More

    ಯಾವ ಕೆಲ್ಸವೂ ಚಿಕ್ಕದಲ್ಲ: ಸೈಕಲ್​ನಲ್ಲಿ ಕಾಫಿ ಮಾರುವ ಈ ಇಂಜಿನಿಯರ್ ಕತೆ ಕೇಳಿದ್ರೆ​ ಮನಕಲಕುತ್ತೆ

    ತ್ರಿಸ್ಸೂರ್​: ಕೇರಳ ಮೂಲದ ಕೆ.ಎಸ್​. ವಿಷ್ಣು ಎಂಬುವರು 2010ರ ಹೊಸ ವರ್ಷದ ಸಮಯದಲ್ಲೇ ಏಕಾಂಗಿ ಆದರು. ಯಾವಾಗ ವಿಷ್ಣು ಅವರ ತಂದೆ ತನ್ನಿಯಂ ಮೂಲದ ಕೆ ಸತ್ಯಶೀಲನ್ ಅವರು ತಮ್ಮ ಎಲ್ಲ ಸಂಪತ್ತನ್ನು ಕಳೆದುಕೊಂಡು ತಮ್ಮ ತಾಯ್ನಾಡನ್ನು ತೊರೆದಾಗ, ಯಾರೋ ವಿಷ್ಣು ಅವರಿಗೆ ಏನಾದರೂ ಸಹಾಯ ಬೇಕಾ ಎಂದು ಕೇಳಿದ್ದರು. ಈ ವೇಳೆ ವಿಷ್ಣು ಬಯಸಿದ್ದು ಒಂದು ಹಳೆಯ ಸೈಕಲ್​ ಮತ್ತು ಒಂದು ಲೋಹದ ಕಡಾಯಿ ಮಾತ್ರ. 36 ವರ್ಷದ ವಿಷ್ಣು ಕಳೆದ 12 ವರ್ಷಗಳಿಂದಲೂ ಅದೇ ಸೈಕಲ್​ನಲ್ಲಿ ಶುಂಠಿ ಕಾಫಿ ಮತ್ತು ಬೇಯಿಸಿದ ಮೊಟ್ಟೆ ಮಾರುತ್ತಾ ಜೀವನ ಸಾಗಿಸುತ್ತಿದ್ದು, ಅವರ ರೋಚಕ ಜೀವನದ ಪಯಣ ಸ್ಫೂರ್ತಿದಾಯಕ ಕತೆ ಇಲ್ಲಿದೆ.

    ವಾಯುಸೇನೆಯಲ್ಲಿ ಕೆಲಸ ಮಾಡುತ್ತಿದ್ದ ವಿಷ್ಣು ತಂದೆ ಸತ್ಯಶೀಲನ್​ ನಿವೃತ್ತರಾದ ಬಳಿಕ ತ್ರಿಸ್ಸೂರ್​ನ ಪ್ರಮುಖ ಕಂಪನಿಯೊಂದರಲ್ಲಿ ಮ್ಯಾನೇಜಿಂಗ್​ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಲಯನ್​ ಕ್ಲಬ್​ ಅಧ್ಯಕ್ಷರು ಸೇರಿದಂತೆ ಅನೇಕ ಉನ್ನತ ಸ್ಥಾನಗಳನ್ನು ನಿಭಾಯಿಸಿದ್ದಾರೆ. ಚಿಟ್​ ಕಂಪನಿಯನ್ನು ಬಿಟ್ಟ ಬಳಿಕ ಸತ್ಯಶೀಲನ್​ ಅವರು ಎರ್ನಾಕುಲಂನ ಕಲೂರ್​ನಲ್ಲಿ ಐಟಿ ಕಂಪನಿ ಒಂದರನ್ನು ಶುರು ಮಾಡಿದರು. ಆ ಹಂತದಿಂದ ಅವರ ಜೀವನದಲ್ಲಿ ಹಲವಾರು ಬಿಕ್ಕಟ್ಟುಗಳು ನುಸುಳಿದವು.

