More

    ಮುಟ್ಟು ನಿಂತ ನಂತರದ ಮಿಲನದ ಸಮಸ್ಯೆ ಶುರುವಾಗಿದೆ; ಇದಕ್ಕೆ ಪರಿಹಾರವಿದೆಯೆ?

    ಮುಟ್ಟು ನಿಂತ ನಂತರದ ಮಿಲನದ ಸಮಸ್ಯೆ ಶುರುವಾಗಿದೆ; ಇದಕ್ಕೆ ಪರಿಹಾರವಿದೆಯೆ?ಪ್ರಶ್ನೆ: ನನ್ನ ಪತ್ನಿಗೆ 50 ವರ್ಷ. ಇಬ್ಬರು ಮಕ್ಕಳಿದ್ದಾರೆ. ಪತ್ನಿಗೆ ಮೆನೋಪಾಸ್ ಆಗಿ 4-5 ವರ್ಷಗಳಾಗಿವೆ. ಆಕೆಯ ಜನನಾಂಗ ಮೊದಲಿನಂತಿಲ್ಲ. ತುಂಬಾ ಚಿಕ್ಕದಾಗಿ ಬಿಟ್ಟಿದೆ.

    ನಾನು ಲೈಂಗಿಕ ಕ್ರಿಯೆಗೆ ಬಂದಾಗ ಸಮಸ್ಯೆಯಾಗುತ್ತಿದೆ. ಆಗ ತುಂಬ ನೋವಾಗುತ್ತದೆ ಎನ್ನುತ್ತಾಳೆ. ಈ ಕ್ರಿಯೆಯಿಂದ ನಮ್ಮಿಬ್ಬರಲ್ಲಿ ಮನಸ್ತಾಪವಾಗಿದೆ. ಅದೂ ಅಲ್ಲದೆ, ನನಗೆ ಮೊದಲಿನಂತೆ ಉದ್ರೇಕವಾಗುತ್ತಿಲ್ಲ ಹಾಗೂ ಚಿಕ್ಕದಾಗಿ ಕಾಣಿಸುತ್ತಿದೆ. ತುಂಬ ಹೊತ್ತು ಉದ್ರೇಕಗೊಳ್ಳದೆ ಬೇಗನೆ ಇಳಿದುಬಿಡುತ್ತದೆ. ಅದಕ್ಕೆ ಪತ್ನಿಯೇ ಕಾರಣ ಎಂದುಕೊಂಡಿದ್ದೇನೆ. ಆಕೆಯದ್ದೇ ಸಮಸ್ಯೆಯಿಂದ ಹೀಗಾಗುತ್ತಿರಬಹುದು.

    ಮಕ್ಕಳಿಗೆ ಮದುವೆ ವಯಸ್ಸು ಬಂದಿದೆ. ಈಗ ನಿಮಗೇನು ಬಯಕೆ ಎಂದು ನನ್ನಲ್ಲೇ ನಾನು ಅಂದುಕೊಂಡಿದ್ದನ್ನು ಅವರು ಕೇಳಿಸಿಕೊಂಡು ಮುನಿಸಿಕೊಂಡಿದ್ದರು. ಮಕ್ಕಳಿಬ್ಬರೂ ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ವಾರಕ್ಕೆರಡು ದಿನ ಇಲ್ಲಿಗೆ ಬರುತ್ತಾರೆ. ಅವರು ಇಲ್ಲದಿದ್ದಾಗ ನಾವಿಬ್ಬರೂ ಸುಖಪಡೋಣವೆಂದರೆ ಹೀಗಾಗಿಬಿಟ್ಟಿದೆ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ. ನನಗೆ ಉದ್ರೇಕದಲ್ಲಿ ತೊಂದರೆ ಇರುವುದರಿಂದ ಯಾವುದಾದರೂ ಗುಳಿಗೆ ತೆಗೆದುಕೊಳ್ಳಬಹುದೆ ಅಥವಾ ಬೇರೆ ಯಾವುದಾದರೂ ದಾರಿ ಇದೆಯೇ ತಿಳಿಸಿ. ಯಾವುದಾದರೂ ವ್ಯಾಯಾಮ ಔಷಧಗಳನ್ನು ತಿಳಿಸಿ.

    ಉತ್ತರ: ಸಾಮಾನ್ಯವಾಗಿ ಮೆನೋಪಾಸ್ ಅಂದರೆ ಋತುಬಂಧದ ನಂತರ ಜನನಾಂಗದಲ್ಲಿ ಆದ್ರತೆ ಕಡಿಮೆಯಾಗುತ್ತದೆ. ಹಾರ್ಮೋನಿನ ಸ್ರವಿಸುವಿಕೆ ಇಲ್ಲವಾಗುವುದರಿಂದ ಒಣಗಿದಂತಾಗುವುದರಿಂದ ಚಿಕ್ಕದಾದಂತೆ ಭಾಸವಾಗುತ್ತದೆ.

    ಅದಕ್ಕೆ ತುಂಬ ಸುಲಭವಾದ ಚಿಕಿತ್ಸೆ ಇದೆ. ಸಮ್ಮಿಲನದ ಸಮಯದಲ್ಲಿ ಕೆ.ವೈ.ಜೆಲ್ ಲೇಪಿಸಿಕೊಳ್ಳಬೇಕು. ಜೆಲ್ ಇಲ್ಲದಿದ್ದಲ್ಲಿ ತುಪ್ಪ ಇಲ್ಲವೇ ಕೊಬ್ಬರಿ ಎಣ್ಣೆಯನ್ನೂ ಲೇಪಿಸಿಕೊಳ್ಳಬಹುದು. ಆಗ ಸರಾಗವಾಗಿ ಲೈಂಗಿಕ ಕ್ರಿಯೆ ಸಾಧ್ಯವಾಗುತ್ತದೆ.

    ನಿಮಗೆ ಉದ್ರೇಕ ಸಮಸ್ಯೆ ಆಗಿದ್ದಲ್ಲಿ ಆಹಾರದಲ್ಲಿ ಬಾದಾಮಿ, ಅಂಜೂರವನ್ನು ತಿನ್ನಿ. ಯೋಗಾಸನ ಮಾಡಿ. ಅಶ್ವಗಂಧಾರಿಷ್ಟವನ್ನು ದಿನಕ್ಕೆ ಮೂರು ಬಾರಿ ಮೂರು ಚಮಚೆಯಷ್ಟನ್ನು ನೀರಿನೊಂದಿಗೆ ಬೆರೆಸಿ ಊಟದ ನಂತರ ಕುಡಿಯಿರಿ. ಲೈಂಗಿಕ ಕ್ರಿಯೆಗೆ ಮುನ್ನ ಫೋರ್​ಪ್ಲೇಯಲ್ಲಿ ಹೆಚ್ಚು ತೊಡಗಿಕೊಳ್ಳಿ. ಶ್ರೀಗೋಪಾಲ ತೈಲವನ್ನು ಲೇಪಿಸಿಕೊಳ್ಳಿ.

    ಆರೋಗ್ಯಕ್ಕೆ ಸಂಬಂಧಿಸಿದ ಇತರ ಲೇಖನಗಳಿಗೆ ಇಲ್ಲಿ ಕ್ಲಿಕ್​ ಮಾಡಿ:
    https://www.vijayavani.net/category/%e0%b2%86%e0%b2%b0%e0%b3%8b%e0%b2%97%e0%b3%8d%e0%b2%af/

    ಮದುವೆಯಾಗಿ 10 ವರ್ಷಕ್ಕೇನೇ ಪತ್ನಿ ಇಂಟರೆಸ್ಟ್​ ಕಳೆದುಕೊಂಡರೆ ನಾನು ಏನು ಮಾಡಲಿ?

    ಸ್ನೇಹಿತೆಯ ಜತೆ ಸೇರಿದಾಗ ಅವಳಿಗೆ ನಾನು ಮೊದಲಿನವನಲ್ಲ ಎನ್ನಿಸಿತು- ಸಂದೇಹ ಪರಿಹಾರ ಹೇಗೆ ಮಾಡಿಕೊಳ್ಳಲಿ?

    ಅಂಡಾಶಯದಲ್ಲಿನ ನೀರುಗುಳ್ಳೆಗೂ, ಮಕ್ಕಳಾಗದೇ ಇರುವುದಕ್ಕೂ ಸಂಬಂಧವಿದೆಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts