More

    ಹೆಂಡ್ತಿ ಕಳ್ಳತನ ಮಾಡ್ತಾಳೆ, ಗಲ್ಲಿಗಲ್ಲಿ ತಿರಗ್ತಾಳೆ, ಒಬ್ಬಳೇ ನಗ್ತಾಳೆ- ಭಯವಾಗ್ತಿದೆ, ಇದೇನಿದು ಮೇಡಂ?

    ಹೆಂಡ್ತಿ ಕಳ್ಳತನ ಮಾಡ್ತಾಳೆ, ಗಲ್ಲಿಗಲ್ಲಿ ತಿರಗ್ತಾಳೆ, ಒಬ್ಬಳೇ ನಗ್ತಾಳೆ- ಭಯವಾಗ್ತಿದೆ, ಇದೇನಿದು ಮೇಡಂ?ನನ್ನದು ಸರ್ಕಾರಿ ಕೆಲಸ,. ಹೆಂಡತಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದೇನೆ. ಮದುವೆಯಾಗಿ 5 ವರ್ಷಗಳಾಗಿವೆ.

    ಹೆಂಡತಿಯಿಂದ ತುಂಬ ಸಮಸ್ಯೆಗಳಾಗುತ್ತಿವೆ. ಅವಳು ಅತ್ತೆ ಮಾವ ಬಂದರೆ ಅವರಿಗೆ ಹೊಡೆಯುವುದು, ಜಗಳಮಾಡುವುದು ಮಾಡುತ್ತಿರುತ್ತಾಳೆ. ನಾನು ಬಂದ ನಂತರ ಅಪವಾದಗಳನ್ನು ಅವರ ಮೇಲೆ ಹಾಕಿ ಸಾಯುತ್ತೇನೆಂದು ಹೆದರಿಸುತ್ತಾಳೆ.

    ಅವಳ ತಂದೆತಾಯಿಗಳು ಏನೋ ನೆವ ಹೇಳಿ ಅವಳನ್ನು ಊರಿಗೆ ಕರೆದುಕೊಂಡು ಹೋದರು. ಇದಾದ 15-20 ದಿನಗಳ ನಂತರ ಮತ್ತೆ ಅವಳನ್ನು ಮನೆಯಲ್ಲಿ ಬಿಟ್ಟು ಹೋದರು. ಮತ್ತೆ ಅಲ್ಲಿ ಯಥಾಪ್ರಕಾರ ಅವಳು ಹಾಗೆಯೇ ಆಡುತ್ತಿದ್ದಳು. ಅವರ ಸುತ್ತಮುತ್ತಲಿನವರ ಹೇಳಿಕೆಯ ಪ್ರಕಾರ ಅವಳಿಗೆ ಮತಿಭ್ರಮಣೆಯಾಗಿರುವಂತಿದೆ. ಬೇರೆಯವರ ಮನೆಯಲ್ಲಿ ಕಳ್ಳತನ ಮಾಡುವುದು, ಗಲ್ಲಿಗಲ್ಲಿ ತಿರುಗುವುದು, ತನ್ನಷ್ಟಕ್ಕೆ ತಾನು ಮಾತನಾಡಿಕೊಳ್ಳುವುದು ಮಾಡುತ್ತಿರುತ್ತಾಳೆ.

    ಇದನ್ನು ಅತ್ತೆ ಮಾವನಿಗೆ ತಿಳಿಸಿದರೆ, ಅವನಿಗೇ ದಬಾಯಿಸಿ, ನನ್ನ ಮಗಳೇನು ಹುಚ್ಚಿಯೇ ಎಂದು ಜಗಳ ಮಾಡಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಏಕೆ ಹೀಗಾಗುತ್ತಿದೆ. ಅವಲು ನಿಜವಾಗಲೂ ಮತಿಭ್ರಮಣೆಗೊಳಗಾಗಿದ್ದಾಳೆಯೇ? ಅಥವಾ ತಾನು ಮಾಡುತ್ತಿರುವ ಕಳ್ಳತನದ ವಿಷಯ ಬಹಿರಂಗವಾಗುವುದೆಂಬ ಭಯಯಿಂದ ಹೀಗೆ ಮಾಡುತ್ತಿದ್ದಾಳಾ? ದಯವಿಟ್ಟು ಇದಕ್ಕೆ ನಿಮ್ಮ ಸಲಹೆ ತಿಳಿಸಿ.

    ಉತ್ತರ: ನೀವು ಹೇಳಿದ ವಿಷಯವನ್ನು ಅವಲೋಕಿಸಿದರೆ ನಿಮ್ಮ ಹೆಂಡತಿಗೆ ಮನೋರೋಗ ಇದೆಯೆನಿಸುತ್ತದೆ. ಇದನ್ನು ಅಲಕ್ಷ್ಯ ಮಾಡಬೇಡಿ. ಹಾಗೆಯೇ ಬಿಟ್ಟಲ್ಲಿ ಅತಿರೇಕಕ್ಕೆ ಹೋಗಬಹುದು. ಅವರು ಒಪ್ಪಿದರೂ, ಒಪ್ಪದಿದ್ದರೂ ನೀವು ಚಿಕಿತ್ಸೆ ಕೊಡಿಸಲೇ ಬೇಕು. ಕೆಲವು ಬಾರಿ ಆತ್ಮಹತ್ಯೆಗೂ ಯತ್ನಿಸಬಹುದು.
    ಅವರಿಗೆ ಚಿತ್ತ ವಿಕಲತೆ ಇರಬಹುದು. ಕಳ್ಳತನವೂ ಅವರಿಗೆ ಅಭ್ಯಾಸವಾಗಿಬಿಡುತ್ತದೆ. ಮತ್ತು ಅದು ಸಂತೋಷಕೊಡುತ್ತದೆ. ಇತರರಿಗೆ ಒತಂದರೆ ಕೊಟ್ಟು ಖುಷಿ ಪಡುವಂತಹ ಸ್ವಭಾವ ಇರುತ್ತದೆ. ನೀವು ಚಿಕಿತ್ಸೆಗೆ ತಡಮಾಡಿದಷ್ಟೂ ನಿಮಗೇ ತೊಂದರೆ. ನಿಮ್ಮ ಊರಿನಲ್ಲಿರುವ ಮನೋವೈದ್ಯರನ್ನು ಕಂಡು ಚಿಕಿತ್ಸೆ ಕೊಡಿಸಿ.

    ಆರೋಗ್ಯಕ್ಕೆ ಸಂಬಂಧಿಸಿದ ಇತರ ಲೇಖನಗಳಿಗೆ ಇಲ್ಲಿ ಕ್ಲಿಕ್​ ಮಾಡಿ:
    https://www.vijayavani.net/category/%e0%b2%86%e0%b2%b0%e0%b3%8b%e0%b2%97%e0%b3%8d%e0%b2%af/

    ಮುಟ್ಟು ನಿಂತ ನಂತರದ ಮಿಲನದ ಸಮಸ್ಯೆ ಶುರುವಾಗಿದೆ; ಇದಕ್ಕೆ ಪರಿಹಾರವಿದೆಯೆ?

    ಮದುವೆಯಾಗಿ 10 ವರ್ಷಕ್ಕೇನೇ ಪತ್ನಿ ಇಂಟರೆಸ್ಟ್​ ಕಳೆದುಕೊಂಡರೆ ನಾನು ಏನು ಮಾಡಲಿ?

    ಸ್ನೇಹಿತೆಯ ಜತೆ ಸೇರಿದಾಗ ಅವಳಿಗೆ ನಾನು ಮೊದಲಿನವನಲ್ಲ ಎನ್ನಿಸಿತು- ಸಂದೇಹ ಪರಿಹಾರ ಹೇಗೆ ಮಾಡಿಕೊಳ್ಳಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts