More

    ಡಿಪ್ಲೋಮಾ ಪದವೀಧರರಿಗೆ ಇಂಡಿಯನ್ ಆಯಿಲ್‍ನಲ್ಲಿ ನೇಮಕ: 480 ಹುದ್ದೆಗಳಿಗೆ ಅಹ್ವಾನ

    ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟಿಡ್‍ನಿಂದ ಟೆಕ್ನಿಕಲ್ ಆ್ಯಂಡ್ ನಾನ್ ಟೆಕ್ನಿಕಲ್ ಟ್ರೇಡ್ ಅಪ್ರೆಂಟೀಸ್‍ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯವರ್ಗದ ಅಭ್ಯರ್ಥಿಗೆ 261 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 37, ಎಸ್ಸಿಗೆ 60, ಎಸ್ಟಿಗೆ 9, ಇತರ ಹಿಂದುಳಿದ ವರ್ಗಕ್ಕೆ 113 ಸ್ಥಾನ ಮೀಸಲಿರಿಸಲಾಗಿದೆ. ಇದರಲ್ಲಿ 19 ಸ್ಥಾನವನ್ನು ಅಂಗವಿಕಲ ಅಭ್ಯರ್ಥಿಗೆ ಕಾಯ್ದಿರಿಸಲಾಗಿದೆ. ಅಂಗವೈಕಲ್ಯವು ಶೇ.40ಕ್ಕಿಂತ ಹೆಚ್ಚಿರಬಾರದು. ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಪೆಂಡ್ ಅನ್ನು ಅಪ್ರೆಂಟೀಸ್ ಆ್ಯಕ್ಟ್ 1961/ 1973/ ಅಪ್ರೆಂಟೀಸ್ ರೂಲ್ಸ್ 1992ರ ಅನ್ವಯ ನೀಡಲಾಗುವುದು ಎಂದು ತಿಳಿಸಲಾಗಿದೆ.

    ಎಲ್ಲೆಲ್ಲಿ ನೇಮಕಾತಿ?
    ಕರ್ನಾಟಕ, ತಮಿಳುನಾಡು, ಪುದುಚೆರಿ, ಕೇರಳ, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಕರ್ನಾಟಕದ ವಿವರ
    * ಟ್ರೇಡ್ ಅಪ್ರೆಂಟೀಸ್ – 21
    * ಟೆಕ್ನಿಕಲ್ ಅಪ್ರೆಂಟೀಸ್ – 10
    * ಟ್ರೇಡ್ ಅಪ್ರೆಂಟೀಸ್- ಅಕೌಂಟಂಟ್ – 54
    * ಡಾಟಾ ಎಂಟ್ರಿ ಆಪರೇಟರ್ (ಫ್ರೆಷರ್-4, ಕೌಶಲ ಹೊಂದಿದವರಿಗೆ-2) – 6
    * ರೀಟೇಲ್ ಸೇಲ್ಸ್ ಅಸೋಸಿಯೇಟ್ (ಫ್ರೆಷರ್-4, ಕೌಶಲ ಹೊಂದಿದವರಿಗೆ-2)- 6

    ಸ್ಥಾನಗಳ ವಿವರ
    – ಟ್ರೇಡ್ ಅಪ್ರೆಂಟೀಸ್
    * ಫಿಟ್ಟರ್ * ಎಲೆಕ್ಟ್ರಿಷಿಯನ್ * ಎಲೆಕ್ಟ್ರಾನಿಕ್ ಮೆಕಾನಿಕ್ * ಇನ್‍ಸ್ಟ್ರುಮೆಂಟ್ ಮೆಕಾನಿಕ್ * ಮೆಷಿನಿಸ್ಟ್ * ಅಕೌಂಟಂಟ್ * ಡಾಟಾ ಎಂಟ್ರಿ ಆಪರೇಟರ್ * ರೀಟೇಲ್ ಸೇಲ್ ಅಸೋಸಿಯೇಟ್

    – ಟೆಕ್ನಿಷಿಯನ್ ಅಪ್ರೆಂಟೀಸ್
    * ಮೆಕಾನಿಕ್ * ಎಲೆಕ್ಟ್ರಿಕಲ್ * ಇನ್‍ಸ್ಟ್ರುಮೆಂಟೇಷನ್ * ಸಿವಿಲ್ * ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ * ಎಲೆಕ್ಟ್ರಾನಿಕ್ಸ್

    ವಿದ್ಯಾರ್ಹತೆ: ಟ್ರೇಡ್ ಅಪ್ರೆಂಟೀಸ್‍ಗೆ ಮೆಟ್ರಿಕ್, ಐಟಿಐ, ಟ್ರೇಡ್ ಅಪ್ರೆಂಟೀಸ್ ಅಕೌಂಟಂಟ್ ಮತ್ತು ಡಾಟಾ ಎಂಟ್ರಿ ಆಪರೇಟರ್ – ಪದವಿ, ಟ್ರೇಡ್ ಅಪ್ರೆಂಟೀಸ್ ರಿಟೇಲ್ ಸೇಲ್ಸ್ ಅಸೋಸಿಯೇಟ್‍ಗೆ ದ್ವಿತೀಯ ಪಿಯುಸಿ, ಟೆಕ್ನಿಕಲ್ ಅಪ್ರೆಂಟೀಸ್​ಗೆ ಇಂಜಿನಿಯರಿಂಗ್ ಡಿಪ್ಲೋಮಾ ಮಾಡಿರಬೇಕು.

    ವಯೋಮಿತಿ: 30.6.2021ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ 24 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ: ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಬಹು ಆಯ್ಕೆ ಮಾದರಿಯ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ವೈದ್ಯಕೀಯವಾಗಿ ಫಿಟ್ ಆಗಿರಬೇಕು. ನಂತರ ದಾಖಲೆ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 28.8.2021
    ಲಿಖಿತ ಪರೀಕ್ಷೆ ನಡೆಯುವ ದಿನಾಂಕ: 19.9.2021

    ಅಧಿಸೂಚನೆಗೆ: https://bit.ly/3AIWMXz

    ಮಾಹಿತಿಗೆ: http://iocl.com

    ಎಸ್​ಜೆವಿಎನ್​ನಲ್ಲಿ 129 ಫೀಲ್ಡ್ ಆಫೀಸರ್ ಹುದ್ದೆಗೆ ಆಹ್ವಾನ: ವಿದೇಶದಲ್ಲಿಯೂ ಅವಕಾಶ

    ಡಿಆರ್​ಡಿಒನಲ್ಲಿ ರಿಸರ್ಚ್ ಫೆಲೋಗಳ ನೇಮಕ- ಇಂಜಿನಿಯರಿಂಗ್​ ಪದವೀಧರರಿಂದ ಅಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts