More

    ಎಟಿಎಂನಲ್ಲಿ ಹಣ ತೆಗೆಯುವಿರಾ? ಮೊದಲು ‘ದಂಡ’ದ ಹೊಸ ನಿಯಮ ತಿಳಿದುಕೊಳ್ಳಿ…

    ನವದೆಹಲಿ: ಎಟಿಎಂನಲ್ಲಿ ಹಣ ವಿತ್‌ಡ್ರಾ ಮಾಡುವವರಿಗಾಗಿ ಕೆಲವೊಂದು ಬದಲಾವಣೆಗಳನ್ನು ಮಾಡಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಹೊಸ ನಿಯಮಗಳನ್ನೂ ಹೇರಿದೆ.

    25 ಸಾವಿರಕ್ಕಿಂತ ಕಡಿಮೆ ಹಣವಿದ್ದರೆ: ಎಸ್‌ಬಿಐ ಗ್ರಾಹಕರು ಸರಾಸರಿ ತಿಂಗಳಿಗೆ 25 ಸಾವಿರ ಅತವಾ ಅದಕ್ಕಿಂತ ಕಡಿಮೆ ಬ್ಯಾಲೆನ್ಸ್‌ ಹೊಂದಿದ್ದರೆ, ಮಹಾನಗರಗಳಲ್ಲಿ ಉಳಿತಾಯ ಖಾತೆಯಿಂದ (ಸೇವಿಂಗ್ಸ್‌ ಅಕೌಂಟ್‌) ತಿಂಗಳಿಗೆ ಎಂಟು ಬಾರಿ ಉಚಿತವಾಗಿ ಹಣ ತೆಗೆಯಲು ಎಸ್‌ಬಿಐ ಅನುಮತಿ ನೀಡಿದೆ. ಇದರಲ್ಲಿ 5 ಬಾರಿ ಎಸ್‌ಬಿಐ ಎಟಿಎಂಗಳಿಂದ ಮತ್ತು 3 ಬಾರಿ ಇತರ ಬ್ಯಾಂಕ್ ಎಟಿಎಂಗಳ ವ್ಯವಹಾರಗಳನ್ನು ನಡೆಸಲು ಅವಕಾಶವಿದೆ. ಮಹಾನಗರಗಳು ಎಂದರೆ: ಬೆಂಗಳೂರು, ನವದೆಹಲಿ, ಮುಂಬೈ, ಕೋಲ್ಕತಾ ಮತ್ತು ಹೈದರಾಬಾದ್‌.

    ಈ ಮೇಲೆ ತಿಳಿಸಿದ ಮಹಾನಗರಗಳನ್ನು ಹೊರತುಪಡಿಸಿ ಉಳಿದ ಸ್ಥಳಗಳಲ್ಲಿ ವಾಸವಾಗಿದ್ದವರು ತಿಂಗಳಿಗೆ 10 ಬಾರಿ (ಐದು ಸಲ ಎಸ್‌ಬಿಐ ಹಾಗೂ ಇನ್ನು 5 ಸಲ ಬೇರೆ ಎಟಿಎಂಗಳಿಂದ ಪಡೆಯಬಹುದು) ಅವಕಾಶ ನೀಡಲಾಗಿದೆ.

    25 ಸಾವಿರದಿಂದ ಒಂದು ಲಕ್ಷದವರೆಗೆ ಬ್ಯಾಲೆನ್ಸ್‌ ಇದ್ದಲ್ಲಿ:  ಒಂದು ವೇಳೆ ಬ್ಯಾಲೆನ್ಸ್‌ 25 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ಇದ್ದರೆ, ಸ್ಟೇಟ್‌ ಬ್ಯಾಂಕ್‌ ಗ್ರೂಪ್‌ನ ಯಾವುದೇ ಎಟಿಎಂನಿಂದ ಎಷ್ಟು ಬಾರಿ ಬೇಕಾದರೂ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ಆದರೆ ಬೇರೆ ಬ್ಯಾಂಕ್‌ಗಳ ಎಟಿಎಂನಿಂದ ಹಣ ವಿತ್‌ಡ್ರಾ ಮಾಡುವುದೇ ಆದಲ್ಲಿ ಮಹಾನಗರಗಳ ಜನರಿಗೆ ಮೂರು ಸಲ ಹಾಗೂ ಉಳಿದವರಿಗೆ ಐದು ಬಾರಿ ಉಚಿತ ಅವಕಾಶವಿದೆ.

    ಮೇಲೆ ತಿಳಿಸಿದ ಸಮಯಕ್ಕಿಂತ ಹೆಚ್ಚು ಬಾರಿ ಹಣ ಪಡೆದುಕೊಂಡದ್ದೇ ಆದಲ್ಲಿ, ಪ್ರತಿಯೊಂದು ವ್ಯವಹಾರಕ್ಕೂ ನಿಮಗೆ ಶುಲ್ಕ (‘ದಂಡ’) ಬೀಳಲಿದೆ. ಅವಧಿಗೆ ಮೀರಿ ಎಸ್‌ಬಿಐನಿಂದ ಹಣ ಪಡೆದುಕೊಂಡರೆ 10 ರೂಪಾಯಿ ಪ್ಲಸ್‌ ಜಿಎಸ್‌ಟಿ ಹಾಗೂ ಬೇರೆ ಬ್ಯಾಂಕ್‌ಗಳ ಎಟಿಎಂನಿಂದ ಹಣ ಪಡೆದುಕೊಂಡರೆ 20 ರೂಪಾಯಿ ಪ್ಲಸ್‌ ಜಿಎಸ್‌ಟಿ ಬೀಳಲಿದೆ.

    ಇದನ್ನೂ ಓದಿ: ಮೂರೇ ವಾರದಲ್ಲಿ ನಿರ್ಮಾಣವಾಯ್ತು 180 ಅಡಿ ಸೇತುವೆ- 20 ಹಳ್ಳಿಗರ ನಿಟ್ಟುಸಿರು

    ಒಂದು ಲಕ್ಷಕ್ಕೂ ಅಧಿಕ ಬ್ಯಾಲೆನ್ಸ್‌ ಇದ್ದಲ್ಲಿ: ಒಂದು ವೇಳೆ ಎಸ್‌ಬಿಐನ ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣವು ಇದ್ದರೆ ಅಂಥ ಗ್ರಾಹಕರು ಸ್ಟೇಟ್ ಬ್ಯಾಂಕ್ ಗ್ರೂಪ್ (ಎಸ್‌ಬಿಜಿ) ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಅನಿಯಮಿತ ವಹಿವಾಟುಗಳನ್ನು ನಡೆಸಲು ಅರ್ಹರಾಗಿರುತ್ತಾರೆ. ಅದೇ ರೀತಿ ಎಸ್‌ಬಿಐನ ಶಾಖೆಗಳಲ್ಲಿಯೇ ಕಚೇರಿಯ ಸಂಬಳದ ಖಾತೆಯೂ ಅಟ್ಯಾಚ್‌ ಆಗಿದ್ದಲ್ಲಿ ಅಂಥವರು ಎಟಿಎಂಗಳಲ್ಲಿ ಎಷ್ಟು ಬೇಕಾದರೂ ವಹಿವಾಟು ನಡೆಸಬಹುದಾಗಿದೆ.

    ಬ್ಯಾಲೆನ್ಸೇ ಇಲ್ಲದಿದ್ದರೆ: ಒಂದು ವೇಳೆ ಬ್ಯಾಂಕ್‌ನಲ್ಲಿ ಬ್ಯಾಲೆನ್ಸ್‌ ಇಲ್ಲದಿದ್ದ ಪಕ್ಷದಲ್ಲಿ ನೀವು ಎಟಿಎಂ ಮೂಲಕ ಹಣವನ್ನು ವಿತ್‌ಡ್ರಾ ಮಾಡಲು ಮುಂದಾದರೆ, 20 ರೂಪಾಯಿಗಳ ದಂಡವು ನಿಮಗೆ ಬೀಳಲಿದೆ. ಆದ್ದರಿಂದ ಬ್ಯಾಲೆನ್ಸ್‌ ಬಗ್ಗೆ ಸಂದೇಹವಿದ್ದಲ್ಲಿ ಮೊದಲು ಬ್ಯಾಲೆನ್ಸ್‌ ಚೆಕ್‌ ಮಾಡಿಕೊಂಡು ನಂತರ ಹಣವನ್ನು ಪಡೆಯಲು ಪ್ರಯತ್ನಿಸಿ.

    ಎಸ್‌ಬಿಐ ಎಟಿಎಂಗಳಲ್ಲಿ 10ಸಾವಿರಕ್ಕಿಂತ ಹೆಚ್ಚಿಗೆ ಹಣ ಪಡೆಯಲು ಒನ್‌ ಟೈಂ ಪಾಸ್‌ವರ್ಡ್‌ (ಓಟಿಪಿ) ಅಗತ್ಯವಿದೆ. ಬ್ಯಾಂಕ್ ಪ್ರಕಾರ ಖಾತೆದಾರರಿಗೆ ಎಸ್‌ಬಿಐ ಎಟಿಎಂನಿಂದ ರಾತ್ರಿ 8 ರಿಂದ ಬೆಳಿಗ್ಗೆ 8 ರವರೆಗೆ ಹಣವನ್ನು ಹಿಂಪಡೆಯಲು ಓಟಿಪಿ ಬೇಕು. ಅಂದರೆ ಬ್ಯಾಂಕ್‌ಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬರಲಿದೆ. ಎಸ್‌ಬಿಐ ಬಿಟ್ಟು ಬೇರೆ ಬ್ಯಾಂಕ್‌ಗಳ ಎಟಿಎಂ ಗಳಲ್ಲಿ ಹಣ ಪಡೆಯುವುದಿದ್ದರೆ ಇದು ಅನ್ವಯ ಆಗುವುದಿಲ್ಲ.

    ಇವೆಲ್ಲ ನಿಯಮಗಳು ಕಳೆದ ಜುಲೈ1 ರಿಂದ ಅನ್ವಯ ಆಗುವಂತೆ ಜಾರಿಗೆ ತರಲಾಗಿದೆ.

    ಎಂಟು ವರ್ಷಗಳ ಹಿಂದಿನ ಕರೊನಾ: ಚೀನಾದ ಕುತಂತ್ರ ಬಿಚ್ಚಿಟ್ಟ ಅಮೆರಿಕದ ಸಂಶೋಧಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts