ಚಿಕ್ಕಮಗಳೂರು, ಕೋಲಾರದ ಅಂಗನವಾಡಿಯಲ್ಲಿ ಮಹಿಳೆಯರಿಗೆ 258 ಹುದ್ದೆಗಳಿಗೆ ಆಹ್ವಾನ

01082021 Devadurga Anganawadi Center
Published on

ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಸಂಕಷ್ಟ ನೀಡಲಿದೆ ಎಂಬ ಭೀತಿಯ ನಡುವೆಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೂಡ ಮಕ್ಕಳ ಆರೈಕೆಗೆ ಸಿದ್ಧತೆ ನಡೆಸಿದೆ. ಖಾಲಿಯಿರುವ ಅಂಗನವಾಡಿಗಳಲ್ಲಿನ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ರಾಜ್ಯದ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಿದೆ. ಇದೀಗ

ಚಿಕ್ಕಮಗಳೂರು ಹಾಗೂ ಕೋಲಾರ ಜಿಲ್ಲೆಯಲ್ಲಿನ ಅಂಗನವಾಡಿಗಳ ಹುದ್ದೆಗಳನ್ನು ಗುರುತಿಸಿದ್ದು, ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಅಭ್ಯರ್ಥಿಗಳು ಜನನ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ ಹಾಗೂ ಜಾತಿ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಆನ್‍ಲೈನ್ ಅರ್ಜಿಗಳಿಗೆ ಮಾತ್ರ ಮಾನ್ಯತೆ ಇದ್ದು, ದಾಖಲೆಗಳು ಅಸ್ಪಷ್ಟವಾಗಿದ್ದರೆ ಅರ್ಜಿ ತಿರಸ್ಕರಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಕಾರ್ಯಕರ್ತೆ ಹುದ್ದೆಗೆ ಎಸ್ಸೆಸ್ಸೆಲ್ಸಿ, ಸಹಾಯಕಿಯರ ಹುದ್ದೆಗೆ ಕನಿಷ್ಠ 4ನೇ ತರಗತಿ, ಗರಿಷ್ಠ 9ನೇ ತರಗತಿ ಅಧ್ಯಯನ ಮಾಡಿದ್ದು, ಕನ್ನಡ ಭಾಷೆ ಜ್ಞಾನ ಅವಶ್ಯ. ಕನಿಷ್ಠ 18ವರ್ಷ, ಗರಿಷ್ಠ 35 ವರ್ಷವಯೋಮಿತಿ ನಿಗದಿಪಡಿಸಿದ್ದು, ಅಂಗವಿಕಲರಿಗೆ 10 ವರ್ಷ ವಯೋಸಡಿಲಿಕೆ ಇದೆ. ಸಹಾಯಕಿ ಹುದ್ದೆಗೆ ಅಂಗವಿಕಲರು ಅರ್ಹರಾಗಿರುವುದಿಲ್ಲ.

* ಇವರಿಗೆ ಆದ್ಯತೆ

ಈ ಹುದ್ದೆಗಳಲ್ಲಿ ಸ್ಥಳೀಯರನ್ನೇ ನೇಮಕಾತಿ ಮಾಡಿಕೊಳ್ಳಲಾಗುತ್ತದೆಯಾದರೂ, ಹಾಗಿದ್ದೂ ಆಸಿಡ್ ದಾಳಿಗೆ ತುತ್ತಾದವರು, ಇಲಾಖೆಯ ಸಂಸ್ಥೆಗಳಲ್ಲಿ ಹಾಗೂ ರಾಜ್ಯ ಮಹಿಳಾ ನಿಲಯಗಳಲ್ಲಿ ಆಶ್ರಯ ಪಡೆದವರಿಗೆ, ವಿಧವೆಯರಿಗೆ, ಪ್ರಾಧಾನ್ಯತೆ ಇದೆ. ಒಟ್ಟಾರೆ ಆಯ್ಕೆ ಸಮಿತಿ ನಿರ್ಣಯವೇ ಅಂತಿಮವಾಗಿರುತ್ತದೆ. ಕಾರ್ಯಕರ್ತೆಗೆ ಮಾಸಿಕ 10,000 ರೂ, ಸಹಾಯಕಿಯರಿಗೆ 5,000 ರೂ. ವೇತನ ನಿಗದಿಯಾಗಿದೆ.

* ಕೋಲಾರ - 171

ಕೋಲಾರದ 6 ಶಿಶು ಅಭಿವೃದ್ಧಿ ಯೋಜಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಬಂಗಾರಪೇಟೆ, ಬೇತಮಂಗಲ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಅಂಗನವಾಡಿ ಕಾರ್ಯಕರ್ತೆ: 38

ಅಂಗನವಾಡಿ ಸಹಾಯಕಿ: 133

ಅರ್ಜಿ ಸಲ್ಲಿಸಲು ಕೊನೇ ದಿನ: 13.9.2021

ಅಧಿಸೂಚನೆಗೆ:https://bit.ly/3D3ImTC

* ಚಿಕ್ಕಮಗಳೂರು- 87

ಚಿಕ್ಕಮಗಳೂರಿನ 7 ಸಮಗ್ರ ಶಿಶು ಅಭಿವೃದ್ಧಿ ಯೋಜಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಕಡೂರು, ಮಧುಗಿರಿ, ಚಿಕ್ಕಮಗಳೂರು, ತರಿಕೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರಗಳಲ್ಲಿ ಹುದ್ದೆ ಇದೆ.

ಅಂಗನವಾಡಿ ಕಾರ್ಯಕರ್ತೆ: 27

ಅಂಗನವಾಡಿ ಸಹಾಯಕಿ: 60

ಅರ್ಜಿ ಸಲ್ಲಿಸಲು ಕೊನೆಯ ದಿನ: 6.9.2021

ಅಧಿಸೂಚನೆಗೆ: https://bit.ly/3ggODlk

ಮಾಹಿತಿಗೆ:https://anganwadirecruit.kar.nic.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net