More

    ಬಸ್ಸಿನಲ್ಲಿ ಪ್ರಯಾಣಿಸುವಾಗ ಟಿಕೆಟ್​ ಪಡೆದೂ ಕಳೆದುಕೊಂಡಿದ್ದರೆ ಚಿಂತೆ ಬೇಡ, ಹೀಗೆ ಮಾಡಿ; ರಾಜ್ಯ ರಸ್ತೆ ಸಾರಿಗೆ ನಿಗಮದ ಸುತ್ತೋಲೆ

    ಬೆಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಕಳೆದುಕೊಂಡು, ಟಿಕೆಟ್ ತನಿಖಾ ಅಧಿಕಾರಿಗಳ ಕೈಗೆ ಸಿಕ್ಕರೆ ಇನ್ನು ದಂಡ ಪಾವತಿಸುವ ಹಾಗಿಲ್ಲ!

    ಹೌದು ಇಂತಹ ಒಂದು ಆದೇಶವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕಾರಿಗಳಿಗೆ ಸೂಚಿಸಿದೆ. ಈಗಾಗಲೇ ಟಿಕೆಟ್​ನ್ನು ಪಡೆದು ಕಳೆದುಕೊಂಡಿದ್ದರೆ, ಅಂತಹ ಪ್ರಯಾಣಿಕರಿಗೆ ದಂಡ ವಿಧಿಸುವಂತಿಲ್ಲ. ಹಾಗೂ ನಿರ್ವಾಹಕನಿಗೂ ದಂಡ ವಿಧಿಸುವಂತಿಲ್ಲ.

    ಬದಲಾಗಿ ಮತ್ತೊಂದು ಟಿಕೆಟ್ ಪಡೆದು ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಆದರೆ ಇದಕ್ಕೂ ಮುನ್ನ ತನಿಖಾಧಿಕಾರಿಗಳು ಆತ ಟಿಕೆಟ್​ ಪಡೆದ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಇದು ಮುಂಗಡ ಕಾಯ್ದಿರಿಸಿದ ಟಿಕೆಟ್​ ಆಗಿದ್ದರೆ ಚಾರ್ಟ್​ನಿಂದ ಅಥವಾ ಇಟಿಎಂ ಮಷಿನ್​ನಿಂದ ಟಿಕೆಟ್​ ಪಡೆದಿದ್ದರೆ ಮಷಿನ್​ನಿಂದ ಖಾತರಿ ಪಡಿಸಿಕೊಳ್ಳಬೇಕು.

    ಹೀಗೆ ಖಾತರಿ ಪಡಿಸಿಕೊಂಡ ಮೇಲೆ ಪ್ರಯಾಣಿಕ ಟಿಕೆಟ್​ ಪಡೆದಿದ್ದರೆ, ಆ ಸ್ಥಳದಿಂದ ಆತ ತೆರಳಲಿರುವ ಸ್ಥಳಕ್ಕೆ ಟಿಕೆಟ್​ ನೀಡಿ, ಅದರ ಹಣ ಪಡೆಯಬೇಕು ಎಂದು ತನಿಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ನಿರ್ವಾಹಕನಿಗೂ ದಂಡ ವಿಧಿಸಬಾರದು ಎಂದು ಸ್ಪಷ್ಟವಾಗಿ ಸೂಚಿಸಿದ ಸುತ್ತೋಲೆಯನ್ನು ನಿಗಮದ ಎಂಡಿ ಶಿವಯೋಗಿ ಕಳಸದ ಹೊರಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts