More

    ಡಿಆರ್​ಡಿಒನಲ್ಲಿ ರಿಸರ್ಚ್ ಫೆಲೋಗಳ ನೇಮಕ- ಇಂಜಿನಿಯರಿಂಗ್​ ಪದವೀಧರರಿಂದ ಅಹ್ವಾನ

    ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟರ್ ಫಾರ್ ಏರ್​ಬೋರ್ನ್ ಸಿಸ್ಟಂ (ಸಿಎಬಿಎಸ್) ಬೆಂಗಳೂರು ಪ್ರಾದೇಶಿಕ ಕಚೇರಿಯಲ್ಲಿ ಜೂನಿಯರ್ ರಿಸರ್ಚ್ ಫೆಲೊಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರಿನ ಸಿಎಬಿಎಸ್ ಕಚೇರಿಗೆ ನೇಮಕ ಮಾಡಲಾಗುವುದು. ಆರಂಭದಲ್ಲಿ 2 ವರ್ಷದ ಒಪ್ಪಂದದಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ನಂತರ ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ 2 ವರ್ಷ ಅವಧಿ ವಿಸತರಿಸಲಾಗುವುದು.
    ಒಟ್ಟು ಸ್ಥಾನಗಳು: 20

    ಹುದ್ದೆ ವಿವರ

    * ಏರೋನಾಟಿಕಲ್ ಇಂಜಿನಿಯರ್ – 2

    * ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ – 5

    * ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ – 9

    * ಎಲೆಕ್ಟ್ರಿಕಲ್ ಇಂಜಿನಿಯರಿಂಗ್ – 1

    * ಮೆಕಾನಿಕಲ್ ಇಂಜಿನಿಯರಿಂಗ್ – 3

    ಶೈಕ್ಷಣಿಕ ಅರ್ಹತೆ: ಏರೋನಾಟಿಕಲ್ ಇಂಜಿನಿಯರಿಂಗ್/ ಏರೋಸ್ಪೇಸ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್/ ಟೆಕ್ನಾಲಜಿ/ ಸಾಫ್ಟ್​ವೇರ್ ಇಂಜಿನಿಯರಿಂಗ್/ ಇನ್​ಫಮೇಷನ್ ಟೆಕ್ನಾಲಜಿ, ಕಂಪ್ಯೂಟರ್ ನೆಟ್​ವರ್ಕಿಂಗ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆಂಡ್ ಕಂಟ್ರೋಲ್/ ಎಲೆಕ್ಟ್ರಾನಿಕ್ಸ್ ಆಂಡ್ ಟೆಲಿ-ಕಮ್ಯುನಿಕೇಷನ್ ಸಿಸ್ಟಮ್ ಎಲೆಕ್ಟ್ರಾನಿಕ್ಸ್ ಆಂಡ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಪವರ್ ಸಿಸ್ಟಂ, ಎಲೆಕ್ಟ್ರಾಲಿಕಲ್ ಆಂಡ್ ರಿನಿವಬಲ್ ಎನರ್ಜಿ/ ಮೆಕಾನಿಕಲ್/ ಮೆಕಾನಿಕಲ್ ಆಂಡ್ ಆಟೋಮೇಷನ್/ ಮೆಕಾನಿಕಲ್ ಆಂಡ್ ಪ್ರೊಡಕ್ಷನ್ ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದಿರಬೇಕು. 2020 ಅಥವಾ 2021ರ ಗೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

    ಸಂಶೋಧನಾ ವಿಭಾಗ: ವಾಯುಬಲವಿಜ್ಞಾನ (ಏರೋಡೈನಾಮಿಕ್ಸ್), ರಚನಾತ್ಮಕ ವಿನ್ಯಾಸ ವಿಶ್ಲೇಷಣೆ, ರಾಡರ್ ಇಂಜಿನಿಯರಿಂಗ್, ಸಂವಹನ ಇಂಜಿನಿಯರಿಂಗ್, ನೆಟ್​ವರ್ಕಿಂಗ್ ಆಂಡ್ ಡಿಸ್​ಪ್ಲೇ ಸಿಸ್ಟಂ, ಮಿಷನ್ ಕಂಪ್ಯೂಟರ್, ಥರ್ಮಲ್ ಮ್ಯಾನೇಜ್​ವೆುಂಟ್ ಹಾಗೂ ಇತರ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು.

    ವೇತನ: ಮಾಸಿಕ 31,000 ರೂ. ಹಾಗೂ ಮನೆ ಬಾಡಿಗೆ ಭತ್ಯೆ ನೀಡಲಾಗುವುದು.

    ವಯೋಮಿತಿ: ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಗರಿಷ್ಠ 28 ವರ್ಷ ನಿಗದಿಯಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

    ಆಯ್ಕೆ ಪ್ರಕ್ರಿಯೆ: ಗೇಟ್ ಪರೀಕ್ಷೆಯ ಅಂಕ ಹಾಗೂ ಪದವಿಯ ಅಂಕಗಳನ್ನು ಆಧರಿಸಿ ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಆನ್​ಲೈನ್ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 30.8.2021 (ಎಂಪ್ಲಾಮೆಂಟ್ ನ್ಯೂಸ್​ನಲ್ಲಿ ಜಾಹೀರಾತು ಪ್ರಕಟವಾಗಿ 21 ದಿನದ ಒಳಗೆ)

    ಅಧಿಸೂಚನೆಗೆ: https://bit.ly/3fXa3nk

    ಮಾಹಿತಿಗೆ: https://www.drdo.gov.in/

    ವಿಜ್ಞಾನ ಪದವೀಧರರಿಗೆ ಭೂವಿಜ್ಞಾನ ಸಚಿವಾಲಯದಲ್ಲಿವೆ 50 ಹುದ್ದೆ: 1.25 ಲಕ್ಷ ರೂ.ವರೆಗೆ ಸಂಬಳ

    ಕಲ್ಲಿದ್ದಲು ಸಂಸ್ಥೆಯಲ್ಲಿ ಮ್ಯಾನೇಜಿಂಗ್​ ಟ್ರೇನಿ ಹುದ್ದೆ- 588 ಪೋಸ್ಟ್‌, 1.60 ಲಕ್ಷ ರೂ.ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts