More

    ವಿಜ್ಞಾನ ಪದವೀಧರರಿಗೆ ಭೂವಿಜ್ಞಾನ ಸಚಿವಾಲಯದಲ್ಲಿವೆ 50 ಹುದ್ದೆ: 1.25 ಲಕ್ಷ ರೂ.ವರೆಗೆ ಸಂಬಳ

    ಭೂ ವಿಜ್ಞಾನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟರ್ ಫಾರ್ ಮರೈನ್ ಲಿವಿಂಗ್ ರಿಸೋರ್ಸ್ ಆಂಡ್ ಎಕಾಲಜಿಯ (ಸಿಎಂಎಲ್​ಆರ್​ಇ- ಸಾಗರ ಜೀವಿ ಸಂಪನ್ಮೂಲ ಮತ್ತು ಪರಿಸರ ವಿಜ್ಞಾನ ಕೇಂದ್ರ) ಕೊಚ್ಚಿ ಘಟಕದಲ್ಲಿನ ವಿವಿಧ ವಿಭಾಗಗಳಲ್ಲಿ ಆರಂಭಿಸುತ್ತಿರುವ ಸಂಶೋಧನಾ ಚಟುವಟಿಕೆಯಲ್ಲಿ ಕಾರ್ಯನಿರ್ವಹಿಸಲು ಗುತ್ತಿಗೆ ಆಧಾರದಲ್ಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

    ಮರೈನ್ ಬಯೋಡೈವರ್ಸಿಟಿ, ಮರೈನ್ ಬಯೋಜಿಯೋಕೆಮಿಸ್ಟ್ರಿ, ಪ್ಲಾಂಕ್ಟನ್ ಡೈನಾಮಿಕ್ಸ್/ ಟ್ರೋಫಿಕ್ ಎಕಾಲಜಿ, ಮರೈನ್ ಫಿಷರೀಸ್, ಟ್ಯಾಕ್ಸಾನೊಮಿ, ಮರೈನ್ ಮಮಲ್ಸ್, ಮೆಟಜಿನೋಮಿಕ್ಸ್ ಆಡ್ ಡಿಒಎಂ, ಫಿಷರೀಸ್ ಅಕೌಸ್ಟಿಕ್ಸ್, ಫಿಜಿಕಲ್ ಓಷನೋಗ್ರಫಿ, ಬಯೋಲಾಜಿಕಲ್ ಡಾಟಾಬೇಸ್ ಮ್ಯಾನೇಜ್​ವೆುಂಟ್ ಆಂಡ್ ಇನ್​ಫಮೇಷನ್ ಟೆಕ್ನಾಲಜಿ, ಫೈಟೋಪ್ಲಾಂಕ್ಟನ್ ಡೈನಾಮಿಕ್ಸ್, ಜೂಫ್ಲಾಂಕ್ಟನ್/ಫಿಷ್​ಎಗ್ಸ್ ಆಂಡ್ ಲಾರ್ವ/ ಫುಡ್​ವೆಬ್ ವಿಭಾಗಳಲ್ಲಿ ಕೆಳಕಂಡ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳು ಒಂದು ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ನಂತರ ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ 2026ರ ವರೆಗೆ ಅವಧಿ ವಿಸ್ತರಿಸಲಾಗುವುದು. ಆರಂಭದಲ್ಲಿ ಸಿಎಂಎಲ್​ಆರ್​ಇ ಕೊಚ್ಚಿ ಘಟಕಕ್ಕೆ ನೇಮಕ ಮಾಡಲಾಗುವುದು ನಂತರ ಇತರ ಸ್ಥಳಗಳಿಗೆ ವರ್ಗ ಮಾಡಲಾಗುವುದು. ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 28,000-1,25,000 ರೂ.ವರೆಗೆ ವೇತನ ಇದೆ.

    ಹುದ್ದೆ ವಿವರ

    * ಪ್ರಾಜೆಕ್ಟ್ ಸೈಂಟಿಸ್ಟ್ -ಐ, ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಅಸೋಸಿಯೇಟ್-ಐಐ, ಎಸ್​ಆರ್​ಎಫ್, ಪ್ರಾಜೆಕ್ಟ್ ಅಸೋಸಿಯೇಟ್ -ಐ/ ಜೆಆರ್​ಎಫ್ – 32

    * ಪ್ರಾಜೆಕ್ಟ್ ಸೈಂಟಿಸ್ಟ್- ಐಐಐ – 2

    * ಪ್ರಾಜೆಕ್ಟ್ ಸೈಂಟಿಸ್ಟ್-ಐಐ – 15

    * ಪ್ರಾಜೆಕ್ಟ್ ಮ್ಯಾನೇಜರ್ – 1

    ಶೈಕ್ಷಣಿಕ ಅರ್ಹತೆ: ಮರೈನ್ ಬಯೋಲಜಿ/ ಮರೈನ್ ಸೈನ್ಸ್/ ಮರೈನ್ ಬಯೋಟೆಕ್ನಾಲಜಿ, ಹೈಡ್ರೋಕೆಮಿಸ್ಟ್ರಿ/ ಮರೈನ್ ಕೆಮಿಸ್ಟ್ರಿ, ಜೂಲಜಿ/ ಲೈಫ್ ಸೈನ್ಸ್, ಫಿಷರೀಸ್ ಸೈನ್ಸ್, ಅಪ್ಲೈಡ್ ಫಿಷರೀಸ್, ಗಣಿತ, ಫಿಜಿಕ್ಸ್/ ಫಿಜಿಕಲ್ ಓಷನೋಗ್ರಫಿ/ ಓಷನ್ ಟೆಕ್ನಾಲಜಿ, ಬಯೋಇನ್​ಫಮೇಟಿಕ್ಸ್/ ಕಂಪ್ಯೂಟರ್ ಸೈನ್ಸ್/ ಇನ್​ಫಮೇಷನ್ ಟೆಕ್ನಾಲಜಿ/ ಮೈಕ್ರೋಬಯಾಲಜಿ, ಮರಿಕಲ್ಚರ್/ ಅಕ್ವಕಲ್ಚರ್, ಸ್ಟಾ್ಯಟಿಸ್ಟಿಕ್ಸ್/ ಅಪ್ಲೈಡ್ ಮ್ಯಾಥಮೆಟಿಕ್ಸ್​ನಲ್ಲಿ ಬಿಟೆಕ್, ಎಂಎಸ್ಸಿ, ಪಿಎಚ್​ಡಿ ಪದವಿ ಪಡೆದಿರಬೇಕು.

    ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 35-45 ವರ್ಷ ವಯೋಮಿತಿ ನಿಗದಿಯಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 17.8.2021

    ಅಧಿಸೂಚನೆಗೆ: https://bit.ly/3xCBSHn

    ಮಾಹಿತಿಗೆ: http://cmlre.gov.in

    ಡಿಪ್ಲೊಮಾ ಸೇರಿದಂತೆ ವಿವಿಧ ಪದವೀಧರರಿಗೆ ಭರ್ಜರಿ ಅವಕಾಶ: 513 ಹುದ್ದೆಗಳಿಗೆ ಆಹ್ವಾನ

    ಇಂಜಿನಿಯರಿಂಗ್ ಪದವೀಧರರಿಗೆ ಗುಡ್​ನ್ಯೂಸ್: ಬಿಇಎಲ್​ನಲ್ಲಿ 511 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts