

ಪಿಂಚಣಿ ವಿಮಾಗೆ ಸಂಬಂಧಿಸಿದ ಕೆಲಸ ನಿರ್ವಹಿಸುವ ಪೆನ್ಷನ್ ಆ್ಯಂಡ್ ರೆಗ್ಯುಲೇಟರಿ ಡೆವಲಪ್ಮೆಂಟ್ ಅಥಾರಿಟಿಯಲ್ಲಿ (ಪಿಎಫ್ಆರ್ಡಿಎ) ವಿವಿಧ ವಿಭಾಗದಲ್ಲಿ ಹಲವು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಿ, ಅಧಿಸೂಚನೆ ಹೊರಡಿಸಲಾಗಿದೆ. ಒಬ್ಬ ಅಭ್ಯರ್ಥಿ 2 ಹುದ್ದೆಗೆ ಅರ್ಜಿಸಲ್ಲಿಸಲು ಅವಕಾಶ ನೀಡಲಾಗಿದ್ದು, ಎರಡಕ್ಕೂ ಪ್ರತ್ಯೇಕ ಅರ್ಜಿಹಾಗೂ ಶುಲ್ಕ ಪಾವತಿತಕ್ಕದ್ದು ಎಂದು ಸೂಚಿಸಲಾಗಿದೆ.
ಒಟ್ಟು ಹುದ್ದೆಗಳು: 14
ಹುದ್ದೆ ವಿವರ
- ಆಫೀಸರ್ ಗ್ರೇಡ್ ಎ (ಅಸಿಸ್ಟೆಂಟ್ ಮ್ಯಾನೇಜರ್)
* ಜನರಲ್- 5
* ಆ್ಯಕ್ಚುರಿಯಲ್ - 2
* ಫೈನಾನ್ಸ್ ಆ್ಯಂಡ್ ಅಕೌಂಟ್ಸ್ - 2
* ಇನ್ಮೇರ್ಷನ್ ಟೆಕ್ನಾಲಜಿ - 2
* ಅಫಿಷಿಯಲ್ ಲ್ಯಾಂಗ್ವೇಜ್ (ರಾಜ್ಭಾಷಾ) - 1
* ರಿಸರ್ಚ್ (ಎಕನಾಮಿಕ್ಸ್-1, ಸ್ಟಾ$ಟಿಸ್ಟಿಕ್ಸ್-1) - 2
ಶೈಕ್ಷಣಿಕ ಅರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಕಾನೂನು, ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಇನ್ಮೇರ್ನ್ ಟೆಕ್ನಾಲಜಿ/ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ನಲ್ಲಿ ಪದವಿ, ಅರ್ಥಶಾಸ್ತ್ರ, ಸ್ಟಾಟಿಸ್ಟಿಕ್ಸ್, ಹಿಂದಿ, ಕಂಪ್ಯೂಟರ್ ಅಪ್ಲಿಕೇಷನ್ನಲ್ಲಿ ಸ್ನಾತಕೋತ್ತರ ಪದವಿ, ಸಿಎ, ಸಿಎ್ಎ, ಸಿಎಸ್, ಸಿಡಬ್ಲುಎ, ಎಸಿಎ, ಐಸಿಎಐ ಮಾಡಿರಬೇಕು.
ವಯೋಮಿತಿ: 31.7.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಬಹುಆಯ್ಕೆ ಮಾದರಿಯ ಲಿಖಿತ ಪರೀಕ್ಷೆನಡೆಸಲಾಗುವುದು. ಮೊದಲ ಪತ್ರಿಕೆಯಲ್ಲಿ ಇಂಗ್ಲಿಷ್ ಭಾಷೆ, ಕ್ವಾಂಟಿಟೇಟೀವ್ ಆಪ್ಟಿಟ್ಯೂಡ್, ರೀಸನಿಂಗ್ ಟೆಸ್ಟ್, ಸಾಮಾನ್ಯ ಜ್ಞಾನ ವಿಷಯಗಳಿರುತ್ತವೆ. ಎರಡನೇ ಪತ್ರಿಕೆಯಲ್ಲಿ ಜನರಲ್ ಸ್ಟ್ರೀಮ್ ಹಾಗೂ ಹುದ್ದೆಗೆ ಸಂಬಂಧಿಸಿದ ವಿಷಯ ಇರುತ್ತದೆ. ತಪು$್ಪ ಉತ್ತರಗಳಿಗೆ ಋಣಾತ್ಮಕ ಅಂಕ ಇರುತ್ತದೆ. ಇದರಲ್ಲಿ ಆಯ್ಕೆಯಾದವರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನವು ಇಂಗ್ಲಿಷ್ ಅಥವಾ ಹಿಂದಿಯಲ್ಲಿರಲಿದೆ. ಲಿಖಿತ ಪರೀಕ್ಷೆಯು ದಕ್ಷಿಣವಲಯದಲ್ಲಿ ಬೆಂಗಳೂರು, ಚೆನ್ನೈ, ಹೈದರಾಬಾದ್, ತಿರುವನಂತಪುರದಲ್ಲಿ ನಡೆಯಲಿದೆ.
ವೇತನ: ಮಾಸಿಕ 28,150-55,600 ರೂ. ಸಂಬಳದ ಜತೆ ಪಿಎಸ್, ಜಿಎ, ವಿಶೇಷ ಭತ್ಯೆ, ಡಿಎ, ಮನೆ ಬಾಡಿಗೆ ಭತ್ಯೆಗಳನ್ನು ನೀಡಲಾಗುವುದು.
ಅರ್ಜಿಶುಲ್ಕ: ಮೀಸಲಾತಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 800 ರೂ.ಗಳನ್ನು ಆನ್ಲೈನ್ ಮೂಲಕ ಪಾವತಿಸಬೇಕು.
ಅರ್ಜಿಸಲ್ಲಿಸಲು ಕೊನೇ ದಿನ: 16.9.2021
ಅಧಿಸೂಚನೆಗೆ: https://bit.ly/3yX4MDT
ಮಾಹಿತಿಗೆ: http://www.pfrda.org.in