೆ. ಸದ್ಯ ಆಲಿಯಾಳ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಆಲಿಯಾ ಭಟ್ ಸ್ಪೋಟ್ಸ್ ಬ್ರಾ ಧರಿಸಿ ಅದಕ್ಕೆ ಮ್ಯಾಚ್ ಆಗುವ ಟೈಟ್ಸ್ ತೊಟ್ಟು ಸೈಡ್ ಲುಕ್‍ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
20 ಮುಗಿದಿದೆ, 20 ಇದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಈ ಫೋಟೋಗೆ ನಟಿ ಕತ್ರಿನಾ ಕೈಫ್, ಮಲೈಕಾ ಆರೋರಾ ಕಾಮೆಂಟ್ ಮಾಡಿದ್ದಾರೆ.
ಸದ್ಯ ಆಲಿಯಾ ಭಟ್ ಬ್ರಹ್ಮಸ್ತ್ರ ಸಿನಿಮಾದಲ್ಲಿ ಬಿಜಿ ಆಗಿದ್ದಾರೆ. ಟಾಲಿವುಡ್ ನಟ ರಾಮ್ ಬಿಜಿ ಆಗಚರಣ್ ಹಾಗೂ ಜ್ಯೂನಿಯರ್ ಎನ್‍ಟಿಆರ್ ಅಭಿನಯಿಸುತ್ತಿರುವ ಆರ್‍ಆರ್‍ಆರ್ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.