ಮೆಜಿಸ್ಟಿಕ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ವೃದ್ಧ ಬಲಿ

KSRTC
Published on

ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಪಾದಚಾರಿ ವೃದ್ಧ ಬಲಿಯಾಗಿದ್ದಾರೆ.

ಬಸವೇಶ್ವರನಗರ 4ನೇ ಹಂತದ ನಿವಾಸಿ ಗಂಗಾರೆಡ್ಡಿ (85) ಮೃತ. ಆಂಧ್ರಪ್ರದೇಶದ ಚಿತ್ತೂರಿಗೆ ಹೋಗಲು ಬುಧವಾರ ಮಧ್ಯಾಹ್ನ 12.35ರಲ್ಲಿ ಮೆಜೆಸ್ಟಿಕ್‌ಗೆ ಗಂಗಾರೆಡ್ಡಿ ಬಂದಿದ್ದರು.

ಮೂಡಿಗೆರೆಗೆ ತೆರಳಬೇಕಿದ್ದ ಬಸ್ ಅನ್ನು ಹಿಂಬದಿ ಚಲಾಯಿಸುತ್ತಿದ್ದ ವೇಳೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದರು. ಉಪ್ಪಾರಪೇಟೆ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದರು. ಬಸ್ ಚಾಲಕ ರಾಘವೇಂದ್ರ ಎಂಬಾತನನ್ನು ಬಂಧಿಸಿ, ಬಸ್ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net