ಆಗಸ್ಟ್‌ನಲ್ಲಿ ಬ್ಯಾಂಕ್‌ನಲ್ಲಿ ಕೆಲಸವಿದೆಯೆ? ರಜೆಯ ಬಗ್ಗೆ ತಿಳಿದುಕೊಳ್ಳಿ...

Banks Holiday
bank holiday
Published on

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಜುಲೈ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಸಾಮಾನ್ಯವಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಹಬ್ಬಕ್ಕೆ ತಕ್ಕಂತೆ ರಜೆಗಳಲ್ಲಿ ಬದಲಾವಣೆಯಾಗುತ್ತದೆ.

ಜುಲೈ ತಿಂಗಳಲ್ಲಿ ಎಲ್ಲಾ ರಾಜ್ಯಗಳಲ್ಲಿ ಒಟ್ಟಾರೆಯಾಗಿ 15 ರಜೆಗಳು ಇದ್ದು, ಕರ್ನಾಟಕದಲ್ಲಿ ಆಗಸ್ಟ್‌ ತಿಂಗಳಿನಲ್ಲಿ ರಜೆಗಳ ಸಂಖ್ಯೆ ಕಡಿಮೆ ಇದೆ.

ಬರುವ ಆಗಸ್ಟ್‌ನಲ್ಲಿ ಶನಿವಾರ, ಭಾನುವಾರ ಹೊರತುಪಡಿಸಿ ಕೇವಲ ಒಂದು ದಿನ ರಜೆಯನ್ನು ಘೋಷಿಸಲಾಗಿದೆ. ಅದು ಆಗಸ್ಟ್‌ 20ರ ಶುಕ್ರವಾರ. ಅಂದು ಮೊಹರಂ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕ ರಜೆ ಇದೆ. ಆಗಸ್ಟ್‌ 15 ಕೂಡ ಸಾರ್ವಜನಿಕ ರಜೆಯೇ. ಆದರೆ ಈ ಸಲ ಅದು ಭಾನುವಾರ ಬಂದಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ರಜೆಯಿಲ್ಲ.
ಇದನ್ನು ಹೊರತುಪಡಿಸಿದರೆ ಆಗಸ್ಟ್ 1 (ಭಾನುವಾರ), ಆಗಸ್ಟ್ 14 (2ನೇ ಶನಿವಾರ), ಆಗಸ್ಟ್ 8 (ಭಾನುವಾರ), ಆಗಸ್ಟ್ 22 (ಭಾನುವಾರ), ಆಗಸ್ಟ್ 28 (4ನೇ ಶನಿವಾರ), ಆಗಸ್ಟ್ 29 (ಭಾನುವಾರ) ರಂದು ರಜೆ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net