More

    ಸಿಇಟಿ ಅರ್ಜಿಯಲ್ಲಿ ತಪ್ಪಾಗಿದೆಯೇ? ಭಯ ಬೇಡ: ಕೆಇಎ ಅಭಯ

    ಬೆಂಗಳೂರು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ-2024ಕ್ಕೆ ಆನ್‌ಲೈನ್‌ನಲ್ಲಿ ಸಲ್ಲಿಸಿರುವ ಅರ್ಜಿಗಳ ತಿದ್ದುಪಡಿಗೆ ೆ.10ರ ನಂತರ ಅವಕಾಶ ಕಲ್ಪಿಸಿಕೊಡಲಾಗುವುದು. ಈ ಬಗ್ಗೆ ಅಭ್ಯರ್ಥಿಗಳು ಆತಂಕಗೊಳ್ಳುವುದು ಬೇಡವೆಂದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಸ್ಪಷ್ಟನೆ ನೀಡಿದ್ದಾರೆ.

    ಕೆಲವು ದಿನಗಳ ಹಿಂದೆ ’ರಾಜ್ಯ ದತ್ತಾಂಶ ಕೇಂದ್ರ’ದಲ್ಲಿ ಒಂದೆರಡು ದಿನ ಸರ್ವರ್ ಡೌನ್ ಆಗಿ ಸರ್ಜಿ ಸಲ್ಲಿಸಲು ಸಮಸ್ಯೆ ಎದುರಾಗಿತ್ತು. ಈಗ ಆ ಸಮಸ್ಯೆಯನ್ನು ಪರಿಹರಿಸಲಾಗಿದೆ. ಈ ವರೆಗೆ 1.25 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು 98 ಸಾವಿರ ಅಭ್ಯರ್ಥಿಗಳು ಶುಲ್ಕವನ್ನೂ ಪಾವತಿಸಿದ್ದಾರೆ. ಶುಲ್ಕ ಪಾವತಿಯಾದರೆ ಅರ್ಜಿ ಪರಿಶೀಲನೆ ಯಶಸ್ವಿಯಾಗಿ ಮುಗಿದಿದೆ ಎಂದೇ ಅರ್ಥ ಎಂದು ವಿವರಿಸಿದ್ದಾರೆ.

    ಸಿಇಟಿ ಅರ್ಜಿಯು ’ಅಪ್ಲಿಕೇಶನ್ ಕಮ್ ವೆರಿಫಿಕೇಶನ್ ಮಾಡೆಲ್’ (ಪರಿಶೀಲನೆ ನಮೂನೆಯೊಂದಿಗೆ) ಹೊಂದಿರುವಂತೆ ಮಾಡಲಾಗಿದೆ. ಅಂದರೆ, ಅರ್ಜಿ ತುಂಬುವ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳ ಸ್ಯಾಟ್ಸ್ ನಂಬರ್ ಆಧರಿಸಿ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ತಂತ್ರಾಂಶವು ಲಭ್ಯವಾಗಿಸಿ ಪರಿಶೀಲಿಸಲು ಅವಕಾಶ ಮಾಡಿಕೊಡುತ್ತದೆ. ಒಂದೇ ಸಮಯದಲ್ಲಿ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಯಾಟ್ಸ್ ದತ್ತಾಂಶ ಕೋರಿದಾಗ ತೊಂದರೆ ಉಂಟಾಗಿತ್ತು. ಆರಂಭದ ಹಂತದಲ್ಲಿ ಹೀಗೆ ತೊಂದರೆ ಉಂಟಾಗುವ ಅಂದಾಜು ಇರಲಿಲ್ಲ. ಈಗ ಇದನ್ನು ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ.

    ಒಂದೊಮ್ಮೆ, ಅಭ್ಯರ್ಥಿಗಳ ಸ್ಯಾಟ್ಸ್ ಮಾಹಿತಿಗೆ ಸಂಬಂಧಿಸಿದಂತೆ ಕೆಲವು ದೋಷಗಳಿದ್ದರೆ (ಉದಾಹರಣೆಗೆ ವಿದ್ಯಾರ್ಥಿಯು ಒಂದಕ್ಕಿಂತ ಹೆಚ್ಚಿನ ಬೋರ್ಟ್‌ಗಳಲ್ಲಿ ಓದಿದ್ಧರೂ ಒಂದೇ ಬೋರ್ಟ್‌ನ ಹೆಸರು ದಾಖಲಾಗಿರುವುದು, ಸಿಬಿಎಸ್‌ಸಿ ಓದಿದ್ದರೆ ಐಸಿಎಸ್‌ಇ
    ಅಥವಾ ಸ್ಟೇಟ್ ಬೋರ್ಡ್ ಎಂದಿರುವುದು, ಶಾಲೆಯ ವಿಳಾಸ ತಪ್ಪಾಗಿರುವುದು ಇತ್ಯಾದಿ) ಅಭ್ಯರ್ಥಿಗಳು ಆತಂಕಗೊಳ್ಳುವ ಅಗತ್ಯವಿಲ್ಲ. ವಿದ್ಯಾರ್ಥಿ ಓದಿದ ಶಾಲೆಯ ಹೆಸರು ಹಾಗೂ ಓದಿದ ವರ್ಷ ಸರಿಯಾಗಿದ್ದರೆ ಸ್ಯಾಟ್ಸ್ ಮೂಲಕ ನಿಖರವಾದ ಮಾಹಿತಿ ಲಭ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts