ಬಿಳಿ ಸೆರಗು ಹೋಗುವುದಕ್ಕೂ, ಗರ್ಭ ಬೇಡವೆಂದು ಮಾತ್ರೆ ತೆಗೆದುಕೊಳ್ಳುವುದಕ್ಕೂ ಸಂಬಂಧವಿದೆಯೆ?

aptha
ಸಾಂದರ್ಭಿಕ ಚಿತ್ರ
Published on
ಪ್ರಶ್ನೆ: ನನಗೆ ಮದುವೆ ಆಗಿ 3 ವರ್ಷ ಆಗಿದೆ. ಒಂದು ಹೆಣ್ಣು ಮಗು ಇದೆ. ಪುನಃ ನಾನು 2 ಬಾರಿ ಗರ್ಭ ಧರಿಸಿದೆ. ಈಗಲೇ ಮಗು ಬೇಡವೆಂದು 2 ಸಲ ಮಾತ್ರೆ ತಗೆದುಕೊಂಡೆ. 2ನೇ ಸಲ ತೆಗೆದುಕೊಂಡಾಗಿನಿಂದ ನನಗೆ ಬಿಳಿ ಸೆರಗು ಹೋಗುತ್ತಿದೆ. ಇದಕ್ಕೆ ಪರಿಹಾರ ತಿಳಿಸಿ.

ಉತ್ತರ: ನಿಮಗೆ ಸ್ವಲ್ಪ ಮಟ್ಟಿನ ಬಿಳುಪು ಹೋಗುತ್ತಿದ್ದಲ್ಲಿ ಅದರ ಬಗ್ಗೆ ಚಿಂತೆ ಬೇಡ. ಬಿಳುಪು ಅತಿಯಾಗಿ ಸ್ರವಿಸುತ್ತಿದ್ದಲ್ಲಿ ಹಳದಿ ಬಣ್ಣದಿಂದ ಕೂಡಿದ್ದಲ್ಲಿ, ನವೆ ಯಾಗುತ್ತಿದ್ದಲ್ಲಿ ಸೋಂಕು ತಗುಲಿರುವ ಸಾಧ್ಯತೆಯಿರುತ್ತದೆ.

ನೀವು ಧರಿಸುವ ಒಳ ಉಡುಪನ್ನು ಬಿಸಿ ನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ. ಒಳ ಉಡುಪುಗಳು ಹಳೆಯದಾಗಿದ್ದು 3 ತಿಂಗಳಿಗೂ ಮೇಲ್ಪಟ್ಟು ಅವುಗಳನ್ನು ಬಳಸುವುದು ಬೇಡ. ಒಂದು ಲೀಟರ್ ನೀರಿಗೆ 2 ಚಮಚ ಅರಿಶಿಣ ಪುಡಿ ಹಾಕಿ ಕುದಿಸಿ ಆರಿಸಿ ನಂತರ ಆ ಕಷಾಯದಿಂದ ಜನನಾಂಗವನ್ನು ತೊಳೆದುಕೊಳ್ಳಿ. ಮಿಲನದ ನಂತರ ಪ್ರತಿ ಬಾರಿಯೂ ಸ್ವಚ್ಛಗೊಳಿಸುತ್ತಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಇತರ ಲೇಖನಗಳಿಗೆ ಇಲ್ಲಿ ಕ್ಲಿಕ್​ ಮಾಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net