    ಈ ಸಂದರ್ಭದಲ್ಲಿ ವಿಷ್ಣು ತಮಿಳುನಾಡಿನ ಗೊಬಿಚೆಟ್ಟಿಪಾಳ್ಯಂನಲ್ಲಿ ಎಲೆಕ್ಟ್ರಾನಿಕ್ಸ್​ ಮತ್ತು ಕಮ್ಯೂನಿಕೇಷನ್​ ಇಂಜಿನಿಯರಿಂಗ್​ಗೆ ಸೇರಿದರು. ಆದರೆ, ಕುಟುಂಬದ ಸಮಸ್ಯೆ ವಿಷ್ಣುಗೆ ತಿಳಿದಿರಲಿಲ್ಲ. 2005ರಲ್ಲಿ ಇಂಜಿನಿಯರಿಂಗ್​ ಪೂರ್ಣಗೊಳಿಸಿದ ವಿಷ್ಣು, ಕೊಯಮತ್ತೂರಿನಲ್ಲಿ ಮೂರು ವರ್ಷ ಕೆಲಸ ಮಾಡಿದರು. 2009ರಲ್ಲಿ ಹಿಂದಿರುಗಿದಾಗ, ಅವರ ಮನೆ ಮತ್ತು ಅದರ ಸುತ್ತಲಿನ ಪ್ರದೇಶವು ಹೊರಹಾಕುವ ಅಂಚಿನಲ್ಲಿತ್ತು.

    ಅಧಿಕಾರಿಗಳು ಮನೆಯನ್ನು ವಶಕ್ಕೆ ಪಡೆದಾಗ ವಿಷ್ಣು ತಂದೆ ತಾಯ್ನಾಡನ್ನು ತೊರೆದರು. ಅದಕ್ಕೂ ಮುನ್ನ ತನ್ನ ಮಗನೊಂದಿಗೆ ಮಾತನಾಡಿ, ನಾನು ನಿನ್ನನ್ನು ಚೆನ್ನಾಗಿ ಬೆಳೆಸಿದೆ ಮತ್ತು ಶಿಕ್ಷಣವನ್ನು ಕೊಡಿಸಿದೆ. ಅದರಿಂದ ನೀನು ಕೆಲಸವನ್ನು ಪಡೆದುಕೊಂಡೆ. ಜೀವನದಲ್ಲಿ ನೀನು ಒಳ್ಳೆಯ ವ್ಯಕ್ತಿಯಾಗಿ ಬದುಕು. ನಿಮ್ಮ ತಂದೆ ಶಾಶ್ವತವಾಗಿ ಹೋದರು ಎಂದು ಪರಿಗಣಿಸು ಎಂದು ಹೇಳಿ ಹೊರಟು ಹೋಗುತ್ತಾರೆ.

    ಇತ್ತ ಎಲ್ಲವನ್ನು ಕಳೆದುಕೊಂಡ ವಿಷ್ಣು, ಶುಂಠಿ ಕಾಫಿ ಮಾರಾಟ ಮಾಡುವುದನ್ನು ಆರಂಭಿಸುತ್ತಾರೆ ಮತ್ತು ಬೀದಿ ಬೀದಿಯಲ್ಲಿ ಮಲಗಿಕೊಳ್ಳುತ್ತಾರೆ. ಅಲ್ಲದೆ, ಬೆಳಗ್ಗೆ ಹೋಟೆಲ್​ನಲ್ಲಿ ಕೆಲಸ ಮಾಡಿ, ಸಂಜೆ ಕಾಫಿ ಮಾರುವುದನ್ನು ಮುಂದುವರಿಸುತ್ತಾರೆ. ಹೀಗಿರುವಾಗ 2013ರಲ್ಲಿ ವಿಷ್ಣು ಮತ್ತೆ ಕೊಯಮತ್ತೂರಿಗೆ ತೆರಳುತ್ತಾರೆ. ಒಳ್ಳೆಯ ಸಂಬಳದೊಂದಿಗೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಸುಮಾರು 3 ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ರಾಜಕೀಯ ಪಕ್ಷವೊಂದು ವಿಷ್ಣುವನ್ನು ಅವರ ತಾಯ್ನಾಡಿಗೆ ಆಹ್ವಾನಿಸುತ್ತಾರೆ. ಆದರೆ, ಪಕ್ಷದಿಂದ ವಿಷ್ಣುಗೆ ಯಾವುದೇ ಸಹಾಯ ಆಗುವುದಿಲ್ಲ. ಕೊನೆಗೆ ತಾನು ಗಳಿಸಿದ್ದ ಎಲ್ಲ ಹಣವನ್ನು ಕಳೆದುಕೊಳ್ಳುತ್ತಾರೆ. ಇದಾದ ಬಳಿಕ ಮತ್ತೆ ತನ್ನ ಹಳೆಯ ಕೆಲಸವನ್ನು ಆರಂಭಿಸುತ್ತಾರೆ.

    ವಿಷ್ಣು ಸದ್ಯ ಚೆಂಬುಕ್ಕವ್​ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಾರೆ. ಶುಂಠಿ ಕಾಫಿ ಮತ್ತು ಬೇಯಿಸಿದ ಮೊಟ್ಟೆ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ತ್ರಿಸ್ಸೂರ್​ ಪಟ್ಟಣದಲ್ಲಿ ಈ ಕಾಯಕ ನಿತ್ಯವೂ ನಡೆಯುತ್ತಿದ್ದು, ರಾತ್ರಿಯೆಲ್ಲ ಕಾಫಿ ಮಾರಾಟ ಮಾಡುವ ವಿಷ್ಣು ಬೆಳಗಿನ ಜಾವ 4 ಗಂಟೆಗೆ ಮನೆಗೆ ಬಂದು ಮಲಗುತ್ತಾರೆ. ಅಲ್ಲದೆ, ಡಿಸೈನಿಂಗ್​ ಕೆಲಸವನ್ನು ಸಹ ಮಾಡುತ್ತಾರೆ. ಒಂದು ಯೂಟ್ಯೂಬ್​​ ಚಾನೆಲ್​ ಕೂಡ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ “ಫ್ಲ್ಯಾಟ್​ 783” ಹೆಸರಿನ ಒಂದು ಫೀಚರ್​​ ಫಿಲ್ಮ್​ ಮಾಡಲು ತಯಾರಿ ನಡೆಸುತ್ತಿದ್ದಾರೆ. ತಮ್ಮ ಕೆಲಸದ ಮೇಲೆ ವಿಷ್ಣುಗೆ ಅಭಿಮಾನವಿದ್ದು, ಯಾವ ಕೆಲಸವೂ ಸಣ್ಣದಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ಬೈಕ್​ ಏರಿ ಇಂದೋರ್​ ಸುತ್ತಾಡಿದ ವಿಕ್ಕಿ ಕೌಶಲ್​-ಸಾರಾ ಅಲಿ ಖಾನ್​ ವಿರುದ್ಧ ಹೊಸ ವರ್ಷದಂದೇ ದೂರು ದಾಖಲು!

    ಕೆಳಗಿಳಿಯದ ಪೆಟ್ರೋಲ್​ ಬೆಲೆಯಿಂದಾಗಿ ಕುದುರೆ ಏರಿದ ಉದ್ಯಮಿ: ವಿಜಯಪುರದಲ್ಲಿ ವಿನೂತನ ಪ್ರಕರಣ

    ಒಂದು ವಾರದ ಹಿಂದಷ್ಟೇ ಮದುವೆ ಆಗಿದ್ದ ಸಬ್​ ಇನ್ಸ್​​ಪೆಕ್ಟರ್​ ಹೊಸ ವರ್ಷದಂದೇ ದುರಂತ ಸಾವು!

    ಹೊಸ ವರ್ಷದ ಪಾರ್ಟಿಗೆ 2 ಮೇಕೆ ಕದ್ದ ಎಎಸ್​ಐ! ಮಾಲೀಕನ ಕಣ್ಣೀರಿಗೂ ಕರಗದೆ, ಬಾಡೂಟ ತಿಂದು ತೇಗಿದ್ರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts